ಭಾರತ್ ಜೋಡೋ ಯಾತ್ರೆ ವೇಳೆ ನೆಲಕ್ಕೆ ಬಿದ್ದ ದಿಗ್ವಿಜಯ್ ಸಿಂಗ್; ಕಳಪೆ ರಸ್ತೆ ಕಾರಣ ಎಂದ ಕಾಂಗ್ರೆಸ್
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಮಧ್ಯ ಪ್ರದೇಶದ ಖಾರ್ಗೋನ್ ಜಿಲ್ಲೆಯ ಬರ್ವಾಹಾ ಬಳಿ ಶನಿವಾರ ನೆಲಕ್ಕೆ ಬಿದ್ದ ಘಟನೆ ನಡೆದಿದ್ದು,...
Published: 26th November 2022 05:15 PM | Last Updated: 26th November 2022 05:15 PM | A+A A-

ದಿಗ್ವಿಜಯ್ ಸಿಂಗ್
ಖಾರ್ಗೋನ್: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಮಧ್ಯ ಪ್ರದೇಶದ ಖಾರ್ಗೋನ್ ಜಿಲ್ಲೆಯ ಬರ್ವಾಹಾ ಬಳಿ ಶನಿವಾರ ನೆಲಕ್ಕೆ ಬಿದ್ದ ಘಟನೆ ನಡೆದಿದ್ದು, ರಸ್ತೆಯ ದುಸ್ಥಿತಿ ವಿರೋಧ ಪಕ್ಷ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ
ಯಾತ್ರೆಯ ನಡುವೆ ಚಹಾ ವಿರಾಮದ ವೇಳೆ ರಸ್ತೆಬದಿಯ ರೆಸ್ಟೋರೆಂಟ್‌ಗೆ ಹೋಗುತ್ತಿದ್ದಾಗ ಸಿಂಗ್ ಕುಸಿದು ಬಿದ್ದಿರು. ತಕ್ಷಣವೇ ಅವರನ್ನು ಸುತ್ತುವರೆದ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಸಹಾಯ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
"ಭಾರತ್ ಜೋಡೋ ಯಾತ್ರೆಯ ವೇಳೆ ದಿಗ್ವಿಜಯ ಸಿಂಗ್ ಇದುವರೆಗೆ ನಾಲ್ಕು ಬಾರಿ ನೆಲಕ್ಕೆ ಬಿದ್ದಿದ್ದಾರೆ. ಆದರೆ, ಅವರು ಮಧ್ಯ ಪ್ರದೇಶದಲ್ಲಿ ಮೊದಲ ಬಾರಿಗೆ ಬಿದ್ದಿದ್ದು, ಇದಕ್ಕೆ ಹದಗೆಟ್ಟ ರಸ್ತೆಗಳೆ ಕಾರಣ" ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಧ್ಯಮ ಉಸ್ತುವಾರಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಇದನ್ನು ಓದಿ: ಒಟ್ಟೊಟ್ಟಿಗೆ ನಡೆದಾಗ ನಮ್ಮ ಹೆಜ್ಜೆಗಳು ಬಲವಾಗಿರುತ್ತವೆ: ಬಿಜೆಪಿ ಭದ್ರಕೋಟೆಯಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ!
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿದ ಜೈರಾಮ್ ರಮೇಶ್ ಅವರು, ಅಮೆರಿಕದ ವಾಷಿಂಗ್ಟನ್ ಡಿಸಿಗಿಂತ ಮಧ್ಯ ಪ್ರದೇಶದ ರಸ್ತೆಗಳು ಉತ್ತಮವಾಗಿವೆ ಎಂದು ಆಡಳಿತಾರೂಢ ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ.
"ಮಧ್ಯಪ್ರದೇಶದ ರಸ್ತೆಗಳು ಕಿಲ್ಲರ್ ರಸ್ತೆಗಳಾಗಿವೆ ಮತ್ತು ವಾಷಿಂಗ್ಟನ್ ಡಿಸಿಗಿಂತ ಉತ್ತಮವಾಗಿಲ್ಲ. ಕೆಟ್ಟ ರಸ್ತೆಗಳಿಂದಾಗಿ ರಾಜ್ಯದಲ್ಲಿ ಮೂರು ಬಾರಿ ಬೀಳದಂತೆ ನಾನು ನನ್ನನ್ನು ಉಳಿಸಿಕೊಂಡಿದ್ದೇನೆ" ಎಂದು ರಮೇಶ್ ಹೇಳಿದ್ದಾರೆ.
ಇನ್ನು ಘಟನೆಯ ವಿಡಿಯೋ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ನರೇಂದ್ರ ಸಲೂಜಾ, ದಿಗ್ವಿಜಯ ಸಿಂಗ್ ಅವರು ಹದಗೆಟ್ಟ ರಸ್ತೆಯಿಂದಾಗಿ ಬಿದ್ದಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ತಳ್ಳುವಿಕೆಯಿಂದ ಬಿದ್ದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.