ಅಕ್ಟೋಬರ್ ನಲ್ಲಿ 2.3 ಮಿಲಿಯನ್ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆಪ್ 

ತ್ವರಿತ ಮೆಸೇಜಿಂಗ್ ಆಪ್ ಹಾಗೂ ಧ್ವನಿ ಕರೆ ಸೇವೆಗಳನ್ನು ಹೊಂದಿರುವ ವಾಟ್ಸ್ ಆಪ್ ನ ವಕ್ತಾರರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.
ವಾಟ್ಸ್ ಆಪ್ (ಸಾಂಕೇತಿಕ ಚಿತ್ರ)
ವಾಟ್ಸ್ ಆಪ್ (ಸಾಂಕೇತಿಕ ಚಿತ್ರ)

ನವದೆಹಲಿ: ತ್ವರಿತ ಮೆಸೇಜಿಂಗ್ ಆಪ್ ಹಾಗೂ ಧ್ವನಿ ಕರೆ ಸೇವೆಗಳನ್ನು ಹೊಂದಿರುವ ವಾಟ್ಸ್ ಆಪ್ ನ ವಕ್ತಾರರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.

2.3 ಮಿಲಿಯನ್ ಪೈಕಿ, ಬಳಕೆದಾರರಿಂದ ಯಾವುದೇ ವರದಿ ಬರುವುದಕ್ಕೆ ಮುನ್ನವೇ ಸ್ವಯಂ ಪ್ರೇರಿತವಾಗಿ 811,000 ಖಾತೆಗಳನ್ನು ನಿಷೇಧಿಸಿರುವುದಾಗಿ ವಾಟ್ಸ್ ಆಪ್ ಹೇಳಿದೆ. ದುರುಪಯೋಗವನ್ನು ತಡೆಗಟ್ಟುವುದರಲ್ಲಿ ವಾಟ್ಸ್ ಆಪ್ ಮುಂಚೂಣಿಯಲ್ಲಿದೆ.

ವಾಟ್ಸ್ ಆಪ್ ನ್ನು ಬಳಕೆದಾರರಿಗೆ ಸುರಕ್ಷಿತವಾಗಿರಿಸಲು ಕಳೆದ ಹಲವು ವರ್ಷಗಳಲ್ಲಿ ನಾವು ನಿರಂತರವಾಗಿ ಕೃತಕ ಬುದ್ಧಿಮತ್ತೆ ಹಾಗೂ ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು ಮತ್ತು ತಜ್ಞರ ವಿಷಯದಲ್ಲಿ ಹೂಡಿಕೆ ಮಾಡಿದ್ದೇವೆ ಎಂದು ವಾಟ್ಸ್ ಆಪ್ ತಿಳಿಸಿದೆ.

"2021 ರ ಐಟಿ ನಿಯಮಗಳ ಪ್ರಕಾರ, 2022 ರ ಅಕ್ಟೋಬರ್ ತಿಂಗಳ ವರದಿಯನ್ನು ಪ್ರಕಟಿಸಲಾಗಿದೆ. ಬಳಕೆದಾರರ ಸುರಕ್ಷತಾ ವರದಿ ಬಳಕೆದಾರರ ದೂರುಗಳ ವಿವರವನ್ನು ಹೊಂದಿದ್ದು, ವಾಟ್ಸ್ ಆಪ್ ಈ ದೂರುಗಳ ಸಂಬಂಧ ಕೈಗೊಂಡಿರುವ ಮಾಹಿತಿಯನ್ನೂ ಒಳಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com