ಮಹಾರಾಷ್ಟ್ರದ ಯಾವುದೇ ಗ್ರಾಮ ಕರ್ನಾಟಕಕ್ಕೆ ಹೋಗುವ ಪ್ರಶ್ನೆಯೇ ಇಲ್ಲ: ಮಹಾ ಡಿಸಿಎಂ ಫಡ್ನವೀಸ್

ಮಹಾರಾಷ್ಟ್ರದ ಯಾವುದೇ ಗ್ರಾಮ ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸಿಲ್ಲ ಮತ್ತು ಯಾವುದೇ ಗಡಿ ಗ್ರಾಮವು "ಎಲ್ಲಿಯೂ" ಹೋಗುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು...
ದೇವೇಂದ್ರ ಫಡ್ನವೀಸ್
ದೇವೇಂದ್ರ ಫಡ್ನವೀಸ್

ನಾಗ್ಪುರ/ಮುಂಬೈ: ಮಹಾರಾಷ್ಟ್ರದ ಯಾವುದೇ ಗ್ರಾಮ ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸಿಲ್ಲ ಮತ್ತು ಯಾವುದೇ ಗಡಿ ಗ್ರಾಮವು "ಎಲ್ಲಿಯೂ" ಹೋಗುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬುಧವಾರ ಹೇಳಿದ್ದಾರೆ.

ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳು ಕರ್ನಾಟಕದೊಂದಿಗೆ ವಿಲೀನಗೊಳಿಸಲು ಈ ಹಿಂದೆ ನಿರ್ಣಯ ಅಂಗೀಕರಿಸಿದ್ದವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದ್ದರು.

ಕರ್ನಾಟಕ ಸರ್ಕಾರ ನೀರು ಒದಗಿಸುವ ಮೂಲಕ ಅವರಿಗೆ ಸಹಾಯ ಮಾಡಲು ಯೋಜನೆಗಳನ್ನು ರೂಪಿಸಿದೆ ಮತ್ತು ಜತ್ ಗ್ರಾಮಗಳ ಪ್ರಸ್ತಾಪವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದರು.

ಇಂದು ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಫಡ್ವವೀಸ್ ಅವರು, "ಈ ಗ್ರಾಮಗಳು 2012 ರಲ್ಲಿ ನೀರಿನ ಕೊರತೆಯ ಸಮಸ್ಯೆಯ ಬಗ್ಗೆ ನಿರ್ಣಯವನ್ನು ಮಂಡಿಸಿದ್ದವು. ಪ್ರಸ್ತುತ, ಯಾವುದೇ ಗ್ರಾಮಗಳು ಯಾವುದೇ ನಿರ್ಣಯವನ್ನು ಮಂಡಿಸಿಲ್ಲ" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಾನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಾವು ಈಗ ಆ ಯೋಜನೆಗೆ ಅನುಮೋದನೆ ನೀಡಲಿದ್ದೇವೆ. ಬಹುಶಃ ಕೋವಿಡ್ ಕಾರಣ ಮತ್ತು ಹಿಂದಿನ(ಉದ್ಧವ್ ಠಾಕ್ರೆ ನೇತೃತ್ವದ) ಸರ್ಕಾರವು ಅದನ್ನು ಅನುಮೋದಿಸಲು ಸಾಧ್ಯವಾಗಲಿ ಎಂದು ಫಡ್ನವಿಸ್ ಹೇಳಿದ್ದಾರೆ.

ಪ್ರಸ್ತುತ, ಯಾವುದೇ ಗ್ರಾಮಗಳು ಅಂತಹ(ಕರ್ನಾಟಕದೊಂದಿಗೆ ವಿಲೀನ) ಬೇಡಿಕೆಯನ್ನು ಎತ್ತಿಲ್ಲ, ಇದು 2012ರ ಬೇಡಿಕೆಯಾಗಿದೆ. ಗಡಿಯಲ್ಲಿ ಮರಾಠಿ ಮಾತನಾಡುವ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸುವ ಪ್ರಯತ್ನಗಳು ಮುಂದುವರೆದಿವೆ. ಆದರೆ ಯಾವುದೇ ಗ್ರಾಮ ಕರ್ನಾಟಕಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಮಹಾ ಡಿಸಿಎಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com