ಭಾರತ್ ಜೋಡೋ ಯಾತ್ರೆ: ರಸ್ತೆಯಲ್ಲಿ ರಾಹುಲ್ ಗಾಂಧಿ ಪುಷ್ ಅಪ್, ಡಿಕೆ ಶಿವಕುಮಾರ್ ಸಾಥ್!

ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಿಭಿನ್ನವಾಗಿ ಕಾಣಿಸಿಕೊಳ್ತಿದ್ದಾರೆ. ಭಿನ್ನ ವಿಭಿನ್ನ ವಿಶೇಷ ವೈರಲ್ ದೃಶ್ಯಗಳು ಭಾರತ್ ಜೋಡೋ ಯಾತ್ರೆಯಲ್ಲಿ ಕಂಡುಬರ್ತಿದ್ದು ಸದ್ಯ ಕರ್ನಾಟಕದಲ್ಲಿರೋ ರಾಹುಲ್ ಗಾಂಧಿ ರಸ್ತೆಯಲ್ಲಿ ಪುಶ್ ಅಪ್ ಮಾಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಬೆಂಗಳೂರು: ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಿಭಿನ್ನವಾಗಿ ಕಾಣಿಸಿಕೊಳ್ತಿದ್ದಾರೆ. ಭಿನ್ನ ವಿಭಿನ್ನ ವಿಶೇಷ ವೈರಲ್ ದೃಶ್ಯಗಳು ಭಾರತ್ ಜೋಡೋ ಯಾತ್ರೆಯಲ್ಲಿ ಕಂಡುಬರ್ತಿದ್ದು ಸದ್ಯ ಕರ್ನಾಟಕದಲ್ಲಿರೋ ರಾಹುಲ್ ಗಾಂಧಿ ರಸ್ತೆಯಲ್ಲಿ ಪುಶ್ ಅಪ್ ಮಾಡಿದ್ದಾರೆ.

52 ವರ್ಷದ ರಾಹುಲ್ ಗಾಂಧಿ ರಸ್ತೆಯೊಂದರಲ್ಲಿ ಪುಷ್-ಅಪ್‌ಗಳನ್ನು ಪ್ರದರ್ಶಿಸುತ್ತಿದ್ದಾರೆ. ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಬಾಲಕನೊಬ್ಬನೊಂದಿಗೆ ಪುಷ್-ಅಪ್‌ ಮಾಡುತ್ತಿರೋ ಫೋಟೋಗಳು ವೈರಲ್ ಆಗಿವೆ. ರಾಹುಲ್ ಗಾಂಧಿ ಮಾತ್ರ ಸರಿಯಾಗಿ ಪುಷ್ ಅಪ್ ಮಾಡುತ್ತಿರುವುದು ಎದ್ದು ಕಾಣುತ್ತದೆ. ಚಿತ್ರಗಳನ್ನು ಹಂಚಿಕೊಂಡ ರಂದೀಪ್ ಸುರ್ಜೆವಾಲಾ ಕೂಡ ಅದೇ ರೀತಿ ಹೇಳಿದ್ದಾರೆ.

'ಒಂದು ಪೂರ್ಣ ಮತ್ತು ಎರಡು ಅರ್ಧ ಪುಷ್ಅಪ್ ಗಳು!' ಎಂದು ರಂದೀಪ್ ಸುರ್ಜೆವಾಲಾ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.

ಕೆಲವು ದಿನದ ಹಿಂದೆ 75 ವರ್ಷದ ಪಕ್ಷದ ಹಿರಿಯ ಸಿದ್ದರಾಮಯ್ಯ ಅವರೊಂದಿಗೆ ರಾಹುಲ್ ಗಾಂಧಿ ಕೈ ಕೈ ಹಿಡಿದು ಓಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.  ಮತ್ತೊಂದು ಹೃದಯಸ್ಪರ್ಶಿ ಚಿತ್ರದಲ್ಲಿ ಕಾಂಗ್ರೆಸ್ ನಾಯಕಿ ತಾಯಿ ಸೋನಿಯಾ ಗಾಂಧಿಯವರ ಶೂಲೇಸ್‌ಗಳನ್ನು ರಾಹುಲ್ ಕಟ್ಟುತ್ತಿದ್ದರು. ಮಳೆಯಲ್ಲೂ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ಫೋಟೋ ಕೂಡ ಭಾರೀ ವೈರಲ್ ಆಯಿತು.

75 ವರ್ಷದ ಸೋನಿಯಾಗಾಂಧಿ ಅವರು ಮಂಡ್ಯದಲ್ಲಿ ರಾಹುಲ್ ಗಾಂಧಿ ಅವರ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಈ ವರ್ಷದ ಆರಂಭದಲ್ಲಿ ಕೋವಿಡ್ ಸೋಂಕಿನ ನಂತರ ಸೋನಿಯಾ ಗಾಂಧಿಯವರ ಮೊದಲ ಸಾರ್ವಜನಿಕ ಯಾತ್ರೆ ಇದಾಗಿದೆ. ಅವರು ಕೊನೆಯದಾಗಿ 2016ರಲ್ಲಿ ವಾರಣಾಸಿಯಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ್ದರು.

ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಸೆ.30ರಂದು ಕರ್ನಾಟಕ ಪ್ರವೇಶಿಸಿತ್ತು. ರಾಹುಲ್ ಗಾಂಧಿಯವರು 12 ರಾಜ್ಯಗಳ ಮೂಲಕ 3,570 ಕಿಲೋಮೀಟರ್ ಪಾದಯಾತ್ರೆಯ ಮೂಲಕ 'ಒಗ್ಗೂಡಿಸುವ ಭಾರತ' ಅಭಿಯಾನದಲ್ಲಿ ಮತ್ತು ಬಿಜೆಪಿಯ 'ವಿಭಜಕ ರಾಜಕೀಯ' ಎಂದು ಕರೆಯುವುದರ ವಿರುದ್ಧ ಸಂದೇಶ ಸಾರಲು ಯೋಜಿಸಿದ್ದಾರೆ. ರಾಹುಲ್ ಗಾಂಧಿ ದಕ್ಷಿಣದ ಮೂರು ರಾಜ್ಯಗಳಲ್ಲಿ ಸಂಚರಿಸಿದ ನಂತರ ಉತ್ತರದ ಕಡೆಗೆ ಪ್ರಯಾಣಿಸಲು ಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com