ಗುಜರಾತ್ ಚುನಾವಣೆ: ಆರು ಬಾರಿಯ ಶಾಸಕ ಸೇರಿದಂತೆ ಬಿಜೆಪಿಯ 12 ಬಂಡಾಯ ನಾಯಕರು ಅಮಾನತು

ಗುಜರಾತ್‌ನ ಆಡಳಿತಾರೂಢ ಪಕ್ಷ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ  ಸ್ವತಂತ್ರ ಅಭ್ಯರ್ಥಿಗಳಾಗಿ  ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ  6 ​ಬಾರಿಯ ಶಾಸಕ ಮಧು ಶ್ರೀವಾಸ್ತವ್, ಇಬ್ಬರು ಮಾಜಿ ಶಾಸಕರು ಸೇರಿದಂತೆ ಪಕ್ಷದ 12 ಬಂಡಾಯ ನಾಯಕರನ್ನು  ಅಮಾನತುಗೊಳಿಸಿದೆ .
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗಾಂಧಿನಗರ: ಗುಜರಾತ್‌ನ ಆಡಳಿತಾರೂಢ ಪಕ್ಷ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ  6 ​ಬಾರಿಯ ಶಾಸಕ ಮಧು ಶ್ರೀವಾಸ್ತವ್, ಇಬ್ಬರು ಮಾಜಿ ಶಾಸಕರು ಸೇರಿದಂತೆ ಪಕ್ಷದ 12 ಬಂಡಾಯ ನಾಯಕರನ್ನು  ಅಮಾನತುಗೊಳಿಸಿದೆ .

ಡಿಸೆಂಬರ್ 1 ರಂದು ನಡೆಯಲಿರುವ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಏಳು ಬಿಜೆಪಿ ನಾಯಕರನ್ನು ಅಮಾನತುಗೊಳಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಇದೀಗ ಡಿಸೆಂಬರ್ 5 ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುತ್ತಿರುವ ಇನ್ನೂ 12 ನಾಯಕರನ್ನು ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಅಮಾನತುಗೊಳಿಸಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಪ್ರಕಟಣೆ ತಿಳಿಸಿದೆ.

ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 93 ಸ್ಥಾನಗಳಿಗೆ ನಾಮಪತ್ರ ಹಿಂಪಡೆಯಲು ನವೆಂಬರ್ 21 ಕೊನೆಯ ದಿನಾಂಕವಾಗಿತ್ತು. ಬಿಜೆಪಿಯ ಯಾವುದೇ ಬಂಡುಕೋರರು ಚುನಾವಣಾ ಸ್ಪರ್ಧೆಯಿಂದ ಹೊರಗುಳಿಯಲಿಲ್ಲ, ಇದರಿಂದ ಪಕ್ಷದಿಂದ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. 

ಈ ನಾಯಕರು ಇದೀಗ ಉತ್ತರ ಮತ್ತು ಮಧ್ಯ ಗುಜರಾತಿನ 11 ಸ್ಥಾಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಹೋರಾಟ ನಡೆಸಲಿದ್ದಾರೆ. ಹಾಲಿ ಶಾಸಕ ಮಧು ಶ್ರೀವಾಸ್ತವ್ ಸೇರಿದಂತೆ 12 ಬಂಡಾಯ ನಾಯಕರು ಚುನಾವಣಾ ಕಣದಲ್ಲಿದ್ದು, ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com