ಅಸ್ಸಾಂ: ವಲಸಿಗ ಮುಸ್ಲಿಮರ ಕುರಿತಾದ ಮ್ಯೂಸಿಯಂಗೆ ಬೀಗ; ಪ್ರತ್ಯೇಕ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿ ಕೇಳಿದ ಸಿಎಂ

ಅಸ್ಸಾಂ ನ ಗೋಲ್ಪಾರ ಜಿಲ್ಲೆಯಲ್ಲಿ ಖಾಸಗಿ ಮಿಯಾ ಮ್ಯೂಸಿಯಂ ಈಗ ವಿವಾದದ ಕೇಂದ್ರಬಿಂದುವಾಗಿದೆ.
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ

ಅಸ್ಸಾಂ: ಅಸ್ಸಾಂ ನ ಗೋಲ್ಪಾರ ಜಿಲ್ಲೆಯಲ್ಲಿ ಖಾಸಗಿ ಮಿಯಾ ಮ್ಯೂಸಿಯಂ ಈಗ ವಿವಾದದ ಕೇಂದ್ರಬಿಂದುವಾಗಿದೆ. ಕಳೆದ ಎರಡು ದಿನದ ಹಿಂದಷ್ಟೇ ಉದ್ಘಾಟನೆಗೊಂಡ ಈ ಮ್ಯೂಸಿಯಂಗೆ ಜಿಲ್ಲಾಡಳಿತ ಬೀಗ ಜಡಿದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ ಗ್ರಾಮೀಣ್ (ಪಿಎಂಎವೈ-ಜಿ) ಅಡಿಯಲ್ಲಿ ಲಖಿಪುರದಲ್ಲಿ ನಿರ್ಮಾಣ ಮಾಡಲಾಗಿತ್ತು ಜಿಲ್ಲಾಡಳಿತದ ಆದೇಶದ ಮೇರೆಗೆ ಮ್ಯೂಸಿಯಂ ಗೆ ಬೀಗ ಜಡಿಯಲಾಗಿದೆ. 

ಮಿಯಾ ಪರಿಷತ್ ನಿಂದ ಈ ಪ್ರತ್ಯೇಕವಾದ ಮ್ಯೂಸಿಯಮ್ ನ್ನು ಉದ್ಘಾಟನೆ ಮಾಡಲಾಗಿತ್ತು, ವಲಸಿಗ ಮುಸ್ಲಿಮರ ಸಂಸ್ಕೃತಿಯನ್ನು ಪ್ರದರ್ಶಿಸಿ ಉಳಿಸುವುದು ಈ ಮ್ಯೂಸಿಯಮ್ ನ ಉದ್ದೇಶವಾಗಿತ್ತು.  ಆದರೆ ಕೆಲವರು ಇದು ಸ್ಥಳೀಯ ಸಂಸ್ಕೃತಿಗೆ ಮಾರಕ ಎಂದು ಭಾವಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿಯ ದಿಬ್ರುಘರ್ ನ ಶಾಸಕ ಪ್ರಶಾಂತ್ ಫುಕಾನ್ ಈ ಮ್ಯೂಸಿಯಮ್ ನ್ನು ಮುಚ್ಚುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. 

ಈ ಕುರಿತು ಮೌನ ಮುರಿದಿರುವ ಸಿಎಂ ಹಿಮಂತ ಬಿಸ್ವ ಶರ್ಮಾ, ಈ ಮ್ಯೂಸಿಯಂ ಗೆ ಹಣದ ಹರಿವಿನ ಮೂಲವನ್ನು ತನಿಖೆ ಮಾಡಲಾಗುವುದು ಎಂದು ಹೇಳಿದ್ದಾರೆ. ಮ್ಯೂಸಿಯಂ ನಲ್ಲಿ ಲುಂಗಿಯನ್ನು ಹೊರತುಪಡಿಸಿದರೆ ಉಳಿತ ಎಲ್ಲಾ ವಸ್ತುಗಳೂ ಮೂಲ ಅಸ್ಸಾಂ ನ ಸಂಸ್ಕೃತಿ ಹಾಗೂ ಪರಂಪರೆಗೆ ಸಂಬಂಧಿಸಿದ್ದೇ ಆಗಿದೆ. ಅದನ್ನು ಅಸ್ಸಾಮಿಗಳು ಸಾಂಸ್ಕೃತಿಕವಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com