'ಕಾಶ್ಮೀರಿಯತ್' ಹೆಸರಿನಲ್ಲಿ ನಮ್ಮ ರಾಷ್ಟ್ರ ಕಂಡ ಭಯೋತ್ಪಾದನೆ, ರಕ್ತಪಾತ ವ್ಯಾಖ್ಯಾನಿಸಲು ಅಸಾಧ್ಯ: ರಾಜನಾಥ್ ಸಿಂಗ್
'ಕಾಶ್ಮೀರಿಯತ್' ಹೆಸರಿನಲ್ಲಿ ರಾಷ್ಟ್ರ ಕಂಡ ಭಯೋತ್ಪಾದನೆ ಮತ್ತು ರಕ್ತಪಾತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
Published: 27th October 2022 01:39 PM | Last Updated: 27th October 2022 02:07 PM | A+A A-

ರಾಜನಾಥ್ ಸಿಂಗ್
ಬುದ್ಗಾಮ್: 'ಕಾಶ್ಮೀರಿಯತ್' ಹೆಸರಿನಲ್ಲಿ ರಾಷ್ಟ್ರ ಕಂಡ ಭಯೋತ್ಪಾದನೆ ಮತ್ತು ರಕ್ತಪಾತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಬುದ್ಗಾಮ್ ನಲ್ಲಿಂದು ಭಾರತೀಯ ಸೇನೆಯಿಂದ ಆಯೋಜಿಸಿದ್ದ 'ಶೌರ್ಯ ದಿವಸ್ 'ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಶ್ಮೀರಿಯತ್ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಜೀವಗಳು ಕಳೆದುಹೋದವು ಮತ್ತು ಲೆಕ್ಕವಿಲ್ಲದಷ್ಟು ಮನೆಗಳು ನಾಶವಾದವು. ಅನೇಕ ಜನರು ಭಯೋತ್ಪಾದನೆಯನ್ನು ಧರ್ಮದೊಂದಿಗೆ ಜೋಡಿಸಲು ಪ್ರಯತ್ನಿಸಿದರು ಎಂದು ತಿಳಿಸಿದರು.
Budgam,J&K| In the name of Kashmiriyat, the terrorism & bloodshed the nation has witnessed cannot be defined. Countless lives were lost & countless houses destroyed. Many people tried to link terrorism with religion: Defence Min at 'Shaurya Diwas' Program organized by Indian Army pic.twitter.com/2arNBjZ94j
— ANI (@ANI) October 27, 2022
ಭವಿಷ್ಯದಲ್ಲಿ ಎಂತಹ ಪರಿಸ್ಥಿತಿ ಬಂದರೂ ನಮ್ಮ ಮುಂದೆ ಎಷ್ಟೇ ವಿಭಜಕ ಶಕ್ತಿಗಳು ಬಂದರೂ ಅವರದೇ ಭಾಷೆಯಲ್ಲಿ ಉತ್ತರ ನೀಡುವ ಮೂಲಕ ನಮ್ಮ ದೇಶವನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಸಂಕಲ್ಪವನ್ನು ಕೈಗೊಳ್ಳಲು ಈ ಶೌರ್ಯ ದಿವಸ್ ಪ್ರೇರೇಪಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಇದನ್ನೂ ಓದಿ: ಉದ್ದೇಶಿತ ಹತ್ಯೆಗಳಿಂದ ಭಯದ ವಾತಾವರಣ; ಕಣಿವೆ ತೊರೆಯುತ್ತಿರುವ ಕಾಶ್ಮೀರಿ ಪಂಡಿತರು