ಭಯದಿಂದ ಬ್ರಿಟೀಷರಿಗೆ ಶರಣಾಗಿದ್ದ ಸಾವರ್ಕರ್; ಗಾಂಧಿ, ನೆಹರುಗೆ ದ್ರೋಹ ಬಗೆದರು: ರಾಹುಲ್ ಗಾಂಧಿ

ಕಾಂಗ್ರೆಸ್ ಮಿತ್ರ ಪಕ್ಷದ ಭಾಗವಾಗಿರುವ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ತಾವು ಸಾವರ್ಕರ್ ವಿಷಯದಲ್ಲಿ ರಾಹುಲ್ ಗಾಂಧಿ ಅವರ ನಿಲುವುಗಳನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟನೆ ನೀಡಿರುವುದರ ನಡುವೆ ರಾಹುಲ್ ಗಾಂಧಿ ಸಾವರ್ಕರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. 
ರಾಹುಲ್ ಗಾಂಧಿ-ಸಾವರ್ಕರ್ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ-ಸಾವರ್ಕರ್ (ಸಂಗ್ರಹ ಚಿತ್ರ)

ಅಕೋಲ: ಕಾಂಗ್ರೆಸ್ ಮಿತ್ರ ಪಕ್ಷದ ಭಾಗವಾಗಿರುವ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ತಾವು ಸಾವರ್ಕರ್ ವಿಷಯದಲ್ಲಿ ರಾಹುಲ್ ಗಾಂಧಿ ಅವರ ನಿಲುವುಗಳನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟನೆ ನೀಡಿರುವುದರ ನಡುವೆ ರಾಹುಲ್ ಗಾಂಧಿ ಸಾವರ್ಕರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. 

ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವ ರಾಹುಲ್ ಗಾಂಧಿ "ವಿನಾಯಕ ದಾಮೋದರ್ ಸಾವರ್ಕರ್ ಬ್ರಿಟೀಷರಿಗೆ ನೆರವಾಗಿದ್ದರು, ಬ್ರಿಟೀಷರಿಗೆ ಕ್ಷಮಾದಾನ ಅರ್ಜಿ ಬರೆದಿದ್ದರು" ಎಂದು ಆರೋಪಿಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಪತ್ರವೊಂದನ್ನು ಪ್ರದರ್ಶಿಸಿ, ಅದು ಸಾವರ್ಕರ್ ಬ್ರಿಟೀಷರಿಗೆ ಬರೆದದ್ದು ಎಂದು ಹೇಳಿದ್ದಾರೆ.

ನಾನು ಆ ಪತ್ರದ ಕೊನೆಯ ಸಾಲುಗಳನ್ನು ಓದುತ್ತೇನೆ ಎಂದು ಹೇಳಿದ ರಾಹುಲ್ ಗಾಂಧಿ, ಆ ಪತ್ರದಲ್ಲಿ "ನಿಮ್ಮ ಅತ್ಯಂತ ವಿಧೇಯ ಸೇವಕನಾಗಿ ಉಳಿಯಲು ನಾನು ಬೇಡಿಕೊಳ್ಳುತ್ತೇನೆ" ಎಂದು ಬರೆದು ಸಾವರ್ಕರ್ ಸಹಿ ಹಾಕಿದ್ದರು ಎಂದು ಹೇಳಿದ್ದಾರೆ.

ಈ ಬಗ್ಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯೆ ನೀಡಿದ್ದು, ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ನಾಚಿಕೆ ಇಲ್ಲದೇ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ. 

"ಸಾವರ್ಕರ್ ಭಯದಿಂದಾಗಿ ಪತ್ರಕ್ಕೆ ಸಹಿ ಹಾಕಿದ್ದರು ಹಾಗೂ ಆ ರೀತಿ ಮಾಡುವ ಮೂಲಕ ಅವರು ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಪಂಡಿತ್ ನೆಹರು ಸೇರಿದಂತೆ ಸ್ವಾತಂತ್ರ್ಯ ಚಳುವಳಿಯಲ್ಲಿದ್ದ ಅನೇಕರಿಗೆ ದ್ರೋಹ ಬಗೆದರು ಎಂಬುದು ತಮ್ಮ ದೃಷ್ಟಿಕೋನವಾಗಿದೆ" ಎಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. 

ಇದೇ ವೇಳೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಬಿಜೆಪಿ ದ್ವೇಷ, ಭಯ, ಹಿಂಸಾಚಾರಗಳನ್ನು ಹರಡುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ವಿಪಕ್ಷ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುತ್ತಿಲ್ಲ ಎಂಬ ಗ್ರಹಿಕೆ ಇದೆ ಇದಕ್ಕೇನು ಹೇಳುತ್ತೀರಿ? ಎಂಬ ಪ್ರಶ್ನೆಗೂ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಇದು ಮೇಲ್ನೋಟದ ಗ್ರಹಿಕೆಯಷ್ಟೇ ಏಕೆಂದರೆ ವಿಪಕ್ಷಗಳು ಸಂಸ್ಥೆಗಳನ್ನು, ಮಾಧ್ಯಮ, ನ್ಯಾಯಾಂಗವನ್ನು ನಿಯಂತ್ರಿಸುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. 

ವಿರೋಧಿಗಳೆಡೆಗೂ ವಿಶ್ವಾಸ, ಸಹಾನುಭೂತಿ ತೋರುವುದು ಭಾರತೀಯ ಮೌಲ್ಯಗಳಾಗಿದೆ. ಅದನ್ನೇ ಈ ಯಾತ್ರೆಯೂ ಮಾಡುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com