ಗುಜರಾತ್ ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ 'ಅಮುಲ್' ಹಾಲಿನ ದರ ಏರಿಕೆ

ದೇಶದ ಪ್ರಮುಖ ಹಾಲು ಮಾರುಕಟ್ಟೆ ಸಂಸ್ಥೆಯಾದ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ(GCMMF) ಅಮುಲ್ ಹಾಲಿನ ಬೆಲೆಯನ್ನು ಶನಿವಾರ ಏರಿಕೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ಪ್ರಮುಖ ಹಾಲು ಮಾರುಕಟ್ಟೆ ಸಂಸ್ಥೆಯಾದ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ಅಮುಲ್ ಹಾಲಿನ ಬೆಲೆಯನ್ನು ಶನಿವಾರ ಏರಿಕೆ ಮಾಡಿದೆ.

ಗುಜರಾತ್ ಮೂಲದ ಅಮುಲ್ ಸಂಸ್ಥೆ, ಗುಜರಾತ್ ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ಅಮುಲ್ ಹಾಲಿನ ದರವನ್ನು ಲೀಟರ್ ಗೆ 2 ರೂಪಾಯಿ ಹೆಚ್ಚಳ ಮಾಡಿದೆ.

ಸಂಪೂರ್ಣ ಕೆನೆಭರಿತ ಹಾಲು ಮತ್ತು ಎಮ್ಮೆಯ ಹಾಲಿನ ದರವನ್ನು ಲೀಟರ್ ಗೆ 2 ರೂಪಾಯಿ ಹೆಚ್ಚಿಸಲಾಗಿದೆ ಎಂದು ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್ ಎಸ್ ಸೋಧಿ ತಿಳಿಸಿದ್ದಾರೆ.

ಸಂಪೂರ್ಣ ಕೆನೆಭರಿತ ಹಾಲಿನ ದರ ಈ ಮೊದಲು ಲೀಟರ್ ಗೆ 61 ರೂಪಾಯಿಗಳಿದ್ದವು. ಅದೀಗ 63 ರೂಪಾಯಿಗೆ ಏರಿಕೆಯಾಗಿದೆ. ಅಮುಲ್ ಆಗಸ್ಟ್‌ನಲ್ಲಿ ಅಮುಲ್‌ ಗೋಲ್ಡ್, ಶಕ್ತಿ ಮತ್ತು ತಾಜಾ ಹಾಲಿನ ಬ್ರಾಂಡ್‌ಗಳ ಬೆಲೆಯನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿತ್ತು. ನಂತರ ಮದರ್ ಡೈರಿ, ಆನಂದ ಸಂಸ್ಥೆಗಳು ಸಹ ಹಾಲಿನ ದರವನ್ನು ಹೆಚ್ಚಿಸಿದ್ದವು. ಹೆಚ್ಚಿನ ಹಣದುಬ್ಬರ ಮತ್ತು ಜಿಎಸ್‌ಟಿ ಕುಸಿತವನ್ನು ನಿಯಂತ್ರಿಸಲು ಈ ಕ್ರಮವೆಂದು ಹಾಲು ಮಾರಾಟ ಒಕ್ಕೂಟಗಳು ಹೇಳಿಕೊಂಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com