ಉದ್ಯೋಗಕ್ಕಾಗಿ ಸೆಕ್ಸ್ ಜಾಲ; ಅಂಡಮಾನ್ ನ ಮಾಜಿ ಮುಖ್ಯ ಕಾರ್ಯದರ್ಶಿ ಮನೆಯಲ್ಲಿ 20ಕ್ಕೂ ಹೆಚ್ಚು ಮಹಿಳೆಯರಿಗೆ ಶೋಷಣೆ!

ಹಿರಿಯ ಐಎಎಸ್ ಅಧಿಕಾರಿ ಹಾಗೂ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೇನ್ ವಿರುದ್ಧ ಲೈಂಗಿಕ ಆಪಾದನೆ ಕೇಳಿಬಂದಿದ್ದು, ಉದ್ಯೋಗಕ್ಕಾಗಿ ಸೆಕ್ಸ್ ಜಾಲದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಸಿಲುಕಿದ್ದಾರೆ.
ದ್ವೀಪದ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೇನ್
ದ್ವೀಪದ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೇನ್

ಕೋಲ್ಕತ್ತ: ಹಿರಿಯ ಐಎಎಸ್ ಅಧಿಕಾರಿ ಹಾಗೂ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೇನ್ ವಿರುದ್ಧ ಲೈಂಗಿಕ ಆಪಾದನೆ ಕೇಳಿಬಂದಿದ್ದು, ಉದ್ಯೋಗಕ್ಕಾಗಿ ಸೆಕ್ಸ್ ಜಾಲದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಸಿಲುಕಿದ್ದಾರೆ.

ಉದ್ಯೋಗಕ್ಕಾಗಿ ಸೆಕ್ಸ್ ಆಮಿಷದಲ್ಲಿ ಐಎಸ್ಎಸ್ ಅಧಿಕಾರಿಯ ಪೋರ್ಟ್ ಬ್ಲೈರ್ ನಿವಾಸಕ್ಕೆ 20 ಮಂದಿ ಮಹಿಳೆಯರನ್ನು ಕರೆದೊಯ್ಯಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಪೈಕಿ ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡ ಕೆಲವು ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳನ್ನೂ ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
 
21 ವರ್ಷದ ಮಹಿಳೆ ಮಾಜಿ ಮುಖ್ಯಕಾರ್ಯದರ್ಶಿ ನರೇನ್ ವಿರುದ್ಧ ಹಾಗೂ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದ ಹಿಂದಿನ ಕಾರ್ಮಿಕ ಆಯುಕ್ತ ಆರ್ ಎಲ್ ರಿಷಿ ಅವರ ವಿರುದ್ಧ ತಮ್ಮನ್ನು ಲೈಂಗಿಕವಾಗಿ ಶೋಷಣೆ ಮಾಡಿರುವುದರ ಬಗ್ಗೆ ದೂರು ನೀಡಿದ್ದು, ತಾನು ಗ್ಯಾಂಗ್ ರೇಪ್ ಸಂತ್ರಸ್ತೆಯಾಗಿದ್ದೇನೆ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಈ ಹಗರಣ ಬೆಳಕಿಗೆ ಬಂದಿದೆ. 

2019 ರಲ್ಲಿ ಫೇಮ್ ಇಂಡಿಯಾ, ಏಷ್ಯಾ ಪೋಸ್ಟ್, ಹಾಗೂ ಪಿಎಸ್ ಯು ವಾಚ್ ಸಿದ್ಧಪಡಿಸಿದ್ದ ಟಾಪ್ 50 ಅಧಿಕಾರಿಗಳ ಪಟ್ಟಿಯಲ್ಲಿ ಜಿತೇಂದ್ರ ನರೇನ್ ಅವರೂ ಸ್ಥಾನ ಗಿಟ್ಟಿಸಿದ್ದರು. 

ಮಹಿಳೆಯ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಕೋಲ್ಕತ್ತಾ ಹೈಕೋರ್ಟ್ ಅ.28 ರಂದು ಎಸ್ಐಟಿ ಎದುರು ಹಾಜರಾಗುವಂತೆ ಜಿತೇಂದ್ರ ನರೇನ್ ಗೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com