ಕಾಂಗ್ರೆಸ್ ಜೊತೆ ಜೆಡಿಯು ವಿಲೀನಕ್ಕೆ ಪ್ರಶಾಂತ್ ಕಿಶೋರ್ ಹೇಳಿದ್ರು- ನಿತೀಶ್ ಕುಮಾರ್

ಕಾಂಗ್ರೆಸ್ ನೊಂದಿಗೆ ಜೆಡಿಯು ವಿಲೀನಗೊಳಿಸುವಂತೆ ಚುನಾವಣಾ ತಂತ್ರಗಾರ-ರಾಜಕಾರಣಿ ಪ್ರಶಾಂತ್ ಕಿಶೋರ್ ತನಗೆ ಹೇಳಿದ್ರು  ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಪ್ರಶಾಂತ್ ಕಿಶೋರ್, ನಿತೀಶ್ ಕುಮಾರ್
ಪ್ರಶಾಂತ್ ಕಿಶೋರ್, ನಿತೀಶ್ ಕುಮಾರ್

ನವದೆಹಲಿ: ಕಾಂಗ್ರೆಸ್ ನೊಂದಿಗೆ ಜೆಡಿಯು ವಿಲೀನಗೊಳಿಸುವಂತೆ ಚುನಾವಣಾ ತಂತ್ರಗಾರ-ರಾಜಕಾರಣಿ ಪ್ರಶಾಂತ್ ಕಿಶೋರ್ ತನಗೆ ಹೇಳಿದ್ರು  ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.  ಜಯಪ್ರಕಾಶ್ ನಾರಾಯಣ್ ಅವರ ಜನ್ಮಸ್ಥಳ ಸಿತಾಬ್ ಡಿಯಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ಕಿಶೋರ್ ಭಾರತೀಯ ಜನತಾ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. 

'ಪ್ರಶಾಂತ್ ಕಿಶೋರ್ ಇತ್ತೀಚೆಗೆ ನನ್ನನ್ನು ಭೇಟಿಯಾಗಲು ಬಂದಿದ್ದರು. ನಾನು ಅವರನ್ನು ಆಹ್ವಾನಿಸಿರಲಿಲ್ಲ.  ಅವರು ತುಂಬಾ ಮಾತನಾಡುತ್ತಾರೆ ಆದರೆ ಒಮ್ಮೆ ಅವರು ನನ್ನ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವಂತೆ ನನ್ನಗೆ ಹೇಳಿದ ಅಂಶವನ್ನು ಅವರು ಮರೆ ಮಾಚುತ್ತಾರೆ ಎಂದರು. 

ಜೆಡಿಯು ನೇತೃತ್ವ ವಹಿಸಲು ಕುಮಾರ್ ಇತ್ತೀಚೆಗೆ ಮಾಡಿದ ಮನವಿಯನ್ನು ತಿರಸ್ಕರಿಸಿದ್ದೇನೆ ಎಂಬ ಕಿಶೋರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, ಅವರು ಏನು ಬೇಕಾದರೂ ಮಾತನಾಡಲಿ, ಅವರು ಏನು ಹೇಳಿದರೂ ಅರ್ಥವಿಲ್ಲ, ನಾಲ್ಕೈದು ವರ್ಷಗಳ ಹಿಂದೆ ಕಾಂಗ್ರೆಸ್ ನಲ್ಲಿ ಜೆಡಿಯು ವಿಲೀನಕ್ಕೆ ಹೇಳಿದ್ದ ಪ್ರಶಾಂತ್ ಕಿಶೋರ್ ಈಗ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಸುಮಾರು 10-15 ದಿನಗಳ ಹಿಂದೆ ನಿತೀಶ್ ಕುಮಾರ್ ತಮ್ಮ ನಿವಾಸಕ್ಕೆ ಕರೆಸಿಕೊಂಡು, ಜೆಡಿಯು ನಾಯಕತ್ವ ವಹಿಸುವಂತೆ ಕೇಳಿಕೊಂಡಿದ್ದರು ಎಂದು ಕಿಶೋರ್ ಮಂಗಳವಾರ ಹೇಳಿಕೊಂಡಿದ್ದರು. "ಅದು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೆ ಎಂದು ಕಿಶೋರ್ ಹೇಳಿದರು.

ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಸಂಸ್ಥಾಪಕರಾದ ಪ್ರಶಾಂತ್ ಕಿಶೋರ್ ಅವರನ್ನು 2018ರಲ್ಲಿ ನಿತೀಶ್ ಕುಮಾರ್ ಜೆಡಿಎಸ್ ಗೆ ಸೇರ್ಪಡೆ ಮಾಡಿಕೊಂಡಿದ್ದರು ಅಲ್ಲದೇ ಕೆಲವೇ ವಾರಗಳಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ್ದರು. ಆದಾಗ್ಯೂ, ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿಗೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ಅವರೊಂದಿಗಿನ ಜಗಳದಿಂದಾಗಿ ಒಂದೆರಡು ವರ್ಷಗಳಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com