ಪತಿ ಅಥವಾ ಕುಟುಂಬದೊಂದಿಗೆ ಬರುವ ಮಹಿಳೆಯರ ಪ್ರವೇಶವನ್ನು ನಿಷೇಧಿಸಿಲ್ಲ: ಜಾಮಾ ಮಸೀದಿ ಪಿಆರ್ ಒ

ರಾಷ್ಟ್ರ ರಾಜಧಾನಿ ದೆಹಲಿಯ ಜಾಮಾ ಮಸೀದಿಗೆ ಗುಂಪಾಗಿ ಅಥವಾ ಒಂಟಿಯಾಗಿ ಬರುವ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ, ಕುಟುಂಬದೊಂದಿಗೆ ಬರುವ  ಹೆಣ್ಣು ಮಕ್ಕಳು, ಮಹಿಳೆಯರಿಗೆ ಯಾವುದೇ ನಿಷೇಧವಿಲ್ಲ ಎಂದು ಮಸೀದಿಯ ಪಿಆರ್ ಒ ಸಬಿ ಉಲ್ಲಾಖಾನ್ ತಿಳಿಸಿದ್ದಾರೆ.
ಜಾಮಾ ಮಸೀದಿ ಪಿಆರ್ ಒ ಸಬಿಉಲ್ಲಾಖಾನ್
ಜಾಮಾ ಮಸೀದಿ ಪಿಆರ್ ಒ ಸಬಿಉಲ್ಲಾಖಾನ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜಾಮಾ ಮಸೀದಿಗೆ ಗುಂಪಾಗಿ ಅಥವಾ ಒಂಟಿಯಾಗಿ ಬರುವ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ, ಕುಟುಂಬದೊಂದಿಗೆ ಬರುವ  ಹೆಣ್ಣು ಮಕ್ಕಳು, ಮಹಿಳೆಯರಿಗೆ ಯಾವುದೇ ನಿಷೇಧವಿಲ್ಲ ಎಂದು ಮಸೀದಿಯ ಪಿಆರ್ ಒ ಸಬಿ ಉಲ್ಲಾಖಾನ್ ತಿಳಿಸಿದ್ದಾರೆ.

ಗುರುವಾರ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಮಹಿಳೆ ಒಂಟಿಯಾಗಿ ಬಂದಾಗ ಅನುಚಿತ ಕೃತ್ಯಗಳನ್ನು ಮಾಡಲಾಗುತ್ತದೆ. ವಿಡಿಯೋ ಮಾಡಲಾಗುತ್ತದೆ. ಆದ್ದರಿಂದ ಇವೆಲ್ಲಾವನ್ನು ತಡೆಗಟ್ಟಲು ಅಂತಹ ಮಹಿಳೆಯರ 
ಪ್ರವೇಶವನ್ನು ನಿಷೇಧಿಸಲಾಗಿದೆ. ಧಾರ್ಮಿಕ ಸ್ಥಳಗಳನ್ನು ಭೇಟಿ ಮಾಡುವ ಸ್ಥಳಗಳನ್ನಾಗಿ ಮಾಡಬಾರದು. ಕುಟುಂಬದೊಂದಿಗೆ ಬರುವ ಅಥವಾ ವಿವಾಹಿತ ಮಹಿಳೆಯರಿಗೆ ಇಂತಹ ಯಾವುದೇ ನಿಷೇಧ ಇರುವುದಿಲ್ಲ ಎಂದರು. 

ಜಾಮಾ ಮಸೀದಿಗೆ  ಗುಂಪಾಗಿ ಬರುವ ಹೆಣ್ಣು ಮಕ್ಕಳ ಪ್ರವೇಶವನ್ನು ನಿಷೇಧಿಸಿದ ನಂತರ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾಮಿ ಮಾಲಿವಾಳ್ ನೋಟಿಸ್ ಹೊರಡಿಸಿದ್ದರು. ಈ ರೀತಿ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ಹಕ್ಕು ಯಾರಿಗೂ ಇಲ್ಲ. ಜಾಮಾ ಮಸೀದಿಗೆ ಮಹಿಳೆಯರ ನಿಷೇಧ ನಿರ್ಧಾರ ಖಂಡಿತವಾಗಿ ತಪ್ಪು ಎಂದು ಟ್ವೀಟ್ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com