ಅಗ್ನಿವೀರ್ ವೇತನ ಪ್ಯಾಕೇಜ್‌ಗಾಗಿ 11 ಬ್ಯಾಂಕ್‌ಗಳೊಂದಿಗಿನ ಒಪ್ಪಂದಕ್ಕೆ ಭಾರತೀಯ ಸೇನೆ ಸಹಿ!

ಅಗ್ನಿವೀರ್ ವೇತನ ಪ್ಯಾಕೇಜ್‌ಗಾಗಿ ಭಾರತೀಯ ಸೇನೆಯು 11 ಬ್ಯಾಂಕ್‌ಗಳೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ.
ಅಗ್ನಿಪಥ್ ಯೋಜನೆ
ಅಗ್ನಿಪಥ್ ಯೋಜನೆ

ನವದೆಹಲಿ: ಅಗ್ನಿವೀರ್ ವೇತನ ಪ್ಯಾಕೇಜ್‌ಗಾಗಿ ಭಾರತೀಯ ಸೇನೆಯು 11 ಬ್ಯಾಂಕ್‌ಗಳೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಬಂಧನ್ ಬ್ಯಾಂಕ್ ಈ ಒಪ್ಪಂದಕ್ಕೆ ಸಹಿ ಹಾಕಿರುವ 11 ಬ್ಯಾಂಕ್‌ಗಳಾಗಿವೆ.

ಈ ಬ್ಯಾಂಕುಗಳು ಅಗ್ನಿವೀರರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತವೆ. ಲೆಫ್ಟಿನೆಂಟ್ ಜನರಲ್ ವಿ ಶ್ರೀಹರಿ, ಡಿಜಿ(ಎಪಿ ಮತ್ತು ಪಿಎಸ್) ಮತ್ತು ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅಗ್ನಿವೀರ್ ಸಂಬಳ ಪ್ಯಾಕೇಜ್ ಅಡಿಯಲ್ಲಿ ನೀಡಲಾಗುವ ಸೌಲಭ್ಯಗಳು ಮತ್ತು ಪ್ರಯೋಜನಗಳು ರಕ್ಷಣಾ ವೇತನದ ಪ್ಯಾಕೇಜ್‌ಗೆ ಹೋಲುತ್ತವೆ.

ಹೆಚ್ಚುವರಿಯಾಗಿ, ನಿರ್ಗಮಿಸುವ ಅಗ್ನಿವೀರ್‌ಗಳ ಉದ್ಯಮಶೀಲತಾ ಕೌಶಲ್ಯಗಳನ್ನು ಉತ್ತೇಜಿಸಲು ಮತ್ತು ಹೆಚ್ಚಿಸಲು ಬ್ಯಾಂಕುಗಳು ಲಘು ಸಾಲಗಳನ್ನು ನೀಡುತ್ತವೆ. ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿಪಥ್‌ನ ಮೊದಲ ಬ್ಯಾಚ್ ಜನವರಿ 2023ರೊಳಗೆ ತರಬೇತಿ ಕೇಂದ್ರಗಳಿಗೆ ಸೇರಲಿವೆ.

ಏನಿದು ಅಗ್ನಿಪಥ್ ಯೋಜನೆ?
ಕಳೆದ ಜೂನ್ 14ರಂದು ಕೇಂದ್ರ ಸರ್ಕಾರ 'ಅಗ್ನಿಪಥ್' ಯೋಜನೆಯನ್ನು ಘೋಷಿಸಿತ್ತು. ಯೋಜನೆಯಡಿಯಲ್ಲಿ, ಹದಿನೇಳುವರೆ ವರ್ಷದಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಿಗೆ ಸೇರಿಸಲಾಗುತ್ತದೆ. ಇವುಗಳಲ್ಲಿ, 25 ಪ್ರತಿಶತವನ್ನು ನಂತರ ನಿಯಮಿತ ಸೇವೆಗೆ ಸೇರಿಸಲಾಗುತ್ತದೆ. ನಂತರ ಸರ್ಕಾರವು ಈ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 2022 ವರ್ಷಕ್ಕೆ 21 ವರ್ಷದಿಂದ 23 ವರ್ಷಗಳಿಗೆ ಹೆಚ್ಚಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com