ಕರೆನ್ಸಿ ಮೇಲೆ ಲಕ್ಷ್ಮಿ, ಗಣೇಶ ಚಿತ್ರ ಮುದ್ರಿಸಿ: ಮೋದಿಗೆ ಕೇಜ್ರಿವಾಲ್ ಪತ್ರ

ನೋಟುಗಳಲ್ಲಿ ಲಕ್ಷ್ಮಿ ಮತ್ತು ಗಣೇಶನ ಚಿತ್ರಗಳನ್ನು ಅಳವಡಿಸುವಂತೆ ಮನವಿ ಮಾಡುವ ಮೂಲಕ ರಾಜಕೀಯ ಗದ್ದಲ ಸೃಷ್ಟಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮ್ಮ ಬೇಡಿಕೆ  ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ನೋಟುಗಳಲ್ಲಿ ಲಕ್ಷ್ಮಿ ಮತ್ತು ಗಣೇಶನ ಚಿತ್ರಗಳನ್ನು ಅಳವಡಿಸುವಂತೆ ಮನವಿ ಮಾಡುವ ಮೂಲಕ ರಾಜಕೀಯ ಗದ್ದಲ ಸೃಷ್ಟಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮ್ಮ ಬೇಡಿಕೆ  ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಭಾರತದ ಆರ್ಥಿಕತೆ ಸರಿಯಾದ ರೀತಿಯಲ್ಲಿ ಇಲ್ಲ ಎಂದು ಬುಧವಾರ ಹೇಳಿದ ಕೇಜ್ರಿವಾಲ್, ಆರ್ಥಿಕತೆಯನ್ನು ಮತ್ತೆ ಸರಿಯಾದ ದಾರಿಗೆ ತರುವ ನಿಟ್ಟಿನಲ್ಲಿ ನೋಟುಗಳ ಮೇಲೆ ದೇವರುಗಳ ಚಿತ್ರ ಮುದ್ರಿಸುವಂತೆ ಹೇಳಿಕೆ ನೀಡಿದ್ದರು.

ಭಾರತೀಯ ಕರೆನ್ಸಿಯ ಒಂದು ಬದಿಯಲ್ಲಿ ಗಾಂಧೀಜಿ ಮತ್ತು ಇನ್ನೊಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮೀ ಅವರ ಚಿತ್ರ ಇರಬೇಕು ಎಂದು ದೇಶದ 130 ಕೋಟಿ ಜನರು ಬಯಸುತ್ತಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.  ಇದರ ಬಗ್ಗೆ ಅಪಾರವಾದ ಬೆಂಬಲ ವ್ಯಕ್ತವಾಗಿದೆ. ಜನರಲ್ಲಿ ಭಾರೀ ಉತ್ಸಾಹವಿದೆ ಮತ್ತು ಎಲ್ಲರೂ ಇದನ್ನು ತಕ್ಷಣವೇ ಜಾರಿಗೆ ತರಬೇಕೆಂದು ಬಯಸುತ್ತಿದ್ದಾರೆ ಎಂದು ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ. ಭಾರತದ ಆರ್ಥಿಕತೆಯು ಅತ್ಯಂತ ಕೆಟ್ಟ ಹಂತಕ್ಕೆ ತಲುಪಿದೆ. ಭಾರತವು 75 ವರ್ಷಗಳ ಸ್ವಾತಂತ್ರ್ಯದ ಹೊರತಾಗಿಯೂ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿದೆ ಎಂದು ಅರವಿಂದ್ ಕೇಜ್ರಿವಾಲ್  ಹೇಳಿದ್ದಾರೆ. 

ಒಂದೆಡೆ  ದೇಶವಾಸಿಗಳೆಲ್ಲಾ ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ, ಮತ್ತೊಂದೆಡೆ, ನಮ್ಮ ಪ್ರಯತ್ನಗಳು ಫಲ ನೀಡಲು ನಮಗೆ ದೇವತೆಗಳ ಆಶೀರ್ವಾದವೂ ಬೇಕು ಎಂದು ಕೇಜ್ರಿವಾಲ್ ಪತ್ರದಲ್ಲಿ ಬರೆದಿದ್ದಾರೆ. ಕೇಜ್ರಿವಾಲ್ ಅವರ ಬೇಡಿಕೆಯು ಬಿಜೆಪಿಯನ್ನು ಗೊಂದಲಕ್ಕೆ ಸಿಲುಕಿಸಿದೆ. ಇದು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಎಪಿಯ "ಕೊಳಕು ಹಿಂದೂ ವಿರೋಧಿ ಮುಖ" ವನ್ನು ಮರೆಮಾಚುವ ವಿಫಲ ಪ್ರಯತ್ನ ಎಂದು ಕರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com