ಪಂಜಾಬ್: ಅಂತರಾಷ್ಟ್ರೀಯ ಗಡಿ ಬಳಿ 2 ಡ್ರೋನ್ ಪತ್ತೆ, ಬಿಎಸ್‌ಎಫ್ ಗುಂಡಿನ ದಾಳಿ ನಂತರ ಪಾಕ್‌ಗೆ ವಾಪಸ್
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಕಸ್ಸೋವಾಲ್ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಸಮೀಪ ಪಾಕಿಸ್ತಾನದ ಎರಡು ಡ್ರೋನ್ ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Published: 20th November 2022 03:31 PM | Last Updated: 20th November 2022 03:31 PM | A+A A-

ಸಾಂದರ್ಭಿಕ ಚಿತ್ರ
ಗುರುದಾಸ್‌ಪುರ: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಕಸ್ಸೋವಾಲ್ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಸಮೀಪ ಪಾಕಿಸ್ತಾನದ ಎರಡು ಡ್ರೋನ್ ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ಯೋಧರು ಗುಂಡಿನ ದಾಳಿ ನಡೆಸಿದ ನಂತರ ಮಾನವರಹಿತ ಡ್ರೋನ್ ಗಳು ಪಾಕಿಸ್ತಾನಕ್ಕೆ ಹಿಂತಿರುಗಿದವು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಶ್ರೀನಗರದಲ್ಲಿ ಮೂವರು ಹೈಬ್ರಿಡ್ ಉಗ್ರರ ಬಂಧನ: ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು ವಶಕ್ಕೆ
ಬಿಎಸ್‌ಎಫ್ ಸಿಬ್ಬಂದಿ ಈ ಡ್ರೋನ್‌ಗಳ ಮೇಲೆ ಕನಿಷ್ಠ 96 ಸುತ್ತು ಗುಂಡು ಹಾರಿಸಿದ್ದಾರೆ ಮತ್ತು ಐದು ಇಲ್ಯುಮಿನೇಷನ್ ಬಾಂಬ್‌ಗಳನ್ನು ಸಹ ಬಳಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.