ನ.26 ರಂದು ಓಷನ್‌ಸ್ಯಾಟ್-3, 8 ನ್ಯಾನೊ ಉಪಗ್ರಹಗಳನ್ನು ಉಡಾವಣೆ ಮಾಡಲಿರುವ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನ.26 ರಂದು ಶ್ರೀಹರಿಕೋಟಾದಿಂದ ಓಷನ್‌ಸ್ಯಾಟ್-3 ಹಾಗೂ 8 ನ್ಯಾನೋ ಸ್ಯಾಟಲೈಟ್ ಗಳನ್ನು ಪಿಎಸ್ಎಲ್ ವಿ-ಸಿ54/ EOS-06 ಮಿಷನ್ ಅಡಿಯಲ್ಲಿ ಉಡಾವಣೆ ಮಾಡಲಿದೆ.
Published: 20th November 2022 03:31 PM | Last Updated: 20th November 2022 03:31 PM | A+A A-

ಇಸ್ರೋ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನ.26 ರಂದು ಶ್ರೀಹರಿಕೋಟಾದಿಂದ ಓಷನ್‌ಸ್ಯಾಟ್-3 ಹಾಗೂ 8 ನ್ಯಾನೋ ಸ್ಯಾಟಲೈಟ್ ಗಳನ್ನು ಪಿಎಸ್ಎಲ್ ವಿ-ಸಿ54/ EOS-06 ಮಿಷನ್ ಅಡಿಯಲ್ಲಿ ಉಡಾವಣೆ ಮಾಡಲಿದೆ.
ಶನಿವಾರ (ನ.26) ರಂದು ಬೆಳಿಗ್ಗೆ 11.46 ರ ವೇಳೆಗೆ ಉಪಗ್ರಹಗಳು ಉಡಾವಣೆಯಾಗಲಿದೆ ಎಂದು ಇಸ್ರೋ ಸಂಸ್ಥೆ ಹೇಳಿದೆ.
ರಾಕೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೋ "ಇಒಎಸ್-06 (ಓಷನ್‌ಸ್ಯಾಟ್-3) ಜೊತೆಗೆ 8 ನ್ಯಾನೋ ಸ್ಯಾಟಲೈಟ್ ಗಳನ್ನು ಹಾಗೂ ಧ್ರುವ್ ಸ್ಪೇಸ್ ನಿಂದ ಥೈಬೋಲ್ಟ್ ಇಬ್ಬರು ಹಾಗೂ ಆಸ್ಟ್ರೋಕಾಸ್ಟ್ - ಸ್ಪೇಸ್ ಫ್ಲೈಟ್ USA ನಿಂದ ನಾಲ್ಕು ಮಂದಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.