ಪಾಕಿಸ್ತಾನಿ ಟ್ರೋಲ್ ಗೆ ಮುಟ್ಟಿನೋಡಿಕೊಳ್ಳುವಂತೆ ಪ್ರತಿಕ್ರಿಯೆ ನೀಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ 

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಟಿ20 ವಿಶ್ವಕಪ್ 2022 ರ ಭಾರತ ಪಾಕ್ ನಡುವಿನ ಪಂದ್ಯದಲ್ಲಿ ಭಾರತ ಗೆದ್ದದ್ದು ಈ ಬಾರಿ ಭಾರ್ತೀಯರಿಗೆ ದೀಪಾವಳಿಯನ್ನು ಮತ್ತಷ್ಟು ಮೆರುಗು ತಂದಿದೆ.
ಗೂಗಲ್ ಸಿಇಒ ಸುಂದರ್ ಪಿಚ್ಚೈ
ಗೂಗಲ್ ಸಿಇಒ ಸುಂದರ್ ಪಿಚ್ಚೈ

ನವದೆಹಲಿ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಟಿ20 ವಿಶ್ವಕಪ್ 2022 ರ ಭಾರತ ಪಾಕ್ ನಡುವಿನ ಪಂದ್ಯದಲ್ಲಿ ಭಾರತ ಗೆದ್ದದ್ದು ಈ ಬಾರಿ ಭಾರ್ತೀಯರಿಗೆ ದೀಪಾವಳಿಯನ್ನು ಮತ್ತಷ್ಟು ಮೆರುಗು ತಂದಿದೆ. ಟ್ವಿಟರ್ ನಲ್ಲಿ ರೋಚಕ ಪಂದ್ಯದ ಬಗ್ಗೆ ಹಲವರು ಟ್ವೀಟ್ ಮಾಡುತ್ತಿದ್ದರು. ಆ ಪೈಕಿ ಸುಂದರ್ ಪಿಚ್ಚೈ ಟ್ವೀಟ್ ಹಾಗೂ ತಮ್ಮದೇ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು ಈಗ ವೈರಲ್ ಆಗತೊಡಗಿದೆ. 

ಹಲವು ಅಭಿಮಾನಿಗಳಂತೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಸಹ ಪಂದ್ಯವನ್ನು ವೀಕ್ಷಿಸುತ್ತಿದ್ದರು.ದೀಪಾವಳಿ ಶುಭಾಶಯ ತಿಳಿಸುವುದಕ್ಕೆ ಟ್ವೀಟ್ ಮಾಡಿದ ಸುಂದರ್ ಪಿಚ್ಚೈ ತಾವು ಪಾಕಿಸ್ತಾನದ ವಿರುದ್ಧ ಭಾರತದ ರನ್ ಚೇಸ್ ನ ಕೊನೆಯ 3 ಓವರ್ ಗಳನ್ನು ವೀಕ್ಷಿಸುತ್ತಾ ದೀಪಾವಳಿ ಹಬ್ಬ ಆಚರಣೆ ಮಾಡಿದ್ದಾಗಿ ಹೇಳಿದ್ದರು.

"ದೀಪಾವಳಿ ಹಬ್ಬದ ಶುಭಾಶಯಗಳು! ಪ್ರತಿಯೊಬ್ಬರು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸೇರಿ ಹಬ್ಬವನ್ನು ಆಚರಿಸುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ. ಪಂದ್ಯದ ಕೊನೆಯ 3 ಓವರ್‌ಗಳನ್ನು ನೋಡುವ ಮೂಲಕ ನಾನು ಹಬ್ಬವನ್ನು ಆಚರಿಸಿದ್ದೇನೆ. ಎಂಥಾ ಪಂದ್ಯ, ಎಂಥಾ ಪ್ರದರ್ಶನ," ಎಂದು ಸುಂದರ್‌ ಪಿಚೈ ಟ್ವೀಟ್‌ ಮಾಡಿದರು.

ಇದಕ್ಕೆ ಪಾಕಿಸ್ತಾನ ಅಭಿಮಾನಿಯೊಬ್ಬ, "ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಆರಂಭಿಕ ಮೂರು ಪಂದ್ಯಗಳನ್ನು ನೋಡಿ",ಎಂದು ಪ್ರತಿಕ್ರಿಯೆ ನೀಡಿದ್ದರು. ಪಾಕ್ ಅಭಿಮಾನಿಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಸುಂದರ್ ಪಿಚ್ಚೈ, ಅದನ್ನು ಕೂಡ ನಾನು ನೋಡಿದ್ದೇನೆ. ಭುವನೇಶ್ವರ್‌ ಕುಮಾರ್‌ ಹಾಗೂ ಅರ್ಷದೀಪ್‌ ಅವರಿಂದ ಎಂಥಾ ಮಾಂತ್ರಿಕ ಬೌಲಿಂಗ್," ಎಂದು ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿ ಪಾಕ್ ಅಭಿಮಾನಿಯ ಬಾಯಿ ಮುಚ್ಚಿಸಿದ್ದಾರೆ. ಈಗ ಸುಂದರ್ ಪಿಚ್ಚೈ ಹಾಗೂ ಪಾಕ್ ಅಭಿಮಾನಿಯ ಟ್ವೀಟ್ ಮತ್ತು ರೀಟ್ವೀಟ್ ಗಳು ವೈರಲ್ ಆಗತೊಡಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com