ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿರುವುದು ನಮಗೆ ಒಂದು ಸುವರ್ಣಾವಕಾಶ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನ 95 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದೆ. ಇದು ನಮಗೆ ಒಂದು ಸುವರ್ಣಾವಕಾಶವಾಗಿದೆ ಎಂದು ಹೇಳಿದರು.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನ 95 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದೆ. ಇದು ನಮಗೆ ಒಂದು ಸುವರ್ಣಾವಕಾಶವಾಗಿದೆ ಎಂದು ಹೇಳಿದರು.

ದೇಶದಾದ್ಯಂತ ಜನರು ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿರುವುದಕ್ಕೆ ಎಷ್ಟು ಹೆಮ್ಮೆ ಇದೆ ಎಂದು ನನಗೆ ಪತ್ರ ಬರೆದಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದ ಸಂದರ್ಭದಲ್ಲಿ ಭಾರತವು ಈ ಜವಾಬ್ದಾರಿಯನ್ನು ಪಡೆದುಕೊಂಡಿದೆ ಎಂದು ಹೇಳಿದರು.

G20 ಅಧ್ಯಕ್ಷ ಸ್ಥಾನವು ನಮಗೆ ಒಂದು ಅವಕಾಶವಾಗಿದೆ. ನಾವು ಜಾಗತಿಕ ಒಳಿತಿಗಾಗಿ ಗಮನಹರಿಸಬೇಕು, ಅದು ಶಾಂತಿ, ಏಕತೆ ಅಥವಾ ಸುಸ್ಥಿರ ಅಭಿವೃದ್ಧಿಯ ವಿಷಯಗಳಿಗೆ ಸಂಬಂಧಿಸಿದ್ದಾಗಿರಬೇಕು. ಈ ವಿಷಯಗಳಿಗೆ ಸಂಬಂಧಿಸಿದ ಸವಾಲುಗಳಿಗೆ ಭಾರತವು ಪರಿಹಾರವನ್ನು ಹೊಂದಿದೆ. ನಾವು 'ಒಂದು ಭೂಮಿ,'ಒಂದು ಕುಟುಂಬ, ಒಂದು ಭವಿಷ್ಯ,  ಎಂಬ ಧ್ಯೇಯವನ್ನು  ನೀಡಿದ್ದೇವೆ ಎಂದರು.

 
ಈ ವರ್ಷದ ಡಿಸೆಂಬರ್ 1 ರಿಂದ, ಭಾರತವು ಒಂದು ವರ್ಷದವರೆಗೆ G20 ಅಧ್ಯಕ್ಷ ಸ್ಥಾನವನ್ನು ವಹಿಸುತ್ತದೆ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಸುರಕ್ಷಿತಗೊಳಿಸುವ ಗುರಿಯನ್ನು ಹೊಂದಿರುವ 200 ಕ್ಕೂ ಹೆಚ್ಚು ಸಭೆಗಳ ಅಧ್ಯಕ್ಷತೆಯನ್ನು ವಹಿಸುತ್ತದೆ. ಜಾಗತಿಕ ಒಳಿತನ್ನು ಮತ್ತು ಕಲ್ಯಾಣವನ್ನು ಕೇಂದ್ರೀಕರಿಸುವ ಮೂಲಕ ಭಾರತವು ಜಿ20 ನಾಯಕತ್ವದ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು. 

ಇಸ್ರೋ ಸಾಧನೆಗೆ ಪ್ರಧಾನಿ ಶ್ಲಾಘನೆ: ಪ್ರಧಾನಿ ಮೋದಿ ಅವರು ಇಸ್ರೋದ ಸಾಧನೆಗಳನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು. ರಾಕೆಟ್ 'ವಿಕ್ರಮ್ ಎಸ್'(Vikram S) ನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ್ದು ನಮ್ಮ ದೇಶದ ಸಾಧನೆ. ಇದನ್ನು ಖಾಸಗಿ ಸ್ಟಾರ್ಟ್ ಅಪ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು.

ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಯಶಸ್ಸನ್ನು ತನ್ನ ನೆರೆಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುತ್ತಿದೆ. ನಿನ್ನೆಯಷ್ಟೇ ಭಾರತ ಉಪಗ್ರಹವನ್ನು ಉಡಾವಣೆ ಮಾಡಿತು, ಇದನ್ನು ಭಾರತ ಮತ್ತು ಭೂತಾನ್ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಭಾರತದ ಯುವಕರು ಮತ್ತು ದೇಶದ ಯುವಜನರಿಗೆ ಆಕಾಶವು ಮಿತಿಯಲ್ಲ. ದೊಡ್ಡದಾಗಿ ಯೋಚಿಸುವುದು ಮತ್ತು ದೊಡ್ಡದನ್ನು ಸಾಧಿಸುವುದು ಇಂದಿನ ಯುವಜನರ ಗುರಿಯಾಗಿದೆ ಎಂದರು. 

Vikram-S, ಭಾರತದ ಮೊದಲ ಖಾಸಗಿಯಾಗಿ-ಅಭಿವೃದ್ಧಿಪಡಿಸಿದ ರಾಕೆಟ್, ನವೆಂಬರ್ 18, 2022 ರಂದು ಶ್ರೀಹರಿಕೋಟಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಲಾಂಚ್‌ಪ್ಯಾಡ್‌ನಿಂದ ಉಡಾವಣೆಯಾಯಿತು. "ವಿಕ್ರಮ್-ಎಸ್‌ನ ಉಡಾವಣಾ ಮಿಷನ್‌ಗೆ 'ಪ್ರಾರಂಭ' ಎಂದು ಹೆಸರಿಸಲಾಗಿದೆ - ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಪ್ರಾರಂಭವಾಗಿದೆ ಎಂದು ಹೇಳಿದರು. 

ಮಹಾತ್ಮ ಗಾಂಧೀಜಿಯವರ ಅಚ್ಚುಮೆಚ್ಚಿನ ‘ವೈಷ್ಣವ ಜನ ತೋ’ ಗೀತೆಯನ್ನು ಹಾಡಿದ ಗ್ರೀಸ್‌ನ ಕಲಾವಿದ ಕಾನ್‌ಸ್ಟಾಂಟಿನೋಸ್ ಕಲೈಟ್ಜಿಸ್ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com