ಫಿಫಾ ವಿಶ್ವಕಪ್ : ಕತಾರ್ ನಲ್ಲಿ ವಿವಾದಿತ ಇಸ್ಲಾಂ ಧರ್ಮ ಪ್ರಚಾರ ಜಾಕಿರ್ ನಾಯಕ್  ಧಾರ್ಮಿಕ ಉಪನ್ಯಾಸ?

ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷ ಭಾಷಣದ ಆರೋಪ ಎದುರಿಸುತ್ತಿರುವ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್,  ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ವೇಳೆ ಧಾರ್ಮಿಕ ಉಪನ್ಯಾಸಗ ನೀಡಲು ಸಿದ್ಧರಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತಿಳಿಸಿವೆ.
ಜಾಕಿರ್ ನಾಯ್ಕ್
ಜಾಕಿರ್ ನಾಯ್ಕ್

ನವದೆಹಲಿ: ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷ ಭಾಷಣದ ಆರೋಪ ಎದುರಿಸುತ್ತಿರುವ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್,  ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ವೇಳೆ ಧಾರ್ಮಿಕ ಉಪನ್ಯಾಸಗ ನೀಡಲು ಸಿದ್ಧರಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತಿಳಿಸಿವೆ.

ಸದ್ಯ ಕತಾರ್ ನಲ್ಲಿರುವ  ಜಾಕಿರ್ ನಾಯ್ಕ್,  ಪಂದ್ಯಾವಳಿಯುದ್ದಕ್ಕೂ ಅನೇಕ ಧಾರ್ಮಿಕ ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದು  ಸರ್ಕಾರಿ ಸ್ವಾಮ್ಯದ ಕ್ರೀಡಾ ಚಾನೆಲ್ ಅಲ್ಕಾಸ್‌ನ ನಿರೂಪಕ ಫೈಸಲ್ ಅಲ್ಹಜ್ರಿ ಶನಿವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ದೋಹಾದಿಂದ ಸುಮಾರು 35 ಕಿಮೀ ದೂರದಲ್ಲಿರುವ ಅಲ್ ಬೇತ್ ಸ್ಟೇಡಿಯಂನಲ್ಲಿ ಫಿಫಾ ವಿಶ್ವಕಪ್ ಪಂದ್ಯಗಳು ನಡೆಯಲಿವೆ.  ಅಲ್ಹಾಜ್ರಿ ಪ್ರಕಾರ ಭಾರತದಿಂದ ಪರಾರಿಯಾಗಿರುವ ನಾಯಕ್,  ಪಂದ್ಯಾವಳಿಯ ಉದ್ದಕ್ಕೂ ಅನೇಕ ಧಾರ್ಮಿಕ ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದು ವರದಿಯಾಗಿದೆ.

ಗೃಹ ಸಚಿವಾಲಯ ಮಾರ್ಚ್‌ನಲ್ಲಿ ಜಾಕಿರ್ ನಾಯ್ಕ್  ಸ್ಥಾಪಿಸಿದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಅನ್ನು ಕಾನೂನುಬಾಹಿರ ಸಂಘ ಎಂದು ಘೋಷಿಸಿ ಐದು ವರ್ಷಗಳ ಕಾಲ ನಿಷೇಧಿಸಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com