ಉತ್ತರ ಪ್ರದೇಶ: ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಬಿಜೆಪಿ ಮುಸ್ಲಿಂ ನಾಯಕಿ ವಿರುದ್ಧ ಫತ್ವಾ ಜಾರಿ

ಗಣೇಶ ಚತುರ್ಥಿ ದಿನದಿಂದು ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಿದ್ದಕ್ಕಾಗಿ ಆಲಿಘಡದ ಮುಸ್ಲಿಂ ನಾಯಕಿ ರೂಬಿ ಆಶಿಫ್ ಖಾನ್ ವಿರುದ್ಧ ದೇವಬಂದ್ ಮುಫ್ತಿ ಅರ್ಷದ್ ಫಾರೂಕಿ ಫತ್ವಾ ಹೊರಡಿಸಿದ್ದಾರೆ. ರೂಬಿ ಆಸಿಫಾ ನಡವಳಿಕೆ ಇಸ್ಲಾಮಿಕ್ ವಿರುದ್ಧವಾಗಿದೆ ಎಂದು ಮುಫ್ತಿ ಹೇಳಿದ್ದಾರೆ. ರೂಬಿ ಆಲಿಘಡದ ಬಿಜೆಪಿ ಮಹಿಳಾ ಮೋರ್ಚಾದ  ಉಪಾಧ್ಯಕ್ಷರಾಗಿದ್ದಾರೆ.
ಬಿಜೆಪಿ ನಾಯಕಿ ರೂಬಿ ಖಾನ್
ಬಿಜೆಪಿ ನಾಯಕಿ ರೂಬಿ ಖಾನ್

ಲಖನೌ:  ಗಣೇಶ ಚತುರ್ಥಿ ದಿನದಿಂದು ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಿದ್ದಕ್ಕಾಗಿ ಆಲಿಘಡದ ಮುಸ್ಲಿಂ ನಾಯಕಿ ರೂಬಿ ಆಶಿಫ್ ಖಾನ್ ವಿರುದ್ಧ ದೇವಬಂದ್ ಮುಫ್ತಿ ಅರ್ಷದ್ ಫಾರೂಕಿ ಫತ್ವಾ ಹೊರಡಿಸಿದ್ದಾರೆ. ರೂಬಿ ಆಸಿಫಾ ನಡವಳಿಕೆ ಇಸ್ಲಾಮಿಕ್ ವಿರುದ್ಧವಾಗಿದೆ ಎಂದು ಮುಫ್ತಿ ಹೇಳಿದ್ದಾರೆ. ರೂಬಿ ಆಲಿಘಡದ ಬಿಜೆಪಿ ಮಹಿಳಾ ಮೋರ್ಚಾದ  ಉಪಾಧ್ಯಕ್ಷರಾಗಿದ್ದಾರೆ.

ರೂಬಿ ಆಸಿಫ್ ಖಾನ್ ಧಾರ್ಮಿಕ ಸೌಹಾರ್ದತೆಯ ಉದಾಹರಣೆಯಾಗಿ, ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಇಸ್ಲಾಮಿಕ್ ಧಾರ್ಮಿಕ ಗುರುಗಳ ಗಮನ ಸೆಳೆದಿದ್ದರು. ಗಣೇಶನನ್ನು ಹಿಂದೂಗಳು ಹೆಚ್ಚಾಗಿ ಪೂಜಿಸುತ್ತಾರೆ ಮತ್ತು ಅವರು ಜ್ಞಾನದಿಂದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾರೆ ಎಂದು ತಿಳಿದುಬಂದಿದೆ, ಆದರೆ ಇಸ್ಲಾಂನಲ್ಲಿ ವಿಗ್ರಹ ಪೂಜೆಯನ್ನು ಅನುಮತಿಸಲಾಗುವುದಿಲ್ಲ ಎಂದು ದೇವಬಂದ್‌ನ ಮುಫ್ತಿ ಅರ್ಷದ್ ಫಾರೂಕಿ ಹೇಳಿದ್ದಾರೆ.

ಇಸ್ಲಾಂ ಧರ್ಮದಲ್ಲಿ ಅಲ್ಲಾಹನನ್ನು ಹೊರತುಪಡಿಸಿ ಯಾರನ್ನೂ ಪೂಜಿಸಲಾಗುವುದಿಲ್ಲ. ಈ ರೀತಿ ಮಾಡುವವರು ಇಸ್ಲಾಂ ವಿರೋಧಿಗಳು. ವಿಗ್ರಹವನ್ನು ಪೂಜಿಸುವವರ ವಿರುದ್ಧ, ಇಸ್ಲಾಂ ಧರ್ಮಕ್ಕೆ ವಿರುದ್ಧವಾದವರಿಗೆ ಫತ್ವಾ ಹೊರಡಿಸಲಾಗುವುದು ಎಂದು ಮುಫ್ತಿ ಹೇಳಿದ್ದಾರೆ. 

ಫತ್ವಾ ಕುರಿತಂತೆ ಪ್ರತಿಕ್ರಿಯಿಸಿರುವ ರೂಬಿ ಖಾನ್, ಇಂತಹ ಧರ್ಮಗುರುಗಳು ಮತ್ತು ಮುಫ್ತಿಗಳು ನಿಜವಾದ ಮುಸ್ಲಿಮರಲ್ಲ ಮತ್ತು ಅವರು ಕೇವಲ ಧಾರ್ಮಿಕ ಆಧಾರದ ಮೇಲೆ ಸಮಾಜ ವಿಭಜನೆಯಲ್ಲಿ ತೊಡಗಿದ್ದಾರೆ .ಈ ಹಿಂದೆಯೂ ತಾನು ಇಂತಹ ಹಲವು ಫತ್ವಾಗಳನ್ನು ಎದುರಿಸಿದ್ದು, ಇದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com