ಗಾಂಧಿ ಕುಟುಂಬ ಯಾವುದೇ ಪಕ್ಷಪಾತ ಮಾಡುತ್ತಿಲ್ಲ: ಶಶಿ ತರೂರ್
ಮುಂಬೈ: ಗಾಂಧಿ ಕುಟುಂಬದ ಆರ್ಶೀವಾದ ನನಗೂ ಮತ್ತು ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಇಬ್ಬರಿಗೂ ಇದೆ. ನಮ್ಮಿಬ್ಬರ ವಿಚಾರದಲ್ಲಿ ಯಾವುದೇ ಪಕ್ಷಪಾತ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಶಶಿ ತರೂರ್ ಅವರು ಭಾನುವಾರ ಹೇಳಿದ್ದಾರೆ.
ಮುಂಬೈನಲ್ಲಿರುವ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, 2024ರ ಚುನಾವಣೆಗೂ ಮುನ್ನ ಕಾಂಗ್ರೆಸ್ ಅನ್ನು ಬಲಪಡಿಸುವುದು ತಮ್ಮ ಗುರಿಯಾಗಿದೆ ಎಂದರು.
ನನಗೆ ಮತ್ತು ಖರ್ಗೆಯವರಿಗೆ ಗಾಂಧಿ ಕುಟುಂಬದ ಆಶೀರ್ವಾದ ಇದೆ. ಏಕೆಂದರೆ ಪಕ್ಷವನ್ನು ಬಲಿಷ್ಠಗೊಳಿಸಲು ನಾವು ಸ್ಪರ್ಧಿಸುತ್ತಿದ್ದೇವೆ ಎಂದರು.
ಅಧ್ಯಕ್ಷ ಹುದ್ದೆಗಾಗಿ 'ಅಧಿಕೃತ ಅಭ್ಯರ್ಥಿ' (ಖರ್ಗೆ) ಮತ್ತು 'ಅನಧಿಕೃತ' ಒಬ್ಬರ(ಶಶಿ ತರೂರ್) ನಡುವೆ ಸಮರ ನಡೆಯುತ್ತಿದೆ ಎಂಬ ಊಹಾಪೋಹವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ತರೂರ್, ಪಕ್ಷ ಬಲಪಡಿಸಲು ನಾವು ಸ್ಪರ್ಧಿಸಿದ್ದೇವೆ. ಪಕ್ಷದಲ್ಲಿ ಬದಲಾವಣೆಯ ಅಗತ್ಯ ಇದೆ. ನಾನೇ ಬದಲಾವಣೆಯ ಪ್ರವರ್ತಕ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ