ಗುಜರಾತ್ ಚುನಾವಣೆ ದಿನಾಂಕ ಘೋಷಿಸಲಿಲ್ಲವೇಕೆ? ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದೇನು?

ಅಚ್ಚರಿಯೆಂಬಂತೆ ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಹಿಮಾಚಲ ಪ್ರದೇಶ ವಿಧಾನಸಭೆಗಷ್ಟೇ ಚುನಾವಣಾ ದಿನಾಂಕ ಘೋಷಿಸಿದ್ದು, ಗುಜರಾತ್ ಚುನಾವಣಾ ದಿನಾಂಕ ಘೋಷಿಸಿಲ್ಲ.ಆದರೆ ಸಾಂಪ್ರದಾಯಿಕವಾಗಿ ಎರಡು ರಾಜ್ಯಗಳು...
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

ನವದೆಹಲಿ: ಅಚ್ಚರಿಯೆಂಬಂತೆ ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಹಿಮಾಚಲ ಪ್ರದೇಶ ವಿಧಾನಸಭೆಗಷ್ಟೇ ಚುನಾವಣಾ ದಿನಾಂಕ ಘೋಷಿಸಿದ್ದು, ಗುಜರಾತ್ ಚುನಾವಣಾ ದಿನಾಂಕ ಘೋಷಿಸಿಲ್ಲ.ಆದರೆ ಸಾಂಪ್ರದಾಯಿಕವಾಗಿ ಎರಡು ರಾಜ್ಯಗಳು ಸಾಮಾನ್ಯವಾಗಿ ಒಂದೇ ಸಮಯದಲ್ಲಿ ಮತದಾನ ನಡೆಯುತ್ತಿತ್ತು.

ಹಿಮಾಚಲ ಪ್ರದೇಶ ವಿಧಾನಸಭೆ ಅವಧಿ 2023ರ ಜನವರಿ 8ಕ್ಕೆ ಮುಗಿಯಲಿದ್ದು, ಗುಜರಾತ್ ವಿಧಾನಸಭೆ ಅವಧಿ ಫೆಬ್ರವರಿ 18ಕ್ಕೆ ಮುಗಿಯಲಿದೆ. ಹೀಗಾಗಿ 2 ತಿಂಗಳ ವಿಧಾನಸಭಾ ಅಂತ್ಯದ ಅವಧಿ 6 ತಿಂಗಳಿಗಿಂತ ಕಡಿಮೆ ಇದ್ದು, ಒಟ್ಟಿಗೆ ಚುನಾವಣಾ ದಿನಾಂಕ ಘೋಷಣೆಯಾಗದಿರುವ ಬಗ್ಗೆ ಆಯೋಗವನ್ನ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. 2017ರಲ್ಲೂ ಈ ಎರಡೂ ರಾಜ್ಯಗಳಿಗೆ ಒಂದೇ ಸಮಯದಲ್ಲಿ ಚುನಾವಣೆ ನಡೆದಿಲ್ಲ ಎಂದು ಹೇಳಿದ್ದಾರೆ.

ಎರಡು ರಾಜ್ಯಗಳ ಅಸೆಂಬ್ಲಿಗಳ ಅಂತ್ಯದ ನಡುವೆ 40 ದಿನಗಳ ಅಂತರವಿದೆ. ನಿಯಮಗಳ ಪ್ರಕಾರ ಒಂದು ಫಲಿತಾಂಶವು ಇನ್ನೊಂದರ ಮೇಲೆ ಪರಿಣಾಮ ಬೀರದಂತೆ ಕನಿಷ್ಠ 30 ದಿನಗಳು ಇರಬೇಕು ಎಂದು ಹೇಳಿದರು.

ಹವಾಮಾನದಂತಹ ಹಲವಾರು ಅಂಶಗಳಿವೆ. ಹಿಮವು ಪ್ರಾರಂಭವಾಗುವ ಮೊದಲು ಹಿಮಾಚಲ ಪ್ರದೇಶ ಚುನಾವಣೆಗಳನ್ನು ನಡೆಸಲು ನಾವು ಬಯಸುತ್ತೇವೆ. ಆಯೋಗವು ವಿವಿಧ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸಿದೆ ಎಂದರು.

ಈ ಬಾರಿ ಮಾದರಿ ನೀತಿ ಸಂಹಿತೆಯ ದಿನಾಂಕವನ್ನು ಕಡಿತಗೊಳಿಸಿದ್ದು, 70 ದಿನದ ಬದಲಾಗಿ 57 ದಿನಗಳಿಗೆ ಇಳಿಸಲಾಗಿದೆ ಎಂದರು. ಸದ್ಯ ಹಿಮಾಚಲಪ್ರದೇಶ ಚುನಾವಣೆ ಘೋಷಣೆಯಾಗಿದ್ದು ಶೀಘ್ರದಲ್ಲೇ ಗುಜರಾತ್ ಎಲೆಕ್ಷನ್ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ.

2017 ರಲ್ಲಿ ಎರಡು ರಾಜ್ಯಗಳಿಗೆ ಆಯೋಗ ಪ್ರತ್ಯೇಕವಾಗಿ ಚುನಾವಣೆಗಳನ್ನು ಘೋಷಿಸಿತ್ತು. ಆದರೆ ಡಿಸೆಂಬರ್‌ನಲ್ಲಿ ಒಂದೇ ದಿನ ಫಲಿತಾಂಶ ಪ್ರಕಟಿಸಲಾಗಿತ್ತು.

ಗುಜರಾತ್ ವಿಧಾನಸಭೆಯ ಅವಧಿ ಫೆಬ್ರವರಿಯಲ್ಲಿ ಮತ್ತು ಹಿಮಾಚಲ ಪ್ರದೇಶದ ಅವಧಿಯು ಜನವರಿಯಲ್ಲಿ ಕೊನೆಗೊಳ್ಳುತ್ತದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com