ಟಿಆರ್ ಎಸ್ ಶಾಸಕರ ಖರೀದಿ ಯತ್ನ ಕೇಸು: ರಾಜ್ಯ ಸರ್ಕಾರ ಪರವಾಗಿ ಹೈಕೋರ್ಟ್ ಆದೇಶ

ನಾಲ್ವರು ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ರಾಜ್ಯ ಸರ್ಕಾರದ ಪರವಾಗಿ ಆದೇಶ ಹೊರಡಿಸಿದೆ. 
ತೆಲಂಗಾಣ ಹೈಕೋರ್ಟ್
ತೆಲಂಗಾಣ ಹೈಕೋರ್ಟ್

ಹೈದರಾಬಾದ್: ನಾಲ್ವರು ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ರಾಜ್ಯ ಸರ್ಕಾರದ ಪರವಾಗಿ ಆದೇಶ ಹೊರಡಿಸಿದೆ. 

ಮೂವರು ಆರೋಪಿಗಳ ಬಂಧನದ ವಿರುದ್ಧ ತೀರ್ಪು ನೀಡಿದ ಎಸಿಬಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ಕೆ.ನಂದಕುಮಾರ್ ಮತ್ತು ಡಿಪಿಎಸ್‌ಕೆವಿಎನ್ ಸಿಂಹಯಾಜುಲು ಅವರಿಗೆ ಸೈಬರಾಬಾದ್ ಪೊಲೀಸ್ ಆಯುಕ್ತರ ಮುಂದೆ 24 ಗಂಟೆಗಳ ಒಳಗೆ ಶರಣಾಗುವಂತೆ ಇಂದು ಆದೇಶ ನೀಡಿದೆ.

ಮೂವರು ಆರೋಪಿಗಳನ್ನು ಬಂಧಿಸಿ ವಿಶೇಷ ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.

ಪ್ರಕರಣದಲ್ಲಿ, ಲಂಚದ ಹಣದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಮತ್ತು ಸಿಆರ್‌ಪಿಸಿಯ ಸೆಕ್ಷನ್ 41 (ಎ) ಪ್ರಕಾರ ಪೊಲೀಸರು ನೋಟಿಸ್‌ ನೀಡಬಹುದು. ಪ್ರಕರಣದ ತನಿಖೆಗೆ ಆರೋಪಿಗಳನ್ನು ಕರೆಯಬಹುದು ಎಂದು ಎಸಿಬಿ ನ್ಯಾಯಾಲಯದ ನ್ಯಾಯಾಧೀಶರು ಉಲ್ಲೇಖಿಸಿದ್ದನ್ನು ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com