ಅಮೃತಸರ: ಭಾರತ- ಪಾಕ್ ಗಡಿಯಲ್ಲಿ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ
ಪಂಜಾಬ್ ನ ಅಮೃತಸರದಲ್ಲಿ ಪಾಕ್ ಕಡೆಯಿಂದ ದೇಶದೊಳಗೆ ನುಸುಳುತ್ತಿದ್ದ ಡ್ರೋನ್ ವೊಂದನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Published: 29th November 2022 10:17 AM | Last Updated: 29th November 2022 10:17 AM | A+A A-

ಹೊಡೆದುರುಳಿಸಲಾದ ಡ್ರೋನ್
ಅಮೃತಸರ: ಪಂಜಾಬ್ ನ ಅಮೃತಸರದಲ್ಲಿ ಪಾಕ್ ಕಡೆಯಿಂದ ದೇಶದೊಳಗೆ ನುಸುಳುತ್ತಿದ್ದ ಡ್ರೋನ್ ವೊಂದನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಅಮೃತಸರದಿಂದ ಸುಮಾರು 40 ಕಿಲೋ ಮೀಟರ್ ದೂರದಲ್ಲಿರುವ ಚಹರ್ ಪುರದಲ್ಲಿ ದೇಶದ ಗಡಿಯೊಳಗೆ ಡ್ರೋನ್ ಪ್ರವೇಶವನ್ನು ನೋಡಿದ ನಂತರ ಮಂಗಳವಾರ ರಾತ್ರಿ ಗುಂಡಿಟ್ಟು ಅದನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ, ಭಾಗಶ: ಹಾನಿಯಾಗಿದ್ದ ಮಾನವ ರಹಿತ ಡ್ರೋನ್ ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಬಿಳಿ ಬಣ್ಣದ ಪಾಲೆಥಿನ್ ಬಟ್ಟೆಯಲ್ಲಿದ್ದ ಶಂಕಿತ ವಸ್ತುವೊಂದಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡ್ರೋನ್ ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಬಗ್ಗೆಯೂ ಶಂಕಿಸಲಾಗಿದೆ ಆದರೆ, ಅದು ದೃಢಪಟ್ಟಿಲ್ಲ. ದೇಶದೊಳಗೆ ಕಳ್ಳ ಸಾಗಣೆಗೆ ಪ್ರಯತ್ನಿಸಿದ ಡ್ರೋನ್ ಪತ್ತೆ ಹಚ್ಚುವಲ್ಲಿ ಬಿಎಸ್ ಎಫ್ ಮತ್ತೊಮ್ಮೆ ಯಶಸ್ವಿಯಾಗಿದೆ ಎಂದು ಸೇನಾಪಡೆಯ ವಕ್ತಾರರೊಬ್ಬರು ತಿಳಿಸಿದ್ದಾರೆ. ನವೆಂಬರ್ 25 ರಂದು ಅಮೃತಸರದ ಅಂತಾರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಒಂದನ್ನು ಬಿಎಸ್ ಎಫ್ ಸಿಬ್ಬಂದಿ ಹೊಡೆದುರುಳಿಸಿದ್ದರು.