ದೆಹಲಿ ಸಚಿವ ಸತ್ಯೇಂದ್ರ ಜೈನ್ ಗೆ ಸಂಬಂಧಪಟ್ಟ ಮತ್ತೊಂದು ವಿಡಿಯೊ ಬಹಿರಂಗ: ಅದರಲ್ಲೇನಿದೆ?

ದೆಹಲಿ ಸಚಿವ ಸತ್ಯೇಂದ್ರ ಜೈನ್ ಗೆ ಸಂಬಂಧಪಟ್ಟ ಮತ್ತೊಂದು ಸಿಸಿಟಿವಿ ದೃಶ್ಯಾವಳಿಯ ವಿಡಿಯೊ ಹೊರಬಿದ್ದಿದೆ. ತಿಹಾರ್ ಜೈಲಿನಲ್ಲಿರುವ ಅವರು ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಸೇರಿದಂತೆ ಇನ್ನು ಕೆಲವರ ಜೊತೆ ಬೆಡ್ ಮೇಲೆ ಮಲಗಿಕೊಂಡು ಸಂಭಾಷಣೆ ನಡೆಸುತ್ತಿದ್ದಾರೆ.
ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಜೊತೆ ಸಚಿವ ಸತ್ಯೇಂದ್ರ ಜೈನ್ ಮಾತುಕತೆ
ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಜೊತೆ ಸಚಿವ ಸತ್ಯೇಂದ್ರ ಜೈನ್ ಮಾತುಕತೆ

ನವದೆಹಲಿ: ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ತಿಹಾರ್ ಜೈಲಿನೊಳಗೆ ವಿಶೇಷ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ನೀಡುವ ಹಲವು ಸಿಸಿಟಿವಿ ದೃಶ್ಯಾವಳಿಗಳು ಒಂದರ ಹಿಂದೊಂದು ಬರುತ್ತಿರುವುದರ ಮಧ್ಯೆ, ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅವರನ್ನು ತಮ್ಮ ಜೈಲಿನ ಕೊಠಡಿಯೊಳಗೆ ಭೇಟಿಯಾಗುತ್ತಿರುವುದನ್ನು ತೋರಿಸುವ ಹೊಸ ವೀಡಿಯೊ ಶನಿವಾರ ಹೊರಬಿದ್ದಿದೆ.

ಜೈಲಿನಲ್ಲಿ ಮಸಾಜ್ ಮತ್ತು ಇತರ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾದ ಸೋರಿಕೆಯಾದ ವೀಡಿಯೊಗಳಿಂದ ರಾಜಕೀಯ ಎದುರಾಳಿಗಳ ಕೆಂಗಣ್ಣಿಗೆ ಬಿದ್ದಿರುವ ಜೈನ್, ಮಾಧ್ಯಮಗಳಿಗೆ ತನ್ನ ಸೆಲ್‌ನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು "ಸೋರಿಕೆ" ಮಾಡುವುದನ್ನು ನಿಲ್ಲಿಸುವಂತೆ ದೆಹಲಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. 

ಆಮ್ ಆದ್ಮಿ ಪಕ್ಷದ (AAP) ನಾಯಕ ಜೈಲು ಅಧೀಕ್ಷಕರನ್ನು ಭೇಟಿ ಮಾಡಿದ ವೀಡಿಯೊವನ್ನು ಕೆಲವು ಬಿಜೆಪಿ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪ್ರಾಮಾಣಿಕ ಸಚಿವ ಜೈನ್ ಅವರ ಈ ಹೊಸ ವೀಡಿಯೊವನ್ನು ನೋಡಿ, ರಾತ್ರಿ 8 ಗಂಟೆಗೆ ಜೈಲು ಸೂಪರಿಂಟೆಂಡೆಂಟ್ ಸಚಿವರನ್ನು ಭೇಟಿ ಮಾಡುತ್ತಾರೆ ಎಂದು ದೆಹಲಿ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ಹರೀಶ್ ಖುರಾನಾ ಟ್ವೀಟ್ ಮಾಡಿ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಜಾರಿ ನಿರ್ದೇಶನಾಲಯ (ED) ದಾಖಲಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಮೇ 31 ರಿಂದ ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಅವರಿಗೆ ವಿಶೇಷ ಸೌಲಭ್ಯ ನೀಡುತ್ತಿದ್ದ ಆರೋಪದ ಮೇಲೆ ತಿಹಾರ್ ಜೈಲು ಅಧೀಕ್ಷಕರನ್ನು ಅಮಾನತುಗೊಳಿಸಲಾಗಿತ್ತು.

ಅಮಾನತುಗೊಂಡ ಅಧಿಕಾರಿ ಅಜಿತ್ ಕುಮಾರ್ ಜೈಲು ಸಂಕೀರ್ಣದಲ್ಲಿ ಜೈಲು ಸಂಖ್ಯೆ 7 ರ ಸೂಪರಿಂಟೆಂಡೆಂಟ್ ಆಗಿದ್ದು, ಡ್ಯಾನಿಕ್ಸ್ ಕೇಡರ್‌ಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ.ಸತ್ಯೇಂದ್ರ ಜೈನ್ ತನ್ನ ಸೆಲ್‌ನಲ್ಲಿ ಬೆನ್ನ ಹಿಂದೆ ಮತ್ತು ಕಾಲು ಮಸಾಜ್ ಮಾಡಿಸಿಕೊಳ್ಳುವುದನ್ನು ಕೆಲವು ದಾಖಲೆಗಳನ್ನು ಓದುವುದು ಮತ್ತು ಹಾಸಿಗೆಯ ಮೇಲೆ ಮಲಗಿರುವಾಗ ಸಂದರ್ಶಕರೊಂದಿಗೆ ಮಾತನಾಡುವುದನ್ನು ಹಿಂದಿನ ವೀಡಿಯೊಗಳಲ್ಲಿ ಕಾಣಬಹುದು.

ಮಿನರಲ್ ವಾಟರ್ ಬಾಟಲಿಗಳು ಮತ್ತು ರಿಮೋಟ್ ಸಹ ಕಂಡುಬರುತ್ತದೆ. ಒಂದು ವೀಡಿಯೊದಲ್ಲಿ, ಅವರು ಕುರ್ಚಿಯ ಮೇಲೆ ಕುಳಿತುಕೊಂಡು ತಲೆ ಮಸಾಜ್ ಮಾಡುತ್ತಿರುವುದು ಕಂಡುಬಂದಿದೆ.

ಅತ್ಯಾಚಾರ ಆರೋಪಿಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದರು. ಜೈನ್ ಅವರು ನಿಯಮಗಳಿಗೆ ವಿರುದ್ಧವಾಗಿ ಜೈಲಿನೊಳಗೆ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂಬ ಆರೋಪವೂ ಅವರಲ್ಲಿತ್ತು.ಡಿಸೆಂಬರ್ 4 ರಂದು ನಡೆಯಲಿರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಮುಂಚಿತವಾಗಿ ದೆಹಲಿ ಮುಖ್ಯಮಂತ್ರಿ ಮತ್ತು ಅದರ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಇಮೇಜ್ ನ್ನು ಕೆಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸುತ್ತಿದೆ. 

ಮಸಾಜ್ ವೀಡಿಯೊಗಳಲ್ಲಿ, ಆಪ್ ಪಕ್ಷವು ಸತ್ಯೇಂದ್ರ ಜೈನ್ ಜೈಲಿನಲ್ಲಿ ಫಿಸಿಯೋಥೆರಪಿ ಪಡೆಯುತ್ತಿದ್ದಾರೆ ಎಂದಿದೆ. ಸತ್ಯೇಂದ್ರ ಜೈನ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆ ನಡೆಸುತ್ತಿರುವ ಇಡಿ, ತಿಹಾರ್ ಜೈಲಿನಲ್ಲಿ ಅವರಿಗೆ "ವಿಶೇಷ ಚಿಕಿತ್ಸೆ" ಪಡೆಯುತ್ತಿದ್ದಾರೆ ಎಂದು ನ್ಯಾಯಾಲಯದಲ್ಲಿ ಹೇಳಿತ್ತು. ಆರೋಪವನ್ನು ರುಜುವಾತುಪಡಿಸಲು ಅದು ಸಿಸಿಟಿವಿ ದೃಶ್ಯಗಳನ್ನು ಸಹ ನೀಡಿದೆ. ಜೈನ್‌ಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿರುವ ಸಿಸಿಟಿವಿ ದೃಶ್ಯಾವಳಿಗಳ ಸೋರಿಕೆಯಲ್ಲಿ ಯಾವುದೇ ಪಾತ್ರವಿಲ್ಲ ಎಂದು ಸಂಸ್ಥೆ ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com