'ಅಫ್ತಾಬ್ ನನ್ನು ಗಲ್ಲಿಗೇರಿಸಿ': ಶ್ರದ್ಧಾ ಹತ್ಯೆ ಆರೋಪಿ ವಿರುದ್ಧ ದೆಹಲಿ ಕೋರ್ಟ್ ನಲ್ಲಿ ಘೋಷಣೆ ಕೂಗಿದ ವಕೀಲರು!

ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಮರಣದಂಡನೆ ವಿಧಿಸುವಂತೆ ದೆಹಲಿಯ ಸಾಕೇತ್ ಕೋರ್ಟ್ ನ ಆವರಣದಲ್ಲಿ ಜಮಾಯಿಸಿದ್ದ ವಕೀಲರು ಘೋಷಣೆಗಳನ್ನು ಕೂಗಿದ್ದಾರೆ.
ವಕೀಲರು
ವಕೀಲರು

ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಮರಣದಂಡನೆ ವಿಧಿಸುವಂತೆ ದೆಹಲಿಯ ಸಾಕೇತ್ ಕೋರ್ಟ್ ನ ಆವರಣದಲ್ಲಿ ಜಮಾಯಿಸಿದ್ದ ವಕೀಲರು ಘೋಷಣೆಗಳನ್ನು ಕೂಗಿದ್ದಾರೆ.

ಭದ್ರತೆಯ ಕಾರಣಗಳಿಂದ ದೆಹಲಿ ಪೊಲೀಸರು ಆರೋಪಿಯನ್ನು ಇಂದು ವಿಡಿಯೋ ಕಾನ್ಫರೇನ್ಸ್ ಮೂಲಕ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಆರೋಪಿಯನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಮ್ಯಾಜಿಸ್ಟ್ರೇಟ್ ಅವಿರಾಲ್ ಶುಕ್ಲಾ ಆದೇಶ ನೀಡಿದ್ದಾರೆ. 

ಇನ್ನು ಅಫ್ತಾಬ್ ನನ್ನು 3 ಗಂಟೆ ಸುಮಾರಿಗೆ ಕೋರ್ಟ್ ಗೆ ಹಾಜರುಪಡಿಸಲಾಗುತ್ತದೆ ಎಂಬ ವಿಚಾರ ತಿಳಿದ ಕೂಡಲೇ 100ಕ್ಕೂ ಹೆಚ್ಚು ವಕೀಲರು ಒಟ್ಟಗೂಡಿ ಆರೋಪಿಗೆ ಮರಣದಂಡನೆ ವಿಧಿಸುವಂತೆ ಘೋಷಣೆಗಳನ್ನು ಕೂಗಿದರು. ಈ ಭದ್ರತೆಯ ಕಾರಣಗಳಿಂದಾಗಿ ಆರೋಪಿಯನ್ನು ಪೊಲೀಸರು ವಿಡಿಯೋ ಕಾನ್ಫರೇನ್ಸ್ ಮೂಲಕ ಹಾಜರುಪಡಿಸಿದ್ದರು.

ಇಪ್ಪತ್ತೆಂಟರ ಹರೆಯದ ಪೂನಾವಾಲಾ ಶ್ರದ್ಧಾಳನ್ನುಕೊಲೆ ಮಾಡಿ. ಬಳಿಕ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದ  ಫ್ರಿಡ್ಜ್‌ನಲ್ಲಿ ಸುಮಾರು ಮೂರು ವಾರಗಳ ಕಾಲ ಇರಿಸಿದ್ದ ಆರೋಪಿ ಮಧ್ಯರಾತ್ರಿಯಲ್ಲಿ ದೇಹದ ತುಂಡುಗಳನ್ನು ಮೆಹ್ರೋಲಿಯ ಅರಣ್ಯದಲ್ಲಿ ಬಿಸಾಡಿದ್ದನು. 

ಕಳೆದ ಮೇ 18ರ ಸಂಜೆ 27 ವರ್ಷದ ಶ್ರದ್ಧಾಳನ್ನು ಅಫ್ತಾಬ್ ಹತ್ಯೆ ಮಾಡಿದ್ದನು. ಈ ಸಂಬಂಧ ತನಿಖೆ ಮುಂದುವರೆದಿದ್ದು, ಪ್ರತಿದಿನ ಭಯಾನಕ ಸತ್ಯಗಳು ಹೊರಬರುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com