ಹಠಾತ್ ಹೃದಯಾಘಾತದಿಂದ ಕುಸಿದು ಬಿದ್ದ ರೋಗಿ, ಸಿಪಿಆರ್ ಮೂಲಕ ಪ್ರಾಣ ಉಳಿಸಿದ ಡಾಕ್ಟರ್! ವಿಡಿಯೋ ವೈರಲ್

 ಪ್ರಜ್ಞೆ ಇಲ್ಲದೆ ಇದಕ್ಕಿದ್ದಂತೆ ಕುಸಿದು ಬಿದ್ದ ವ್ಯಕ್ತಿಯೊಬ್ಬರ ಪ್ರಾಣವನ್ನು ಡಾಕ್ಟರ್ ರೊಬ್ಬರು ಕಾಪಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಸಿಪಿಆರ್ ನೀಡುತ್ತಿರುವ ವೈದ್ಯ ಡಾ. ಅರ್ಜುನ್ ಅಡ್ನಾಯಕ್
ಸಿಪಿಆರ್ ನೀಡುತ್ತಿರುವ ವೈದ್ಯ ಡಾ. ಅರ್ಜುನ್ ಅಡ್ನಾಯಕ್

ಕೊಲ್ಹಾಪುರ:  ಪ್ರಜ್ಞೆ ಇಲ್ಲದೆ ಇದಕ್ಕಿದ್ದಂತೆ ಕುಸಿದು ಬಿದ್ದ ವ್ಯಕ್ತಿಯೊಬ್ಬರ ಪ್ರಾಣವನ್ನು ಡಾಕ್ಟರ್ ರೊಬ್ಬರು ಕಾಪಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿರುವ ಈ ಘಟನೆಯ ವಿಡಿಯೋವನ್ನು ರಾಜ್ಯಸಭಾ ಸಂಸದ ಧನಂಜಯ್ ಮಹಾದಿಕ್ ಸೇರಿದಂತೆ ಹಲವು ಟ್ವೀಟಿಗರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

37 ಸೆಕೆಂಡ್ ಗಳ ಈ ವಿಡಿಯೋದಲ್ಲಿ ಡಾಕ್ಟರ್ ಜೊತೆಗೆ ಸಂವಾದ ನಡೆಸುತ್ತಿದ್ದ ನೀಲಿ ಬಣ್ಣದ ಟೀ ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಪ್ರಜ್ಞೆ ಕಳೆದುಕೊಂಡು ಕುಸಿದು ಬಿಳುತ್ತಾರೆ. ತಕ್ಷಣ ತನ್ನ ಸೀಟ್ ನಿಂದ ಎದ್ದುಬಂದ ವೈದ್ಯರು ಸಿಪಿಆರ್ ನೀಡುವ ಮೂಲಕ ರೋಗಿಯ ಪ್ರಾಣ ಕಾಪಾಡಿದ್ದಾರೆ. ಕೊಲ್ಹಾಪುರದ ಹೃದಯ ತಜ್ಞ ಡಾ. ಅರ್ಜುನ್ ಅಡ್ನಾಯಕ್ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. 

''ನಮ್ಮ ನಡುವೆ ವಾಸಿಸುತ್ತಿರುವ ನಿಜ ಜೀವನದ ನಾಯಕನ ಉದಾಹರಣೆಯನ್ನು ಈ ವೀಡಿಯೊ ತೋರಿಸುತ್ತದೆ. ಕೊಲ್ಹಾಪುರದ ಅತ್ಯುತ್ತಮ ಹೃದ್ರೋಗ ತಜ್ಞರಲ್ಲಿ ಒಬ್ಬರಾದ ಡಾ. ಅರ್ಜುನ್ ಅಡ್ನಾಯಕ್ ಅವರು ರೋಗಿಯ ಜೀವವನ್ನು ಉಳಿಸಿದ್ದಾರೆ. ಅಂತಹ ಗೌರವಾನ್ವಿತ ಮತ್ತು ಸದ್ಗುಣಶೀಲ ವೀರರನ್ನು  ಶ್ಲಾಘಿಸುತ್ತೇನೆ ಎಂದು ಮಹಾದಿಕ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com