ಹೊಸ ರಾಜಕೀಯ ಇನ್ನಿಂಗ್ಸ್; ಜನರೇ ಪಕ್ಷದ ಹೆಸರು ನಿರ್ಧರಿಸುತ್ತಾರೆ: ಗುಲಾಂ ನಬಿ ಆಜಾದ್

ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲದ ಒಡನಾಟ ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಒಂದು ವಾರದ ನಂತರ ಗುಲಾಂ ನಬಿ ಆಜಾದ್ ಇಂದು ಹೊಸ ರಾಜಕೀಯ ಪ್ರಯಾಣವನ್ನು ಆರಂಭಿಸಿದ್ದಾರೆ.
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್

ಶ್ರೀನಗರ: ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲದ ಒಡನಾಟ ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಒಂದು ವಾರದ ನಂತರ ಗುಲಾಂ ನಬಿ ಆಜಾದ್ ಇಂದು ಹೊಸ ರಾಜಕೀಯ ಪ್ರಯಾಣವನ್ನು ಆರಂಭಿಸಿದ್ದಾರೆ.

ಜಮ್ಮುವಿನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಹೊಸ ಪಕ್ಷದ ಹೆಸರು ಮತ್ತು ಧ್ವಜವನ್ನು ಜನರೇ ನಿರ್ಧರಿಸುತ್ತಾರೆ ಎಂದರು. ಜಮ್ಮುವಿನ ಸೈನಿಕ್ ಮೈದಾನದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದ ಜನರೊಂದಿಗಿದ್ದೇನೆ ಎಂದು ಹೇಳಿದರು. 

ಮಾಜಿ ಮುಖ್ಯಮಂತ್ರಿಗಳು ರ್ಯಾಲಿ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಅಪಾರ ಜನಸಮೂಹ ಅವರನ್ನು ಸ್ವಾಗತಿಸಿತು. ನಾನು ಇನ್ನೂ ನನ್ನ ಪಕ್ಷಕ್ಕೆ ಹೆಸರನ್ನು ನಿರ್ಧರಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರು ಪಕ್ಷದ ಹೆಸರು ಮತ್ತು ಧ್ವಜವನ್ನು ನಿರ್ಧರಿಸುತ್ತಾರೆ. ನಾನು ನನ್ನ ಪಕ್ಷಕ್ಕೆ ಹಿಂದೂಸ್ತಾನಿ ಹೆಸರನ್ನು ನೀಡುತ್ತೇನೆ, ಅದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಅವರು ಸಭೆಯಲ್ಲಿ ಹೇಳಿದರು.

73 ವರ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ಪಕ್ಷದ ಜಮ್ಮು ಮತ್ತು ಕಾಶ್ಮೀರ ಘಟಕದಲ್ಲಿನ ಹುದ್ದೆಯನ್ನು ತಿರಸ್ಕರಿಸಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ತೊರೆದರು. ಅವರ ನಿರ್ಗಮನವು ಪಕ್ಷದ ಜಮ್ಮು ಮತ್ತು ಕಾಶ್ಮೀರ ಘಟಕದಿಂದ ಕಾಂಗ್ರೆಸ್ ನಾಯಕರ ಸಾಮೂಹಿಕ ನಿರ್ಗಮನವನ್ನು ಪ್ರೇರೇಪಿಸಿತು.

ರಾಜೀನಾಮೆಯ ನಂತರ, ಹಿರಿಯ ನಾಯಕ ಕಾಂಗ್ರೆಸ್ ಹೈಕಮಾಂಡ್ ಅನ್ನು ಗುರಿಯಾಗಿಟ್ಟುಕೊಂಡು, ರಾಹುಲ್ ಗಾಂಧಿಯ ಬಾಲಿಶ ವರ್ತನೆ, ಅಪ್ರಬುದ್ಧತೆಯನ್ನು ದೂಷಿಸಿದರು.

ಆಜಾದ್ ಅವರು 2000 ರಲ್ಲಿ ಪಕ್ಷದ ಮುಖ್ಯಸ್ಥರಾಗಿ ಸೀತಾರಾಮ್ ಕೇಸ್ರಿ ಅವರು ಅನೌಪಚಾರಿಕವಾಗಿ ನಿರ್ಗಮಿಸಿದ ಸಮಯದಿಂದ ಸೋನಿಯಾ ಗಾಂಧಿಯವರ ವಿಶ್ವಾಸಾರ್ಹ ಆಪ್ತರಾಗಿದ್ದರು. ಅವರು ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿಗೆ ಪಕ್ಷದ ಪ್ರಮುಖ ವ್ಯಕ್ತಿಯಾಗಿದ್ದರು. ಆದರೆ ಪಕ್ಷದಲ್ಲಿ ಬದಲಾವಣೆಗೆ ಒತ್ತಾಯಿಸುವಲ್ಲಿ ಅವರು ಜಿ -23 ಗೆ ಸೇರಿದ ನಂತರ ಎಲ್ಲವೂ ಬದಲಾಯಿತು.

ರಾಜೀನಾಮೆ ನೀಡಿದ ನಂತರ ಆಜಾದ್ ಜಿ 23 ಗುಂಪಿನ ಆನಂದ್ ಶರ್ಮಾ, ಪೃಥ್ವಿರಾಜ್ ಚವಾಣ್ ಮತ್ತು ಭೂಪಿಂದರ್ ಹೂಡಾ ಅವರನ್ನು ಭೇಟಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com