ಕಾಂಗ್ರೆಸ್ ಅಧ್ಯಕ್ಷರಾಗಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ಪಕ್ಷಕ್ಕೇನು ಲಾಭ, ಬಿಜೆಪಿಗೆ ಸವಾಲು ಏನು?
ಬರೋಬ್ಬರಿ 24 ವರ್ಷಗಳ ನಂತರ ಗಾಂಧಿ ಕುಟುಂಬದಿಂದಾಚೆಗೆ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ನ ಅಧ್ಯಕ್ಷರಾಗಿರುವುದು ತಕ್ಷಣಕ್ಕೆ ಪಕ್ಷದಲ್ಲಿ ಭಾರೀ ಬದಲಾವಣೆ ತರಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಬಿಜೆಪಿಗೆ ಹಲವು ಸವಾಲುಗಳನ್ನು ತಂದೊಡ್ಡುವುದಂತೂ ನಿಜ.
Published: 20th October 2022 09:34 AM | Last Updated: 20th October 2022 01:40 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಬರೋಬ್ಬರಿ 24 ವರ್ಷಗಳ ನಂತರ ಗಾಂಧಿ ಕುಟುಂಬದಿಂದಾಚೆಗೆ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ನ ಅಧ್ಯಕ್ಷರಾಗಿರುವುದು ತಕ್ಷಣಕ್ಕೆ ಪಕ್ಷದಲ್ಲಿ ಭಾರೀ ಬದಲಾವಣೆ ತರಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಬಿಜೆಪಿಗೆ ಹಲವು ಸವಾಲುಗಳನ್ನು ತಂದೊಡ್ಡುವುದಂತೂ ನಿಜ.
ಕಾಂಗ್ರೆಸ್ ಕುಟುಂಬ ಆಧಾರಿತ ಪಕ್ಷ, ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿರುವ ಪಕ್ಷ ಎಂದು ಪ್ರಧಾನಿ ಮೋದಿಯಿಂದ ಹಿಡಿದು ರಾಷ್ಟ್ರ, ರಾಜ್ಯ ನಾಯಕರು ಆರೋಪ ಮಾಡುತ್ತಾ ಬಂದಿರುವ ಸಂದರ್ಭದಲ್ಲಿ ಅವರ ಬಾಯಿಯನ್ನು ಸ್ವಲ್ಪ ಮಟ್ಟಿಗೆ ಮುಚ್ಚಿಸಬಹುದು. ಎರಡನೆಯದಾಗಿ ಕಾಂಗ್ರೆಸ್ ಪಕ್ಷವಾಗಿ ಹೆಚ್ಚು ಈ ಅಧ್ಯಕ್ಷ ಆಯ್ಕೆಯ ಚುನಾವಣೆ ಆಂತರಿಕವಾಗಿ ಕಾಂಗ್ರೆಸ್ ಹೆಚ್ಚು ಪ್ರಜಾಪ್ರಭುತ್ವವಾದಿ ಎಂದು ತೋರಿಸಿದೆ.
ಪಾರದರ್ಶಕತೆ ಮತ್ತು ಪಕ್ಷದಲ್ಲಿನ ವ್ಯವಸ್ಥೆ ಸರಿಯಿಲ್ಲ ಎಂಬ ಆರೋಪಗಳ ಮಧ್ಯೆ ಕಾಂಗ್ರೆಸ್ ಸಾಂಸ್ಥಿಕ ಚುನಾವಣೆಯ ಚೆಂಡು ಈಗ ಬಿಜೆಪಿಯೆಂಬ ಕೋರ್ಟ್ ನ ಅಂಗಳಕ್ಕೆ ಬಂದು ನಿಂತಿದೆ. ಬಿಜೆಪಿಯಲ್ಲಿ ಇನ್ನೂ ಆಂತರಿಕ ಚುನಾವಣೆ ನಡೆದಿಲ್ಲ. ಬಿಜೆಪಿ ಯಾವಾಗ ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ ಎಂದು ರಾಹುಲ್ ಗಾಂಧಿ ಈಗಾಗಲೇ ಪ್ರಶ್ನಿಸಿದ್ದಾರೆ. ಖರ್ಗೆಯವರು ದಲಿತ ಅಭ್ಯರ್ಥಿ ಎಂಬುದು ಕೂಡ ಬಿಜೆಪಿಗೆ ಸವಾಲಾಗಿದೆ.
ಇದನ್ನೂ ಓದಿ: 'ಸೋಲಿಲ್ಲದ ಸರದಾರ' ರಾಜ್ಯ, ಕೇಂದ್ರ ನಾಯಕನಿಂದ ಕಾಂಗ್ರೆಸ್ ನ ಅತ್ಯುನ್ನತ ಹುದ್ದೆಯವರೆಗೆ ಮಲ್ಲಿಕಾರ್ಜುನ ಖರ್ಗೆ ಪಯಣ
ಮುಂದಿನ ವರ್ಷ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆಯವರ ನಾಯಕತ್ವ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಕರ್ನಾಟಕದಲ್ಲಿ ಶೇಕಡಾ 20ರಷ್ಟು ದಲಿತರಿದ್ದಾರೆ. ಬಿಜೆಪಿ ದೇಶದ ರಾಷ್ಟ್ರಪತಿಯಾಗಿ ದಲಿತ ಮಹಿಳೆಯನ್ನು ಆಯ್ಕೆ ಮಾಡಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರನ್ನಾಗಿ ದಲಿತ ಖರ್ಗೆಯವರನ್ನು ಆಯ್ಕೆ ಮಾಡಿದೆ. ಮಲ್ಲಿಕಾರ್ಜುನ ಖರ್ಗೆಯವರು ಪಕ್ಷವನ್ನು ಹೇಗೆ ಸಂಘಟಿಸುತ್ತಾರೆ. ಮುಂದಿನ ಅವರ ಕ್ರಮಗಳೇನು ಎಂಬುದು ಮಾಧ್ಯಮಗಳಿಗೂ ಸಾಕಷ್ಟು ಕುತೂಹಲವಿದೆ.
ಪಕ್ಷವು ಈಗ ಸರ್ವಸದಸ್ಯ ಅಧಿವೇಶನವನ್ನು ನಡೆಸಲಿದೆ, ಅಲ್ಲಿ ಅದು ಹೊಸ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡುತ್ತದೆ, ಇದು ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಸಾಂಸ್ಥಿಕ ಚುನಾವಣೆಗಳು ಮತ್ತು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ನಿಸ್ಸಂದೇಹವಾಗಿ ಅಸ್ಥಿರ ಸಂಘಟನೆಗೆ ಮರುಜೀವನ ಕೊಟ್ಟಿದೆ. ಬಿಜೆಪಿಯಿಂದ ತನ್ನ ಕೆಟ್ಟ ಚುನಾವಣಾ ಸೋಲನ್ನು ಎದುರಿಸಿದ ನಂತರ ಭಾರತದ ಹಳೆಯ ಪಕ್ಷವು ಅಂತಿಮವಾಗಿ ತನ್ನ ಕಾರ್ಯವನ್ನು ಸಾಧಿಸುತ್ತಿರುವಂತೆ ತೋರುತ್ತಿದೆ.