ದೇಶದೊಳಗೆ ನುಸುಳಲು ಗಡಿಯಲ್ಲಿ 160 ಉಗ್ರರ ಹೊಂಚು: ಉನ್ನತ ಸೇನಾ ಕಮಾಂಡರ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯ ಸುಮಾರು 300 ಉಗ್ರರಿದ್ದು, ಇನ್ನೂ ಇತರ 160 ಉಗ್ರರು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯಿಂದ ದೇಶದೊಳಲು ನುಸುಳಲು ಹೊಂಚು ಹಾಕಿದ್ದಾರೆ ಎಂದು ಉನ್ನತ ಸೇನಾ ಕಮಾಂಡರ್ ಮಂಗಳವಾರ ತಿಳಿಸಿದ್ದಾರೆ.
ಆದಾಗ್ಯೂ, 2019 ರ ಆಗಸ್ಟ್‌ನಲ್ಲಿ ಸಂವಿಧಾನ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿ ಪ್ರಮುಖ ಬದಲಾವಣೆಗೆ ಒಳಗಾಗಿದೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ ಎಂದು ಉತ್ತರ ಕಮಾಂಡ್, ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 300 ಭಯೋತ್ಪಾದಕರು ಇದ್ದಾರೆ ಆದರೆ ಅವರು ಯಾವುದೇ ಕ್ರಮ ಕೈಗೊಳ್ಳದಂತೆ ಮಾಡಿದ್ದೇವೆ ಎಂದು ಸೇನಾ ಕಮಾಂಡರ್ ಸುದ್ದಿಗಾರರಿಗೆ ತಿಳಿಸಿದರು. ಅಂಕಿಅಂಶಗಳ ಪ್ರಕಾರ, 82 ಪಾಕಿಸ್ತಾನಿ ಭಯೋತ್ಪಾದಕರು ಮತ್ತು 53 ಸ್ಥಳೀಯ ಭಯೋತ್ಪಾದಕರು ಒಳನಾಡಿನಲ್ಲಿ ಸಕ್ರಿಯರಾಗಿದ್ದಾರೆ ಎಂದು ಅವರು ತಿಳಿಸಿದರು.
ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯುವ ಸುಳಿವು ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಲೆಫ್ಟಿನೆಂಟ್ ಜನರಲ್ ದ್ವಿವೇದಿ, ಈ ವಿಷಯದ ಬಗ್ಗೆ ಸಂಸತ್ತಿನ ನಿರ್ಣಯ ಅಸ್ತಿತ್ವದಲ್ಲಿದ್ದು, ಆದ್ದರಿಂದ ಇದು ಹೊಸದೇನಲ್ಲ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ