ಮಕಾಡೆ ಮಲಗಿರುವ ಕಾಂಗ್ರೆಸ್: ಪಕ್ಷ ಪುನರುಜ್ಜೀವನಗೊಳಿಸುವ ಜವಾಬ್ದಾರಿ; ಮುಳ್ಳಿನ ಹಾದಿಯ ಮೇಲೆ ಖರ್ಗೆ ನಡಿಗೆ!

ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವುದರಿಂದ ಅವರ ಮುಂದಿನ ಹಾದಿ ಸುಲಭವಲ್ಲ ಎಂಬುದು ರಾಜಕೀಯ ವೀಕ್ಷಕರ ಅಭಿಪ್ರಾಯ.
ಮಲ್ಲಿಕಾರ್ಜನ ಖರ್ಗೆ
ಮಲ್ಲಿಕಾರ್ಜನ ಖರ್ಗೆ

ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವುದರಿಂದ ಅವರ ಮುಂದಿನ ಹಾದಿ ಸುಲಭವಲ್ಲ ಎಂಬುದು ರಾಜಕೀಯ ವೀಕ್ಷಕರ ಅಭಿಪ್ರಾಯ.

ಚುನಾವಣಾ ಕಾರ್ಯಕ್ಷಮತೆ ಮತ್ತು ಆಂತರಿಕ ಕಲಹದ ವಿಷಯದಲ್ಲಿ ಪಕ್ಷವು ಐತಿಹಾಸಿಕವಾಗಿ ತಳ ಕಚ್ಚಿದೆ. ಇಂತಹ ಸಮದಯದಲ್ಲಿ 80 ವರ್ಷದ ಅನುಭವಿ ಖರ್ಗೆ ಉನ್ನತ ಹುದ್ದೆಗೆ ಏರಿದ್ದಾರೆ.

ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆ ಅವರ ಮುಂದಿರುವ ತಕ್ಷಣದ ಸವಾಲೆಂದರೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಮುನ್ನಡೆಸುವುದಾಗಿದೆ. 2023ರಲ್ಲಿ ಕರ್ನಾಟಕ, ತೆಲಂಗಾಣ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಸೇರಿದಂತೆ ಒಂಬತ್ತು ರಾಜ್ಯಗಳ ಚುನಾವಣೆಯನ್ನು ಖರ್ಗೆ ಎದುರಿಸಲಿದ್ದಾರೆ.

2024 ರ ಲೋಕಸಭೆ ಚುನಾವಣೆಗೆ ಟೋನ್ ಹೊಂದಿಸುವುದು. ಹಲವಾರು ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಹೋರಾಡುವುದು ಖರ್ಗೆ ಮುಂದಿರುವ ಮತ್ತೊಂದು ದೊಡ್ಡ ಸವಾಲಾಗಿದೆ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಖರ್ಗೆ ತಳ ಮಟ್ಟದಿಂದ ಕೆಲಸ ಮಾಬೇಕಾದ ಅವಶ್ಯಕತೆಯಿದೆ. ಪಕ್ಷವನ್ನು ಪುನರುಜ್ಜೀವನಗೊಳಿಸುವುದು ಹಿಮಾಲಯದಂತ ದೊಡ್ಡ ಕೆಲಸವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಪಕ್ಷಕ್ಕೆ ಒಂದು ನಿರ್ದಿಷ್ಟ ಪ್ರಮಾಣದ ಸ್ಥಿರತೆಯನ್ನು ತರುವುದು ಖರ್ಗೆ ಅವರ ತಕ್ಷಣದ ಸವಾಲು ಎಂದು ರಾಜಕೀಯ ವಿಮರ್ಶಕಿ ಸ್ಮಿತಾ ಗುಪ್ತಾ ಹೇಳಿದ್ದಾರೆ. ಪಕ್ಷದ ಚುನಾವಣೆಗೆ ಸಿದ್ಧವಾಗಲು, ಖರ್ಗೆ ಮತ್ತು ಗಾಂಧಿಯವರ ನಡುವೆ ಕೆಲಸ ವಿಭಜನೆಯಾಗಬೇಕು. ಕಾಂಗ್ರೆಸ್ ಸದಸ್ಯರು ಇನ್ನೂ ಅವರನ್ನು ಅವಲಂಬಿಸಿರುವುದರಿಂದ ಗಾಂಧಿಗಳು ದೂರ ಹೋಗುತ್ತಿಲ್ಲ ಎಂದು ನಮಗೆ ತಿಳಿದಿದೆ.

ರಾಹುಲ್ ಗಾಂಧಿಯವರು ತಮ್ಮ ಭಾರತ್ ಜೋಡೋ ಯಾತ್ರೆಯಲ್ಲಿ ಜನರಿಂದ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲು ಸಾಧ್ಯವಾಯಿತು. ದಿನನಿತ್ಯದ ಆಡಳಿತ ಮತ್ತು ಪಕ್ಷದ ಸುಧಾರಣೆಗಳನ್ನು ಖರ್ಗೆ ಅವರಿಗೆ ಬಿಡಬೇಕು ಎಂದು ಅವರು ಹೇಳುತ್ತಾರೆ.

ಮತ್ತೊಂದು ಸವಾಲೆಂದರೆ ಕೇಡರ್‌ಗೆ ಶಕ್ತಿಯನ್ನು ತುಂಬ ಬೇಕಾಗಿದೆ. ರಿಮೋಟ್ ಕಂಟ್ರೋಲ್ ಎಂಬ ಇಮೇಜ್ ನಿಂದ ಹೊರಬೇಕಾಗಿದೆ.  ಬಿಜೆಪಿ ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡುವ ಮಾಡಿದ್ದಾರೆ. ಪಕ್ಷವು ಯುವಕರನ್ನು ಪ್ರೇರೇಪಿಸುವ ಅಗತ್ಯವಿದೆ. ಅಭ್ಯರ್ಥಿಯು ಬಿಜೆಪಿಯನ್ನು ಎದುರಿಸಲು ಪಕ್ಷವು ವೇದಿಕೆಯನ್ನು ರಚಿಸಿದರೆ, ನಮಗೆ ಉತ್ತಮ ಆರಂಭವಿದೆ ಎಂದು ನಾನು ಭಾವಿಸುತ್ತೇನೆ ಎಂದು ಮಾಜಿ ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com