ಪಿಎಫ್ಐ ಪ್ರಕರಣ, 8 ಮಂದಿಗೆ ಜಾಮೀನು ನೀಡಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಕೋರ್ಟ್
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದೆಹಲಿ ಕೋರ್ಟ್ 8 ಮಂದಿಗೆ ಜಾಮೀನು ನೀಡಿದ್ದು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
Published: 30th November 2022 03:17 AM | Last Updated: 30th November 2022 03:17 AM | A+A A-

ದೆಹಲಿ ಕೋರ್ಟ್
ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದೆಹಲಿ ಕೋರ್ಟ್ 8 ಮಂದಿಗೆ ಜಾಮೀನು ನೀಡಿದ್ದು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸಿದ್ದನ್ನು ಸಮರ್ಥಿಸಿಕೊಳ್ಳಲು ಪೊಲೀಸ್ ಇಲಾಖೆ ವಿಫಲವಾಗಿದ್ದಕ್ಕಾಗಿ ದೆಹಲಿ ಕೋರ್ಟ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವವರು, ಪೊಲೀಸರು ಆರೋಪಿಸಿದ್ದಂತೆ ಅಪರಾಧ ಕೃತ್ಯಗಳು ನಡೆದಾಗ ಕಸ್ಟಡಿಯಲ್ಲೇ ಇದ್ದರು. ಈ ರೀತೀ ಅಪರಾಧ ಕೃತ್ಯಗಳು ನಡೆದಾಗ ಕಸ್ಟಡಿಯಲ್ಲೇ ಇದ್ದ ವ್ಯಕ್ತಿಗಳು ಅದರಲ್ಲಿ ಭಾಗವಹಿಸುವುದಕ್ಕೆ ಹೇಗೆ ಸಾಧ್ಯ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ನ್ಯಾಯಾಧೀಶರಾದ ಸಂಜಯ್, ಆರೋಪಿಗಳ ಬಂಧನವನ್ನು ಸಮರ್ಥಿಸಿಕೊಳ್ಳುವುದಕ್ಕೆ ಹಾಗೂ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವುದಕ್ಕೆ ಸಾಧ್ಯವಾದಿಲ್ಲ. ಪಿಎಫ್ಐ ನ್ನು ಕಾನೂನು ವಿರುದ್ಧದ ಸಂಘಟನೆ ಎಂದು ಘೋಷಣೆ ಮಾಡಿದ್ದ ದಿನದಿಂದ ಈಗಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಬಂಧನದವರೆಗೂ ಅವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ಹೇಳಿದೆ. ಪಿಎಫ್ಐ ನಿಷೇಧ ಘೋಷಣೆಯಾದಾಗ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಇದ್ದರು ಎಂಬುದನ್ನು ಕೋರ್ಟ್ ಉಲ್ಲೇಖಿಸಿದೆ.