ಗುಜರಾತ್ ವಿಧಾನಸಭೆ ಚುನಾವಣೆ: ನ.20ರಿಂದ ಮೂರು ದಿನ ಪ್ರಧಾನಿ ಮೋದಿ ಚುನಾವಣಾ ರ್ಯಾಲಿ
ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸೌರಾಷ್ಟ್ರದಲ್ಲಿ ನವೆಂಬರ್ 20-22 ರಿಂದ ಸತತ ಮೂರು ದಿನಗಳ ಕಾಲ ರ್ಯಾಲಿಗಳನ್ನು ನಡೆಸಲಿದ್ದಾರೆ.
Published: 17th November 2022 11:49 AM | Last Updated: 17th November 2022 11:51 AM | A+A A-

ಪಿಎಂ ನರೇಂದ್ರ ಮೋದಿ ಸಂಗ್ರಹ ಚಿತ್ರ
ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸೌರಾಷ್ಟ್ರದಲ್ಲಿ ನವೆಂಬರ್ 20-22 ರಿಂದ ಸತತ ಮೂರು ದಿನಗಳ ಕಾಲ ರ್ಯಾಲಿಗಳನ್ನು ನಡೆಸಲಿದ್ದಾರೆ. (Gujarat assembly election)
ಈ ರ್ಯಾಲಿಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ನವೆಂಬರ್ 20 ರಂದು ಸೌರಾಷ್ಟ್ರದಲ್ಲಿ ಮೂರು, ನವೆಂಬರ್ 21 ರಂದು ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದಲ್ಲಿ ಎರಡು ಮತ್ತು ನವೆಂಬರ್ 22 ರಂದು ಸೌರಾಷ್ಟ್ರದಲ್ಲಿ ಎರಡು ರ್ಯಾಲಿಗಳನ್ನು ಪ್ರಧಾನಿ ನಡೆಸಲಿದ್ದಾರೆ.
ಪ್ರಧಾನಿಯವರ ರ್ಯಾಲಿಗಳು ಮತ್ತು ರೋಡ್ ಶೋಗಳ ವಿವರವಾದ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಬಿಜೆಪಿಯ ಪ್ರಮುಖ ಮೂಲ ತಿಳಿಸಿದೆ. ಜಿ20 ಶೃಂಗಸಭೆಗಾಗಿ ಪ್ರಧಾನಿ ದೇಶದಿಂದ ಹೊರಗಿದ್ದ ಕಾರಣ, ಅನುಮೋದನೆ ಪಡೆಯಲು ಮತ್ತು ರ್ಯಾಲಿ ಸ್ಥಳಗಳನ್ನು ಅಂತಿಮಗೊಳಿಸಲು ಪಕ್ಷವು ಅವರ ಮರಳುವಿಕೆಗಾಗಿ ಕಾಯುತ್ತಿತ್ತು.
ರಾಜ್ಯದ 182 ವಿಧಾನಸಭಾ ಸ್ಥಾನಗಳ ಪೈಕಿ 48 ಕ್ಷೇತ್ರಗಳು ಈ ಪ್ರದೇಶದಲ್ಲಿದ್ದು, ಡಿಸೆಂಬರ್ 1 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಪಾಟಿದಾರ್ ಚಳವಳಿಯಿಂದ ಸಿಕ್ಕ ಬೆಂಬಲದ ಆಧಾರದ ಮೇಲೆ ಕಾಂಗ್ರೆಸ್ ಇಲ್ಲಿ 28 ಸ್ಥಾನಗಳನ್ನು ಗೆದ್ದಿತ್ತು.
ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ 182 ಸ್ಥಾನಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.