ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆಗಳು, ಅನಗತ್ಯ ವಿವಾದಗಳನ್ನು ಕೊನೆಗೊಳಿಸಿ ಮುಂದೆ ಸಾಗೋಣ: ಶಶಿ ತರೂರ್

ಎಐಸಿಸಿ ಅಧ್ಯಕ್ಷ ಸ್ಥಾನ ಮಲ್ಲಿಕಾರ್ಜುನ ಖರ್ಗೆಯವರಿಗೆ ಒಲಿಯುತ್ತಿದ್ದಂತೆ ಅವರಿಗೆ ಅಭಿನಂದನೆ ಸಲ್ಲಿಸಿದ ಪರಾಜಿತ ಅಭ್ಯರ್ಥಿ ಸಂಸದ ಶಶಿ ತರೂರ್, ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಸಿಗುವುದೆಂದರೆ ಅದು ದೊಡ್ಡ ಜವಾಬ್ದಾರಿ ಮತ್ತು ಗೌರವಾನ್ವಿತ ಹುದ್ದೆ. ಖರ್ಗೆಯವರು ಈ ಹುದ್ದೆ, ಸ್ಥಾನದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ. 
ಶಶಿ ತರೂರ್
ಶಶಿ ತರೂರ್

ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನ ಮಲ್ಲಿಕಾರ್ಜುನ ಖರ್ಗೆಯವರಿಗೆ ಒಲಿಯುತ್ತಿದ್ದಂತೆ ಅವರಿಗೆ ಅಭಿನಂದನೆ ಸಲ್ಲಿಸಿದ ಪರಾಜಿತ ಅಭ್ಯರ್ಥಿ ಸಂಸದ ಶಶಿ ತರೂರ್, ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಸಿಗುವುದೆಂದರೆ ಅದು ದೊಡ್ಡ ಜವಾಬ್ದಾರಿ ಮತ್ತು ಗೌರವಾನ್ವಿತ ಹುದ್ದೆ. ಖರ್ಗೆಯವರು ಈ ಹುದ್ದೆ, ಸ್ಥಾನದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶದುದ್ದಕ್ಕೂ ಕಾಂಗ್ರೆಸ್ ಪಕ್ಷದ ನಾಯಕರು, ಸಹೋದ್ಯೋಗಿಗಳಿಂದ ಖರ್ಗೆಯವರಿಗೆ ಸಿಕ್ಕಿರುವ ಬೆಂಬಲ ಅಭೂತಪೂರ್ವವಾದದ್ದು, ಮುಂದೆಯೂ ಅಪಾರ ಸಂಖ್ಯೆಯಲ್ಲಿ ನಾಯಕರು, ಕಾರ್ಯಕರ್ತರ ಸಹಕಾರ, ಬೆಂಬಲದಿಂದ ಪಕ್ಷವನ್ನು ಮುನ್ನಡೆಸುವ ಕಾರ್ಯ ಮಾಡಿಕೊಂಡು ಹೋಗಲಿ ಎಂದು ಆಶಿಸಿದರು.

ಪತ್ರ ಸೋರಿಕೆ ಬಗ್ಗೆ ತರೂರ್ ವಿಷಾದ: ಉತ್ತರ ಪ್ರದೇಶದ ಮತದಾನದಲ್ಲಿ ಅಕ್ರಮ ನಡೆದಿದ್ದು ಅಲ್ಲಿನ ಮತಗಳನ್ನು ಅಸಿಂಧುಗೊಳಿಸಬೇಕೆಂದು ಕೇಂದ್ರ ಚುನಾವಣಾ ಪ್ರಾಧಿಕಾರಕ್ಕೆ ತಮ್ಮ ತಂಡ ಬರೆದಿದ್ದ ಆಂತರಿಕ ಪತ್ರ ಸೋರಿಕೆಯಾಗಿದ್ದು ವಿಷಾದಕರ. ಸಲ್ಮಾನ್ ಅನೀಝ್ ಅವರು ನೀಡಿರುವ ಸ್ಪಷ್ಟನೆ ಎಲ್ಲಾ ಅನಗತ್ಯ ವಿವಾದಗಳಿಗೆ ಇತಿಶ್ರೀ ಹಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಚುನಾವಣೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದಕ್ಕೆ ಹೊರತು ಪಕ್ಷವನ್ನು ವಿಭಜಿಸುವುದಕ್ಕೆ ಅಲ್ಲ. ಇದನ್ನು ಇಲ್ಲಿಗೇ ಬಿಟ್ಟು ನಾವೆಲ್ಲರೂ ಒಟ್ಟಾಗಿ ಮುಂದುವರಿಯೋಣ ಎಂದು ಶಶಿ ತರೂರ್ ಫಲಿತಾಂಶ ಪ್ರಕಟಗೊಂಡ ನಂತರ ಟ್ವೀಟ್ ಮಾಡಿದ್ದಾರೆ.

ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ ಒಟ್ಟು 9.385 ಮತಗಳಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಪರವಾಗಿ 7 ಸಾವಿರದ 897 ಮತಗಳು, ಸಂಸದ ಶಶಿ ತರೂರ್ ಪರವಾಗಿ ಸಾವಿರದ 072 ಮತಗಳು ಲಭಿಸಿವೆ. ಇನ್ನು 400ಕ್ಕೂ ಹೆಚ್ಚು ಮತಗಳು ತಿರಸ್ಕೃತಗೊಂಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com