ಗುಲಾಂ ನಬಿ ಆಜಾದ್ ನಾಳೆ ಹೊಸ ಪಕ್ಷ ಘೋಷಣೆ ಸಾಧ್ಯತೆ

ಇತ್ತೀಚಿಗೆ ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಧೀರ್ಘ ಸಂಬಂಧವನ್ನು ಕಡಿದುಕೊಂಡ ಗುಲಾಂ ನಬಿ ಆಜಾದ್, ನಾಳೆ ಜಮ್ಮುಯಿಂದ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವ ಸಾಧ್ಯತೆಯಿದೆ.
ಗುಲಾಂ ನಬಿ ಆಜಾದ್ ಅವರಿಗೆ ಸ್ವಾಗತಿಸುವ ಹೋರ್ಡಿಂಗ್, ಬ್ಯಾನರ್ ಗಳು
ಗುಲಾಂ ನಬಿ ಆಜಾದ್ ಅವರಿಗೆ ಸ್ವಾಗತಿಸುವ ಹೋರ್ಡಿಂಗ್, ಬ್ಯಾನರ್ ಗಳು

ಜಮ್ಮು: ಇತ್ತೀಚಿಗೆ ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಧೀರ್ಘ ಸಂಬಂಧವನ್ನು ಕಡಿದುಕೊಂಡ ಗುಲಾಂ ನಬಿ ಆಜಾದ್, ನಾಳೆ ಜಮ್ಮುಯಿಂದ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವ ಸಾಧ್ಯತೆಯಿದೆ.

ಜಮ್ಮುವಿನಲ್ಲಿ ಅವರ ಮೊದಲ ಸಾರ್ವಜನಿಕ ಸಭೆಗೆ ಎಲ್ಲಾ ಸಿದ್ಧತಾ ಕಾರ್ಯಗಳು ಅಂತಿಮಗೊಂಡಿವೆ ಎಂದು ಮಾಜಿ ಮುಖ್ಯಮಂತ್ರಿಯ ಆಪ್ತ ಮೂಲಗಳು ತಿಳಿಸಿವೆ. ದೆಹಲಿಯಿಂದ ಬೆಳಗ್ಗೆ ಆಗಮಿಸುವ ಆಜಾದ್ ಅವರಿಗೆ ಅದ್ದೂರಿ ಸ್ವಾಗತ ನೀಡುವ ಮೂಲಕ ಸೈನಿಕ ಕಾಲೋನಿಯಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸಮಾವೇಶ ಸ್ಥಳಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು ಎಂದು ಮಾಜಿ ಸಚಿವ ಜಿ.ಎಂ. ಸರೂರಿ ಹೇಳಿದರು. 

73 ವರ್ಷದ ಗುಲಾಂ ನಬಿ ಆಜಾದ್ ಹೊಸ ಪಕ್ಷವನ್ನು ಘೋಷಿಸುವ ಸಾಧ್ಯತೆಯಿದೆ. ಇದರ ಹಿನ್ನೆಲೆಯಲ್ಲಿ ಆಜಾದ್ ಅವರನ್ನು ಸ್ವಾಗತಿಸುವ ಹೋರ್ಡಿಂಗ್, ಬ್ಯಾನರ್ ಗಳನ್ನು ಜಮ್ಮು ವಿಮಾನ ನಿಲ್ದಾಣ ರಸ್ತೆ ಹಾಗೂ ಸಾರ್ವಜನಿಕ ಸಮಾವೇಶ ನಡೆಯುವ ದಾರಿಯುದ್ದಕ್ಕೂ ಹಾಕಲಾಗಿದೆ. ಸುಮಾರು 20,000 ಜನರು ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಮಾಡಲಾಗಿದೆ.

ಆಜಾದ್ ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಎಲ್ಲಾ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಜಾದ್ ಅವರನ್ನು ಬೆಂಬಲಿಸಿ ಸಮಾಜದ ವಿವಿಧ ವರ್ಗದ ಸುಮಾರು 30,000 ಬೆಂಬಲಿಗರು ಆಜಾದ್ ಅವರ ಜೊತೆಗೆ ಕೈ ಜೋಡಿಸುವುದಾಗಿ ಹೇಳಿರುವುದಾಗಿ ಎಂದು ಸರೂರಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com