ವೈಎಸ್ ಆರ್ ಸಿಪಿಗೆ ಎಚ್ಚರಿಕೆ ನೀಡಲು ವೇದಿಕೆ ಮೇಲೆ ಚಪ್ಪಲಿ ತೋರಿಸಿದ ಜನಸೇನಾ ನಾಯಕ ಪವನ್ ಕಲ್ಯಾಣ್
ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಜನಸೇನಾ ಪಕ್ಷದ ನಾಯಕ, ನಟ ಪವನ್ ಕಲ್ಯಾಣ್, ಯಾರಾದರೂ ತಮ್ಮನ್ನು ಪ್ಯಾಕೇಜ್ ಸ್ಟಾರ್ ಎಂದು ಹೇಳಿದರೆ, ಅವರಿಗೆ ತಮ್ಮ ಚಪ್ಪಲಿಯಿಂದ ಥಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Published: 18th October 2022 05:16 PM | Last Updated: 18th October 2022 06:06 PM | A+A A-

ಪವನ್ ಕಲ್ಯಾಣ್
ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಜನಸೇನಾ ಪಕ್ಷದ ನಾಯಕ, ನಟ ಪವನ್ ಕಲ್ಯಾಣ್, ಯಾರಾದರೂ ತಮ್ಮನ್ನು ಪ್ಯಾಕೇಜ್ ಸ್ಟಾರ್ ಎಂದು ಹೇಳಿದರೆ, ಅವರಿಗೆ ತಮ್ಮ ಚಪ್ಪಲಿಯಿಂದ ಥಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಗಳಗಿರಿಯಲ್ಲಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ವೇಳೆ ಪವನ್ ಕಲ್ಯಾಣ್ ವೇದಿಕೆ ಮೇಲೆ ಚಪ್ಪಲಿ ತೋರಿಸಿ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ.
Pavan kalyan fires on Govt.Ycp leaders in Visakhapatnam pic.twitter.com/yHyFEU7EsT
— lakshman koratla (@RwCBZTMR2n6LyWS) October 18, 2022
ತಮ್ಮನ್ನು ಟಾರ್ಗೆಟ್ ಮಾಡುತ್ತಿರುವ ವೈಎಸ್ ಆರ್ ಪಿ ನಾಯಕರಿಗೆ ಪವನ್ ಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ, ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಆಡಳಿತ ಪಕ್ಷದ ಕೆಲವು ನಾಯಕರು ತಮ್ಮನ್ನು ಬಿಜೆಪಿ, ಟಿಡಿಪಿಯಂತಹ ಪಕ್ಷಗಳಿಂದ ಪ್ಯಾಕೇಜ್ ಪಡೆಯುವ ಪ್ಯಾಕೇಜ್ ಸ್ಟಾರ್ ಎಂದು ಹೇಳುತ್ತಿರುವುದಾಗಿ ಪವನ್ ಕಲ್ಯಾಣ್ ಆರೋಪಿಸಿದ್ದಾರೆ.
ನೇರವಾಗಿ ತಮ್ಮನ್ನು ಎದುರಿಸುವಂತೆ ಪವನ್ ಕಲ್ಯಾಣ್ ಆಡಳಿತಪಕ್ಷದ ನಾಯಕರಿಗೆ ಸವಾಲು ಹಾಕಿದ್ದು, ಆಧಾರ ರಹಿತ ಆರೋಪಗಳು ತಮ್ಮ ವಿರುದ್ಧ ಕೇಳಿಬಂದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.