ದೇಶಕ್ಕೆ ದುರ್ಬಲ ಪ್ರಧಾನಿ, ಕಿಚಡಿ ಸರ್ಕಾರದ ಅಗತ್ಯವಿದೆ- ಅಸಾದುದ್ದೀನ್ ಓವೈಸಿ
ಮುಂದಿನ ಲೋಕಸಭಾ ಚುನಾವಣೆ ನಂತರ ದೇಶಕ್ಕೆ ದುರ್ಬಲ ಪ್ರಧಾನಿ ಮತ್ತು ಕಿಚಡಿ ಅಥವಾ ಬಹು ಪಕ್ಷ ಸರ್ಕಾರದ ಅಗತ್ಯವಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ.
Published: 10th September 2022 07:41 PM | Last Updated: 05th November 2022 04:38 PM | A+A A-

ಅಸಾದುದ್ದೀನ್ ಓವೈಸಿ
ಅಹಮದಾಬಾದ್: ಮುಂದಿನ ಲೋಕಸಭಾ ಚುನಾವಣೆ ನಂತರ ದೇಶಕ್ಕೆ ದುರ್ಬಲ ಪ್ರಧಾನಿ ಮತ್ತು ಕಿಚಡಿ ಅಥವಾ ಬಹು ಪಕ್ಷ ಸರ್ಕಾರದ ಅಗತ್ಯವಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಓವೈಸಿ, ಪ್ರಬಲ ಪ್ರಧಾನ ಮಂತ್ರಿ ಕೇವಲ ಪ್ರಬಲ ಜನರಿಗೆ ಮಾತ್ರ ಸಹಾಯ ಮಾಡುತ್ತಾರೆ, ದುರ್ಬಲ ವರ್ಗದವರು ಪ್ರಧಾನಿಯಾದರೆ, ಆ ವರ್ಗದವರಿಗೆ ಅನುಕೂಲವಾಗಲಿದೆ ಎಂದರು.
ಬಿಲ್ಕಿಸ್ ಬಾನೊ ಪ್ರಕರಣದ ಆರೋಪಿಗಳ ಬಿಡುಗಡೆ ವಿಚಾರದಲ್ಲಿ ಮೌನವಾಗಿದ್ದ ಆಮ್ ಆದ್ಮಿ ಪಕ್ಷ ಗುಜರಾತ್ ನಲ್ಲಿನ ಆಡಳಿತಾರೂಢ ಬಿಜೆಪಿ ಪಕ್ಷಕ್ಕಿಂತ ಭಿನ್ನವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆಎಂದು ಅವರು ಮಾಹಿತಿ ನೀಡಿದರು.
ಜವಹರ್ ಲಾಲ್ ನೆಹರು ನಂತರ ಹೆಚ್ಚಿನ ಪ್ರಬಲರಾದ ಪ್ರಧಾನಿ, ನಿರುದ್ಯೋಗ, ಹಣದುಬ್ಬರ, ಚೀನಾದ ಆಕ್ರಮಣ, ಉದ್ಯಮಿಗಳಿಗೆ ಬ್ಯಾಂಕ್ ಸಾಲ ಮನ್ನಾ ಬಗ್ಗೆ ಪ್ರಶ್ನಿಸಿದಾಗ ವ್ಯವಸ್ಥೆಯನ್ನು ದೂರುತ್ತಾರೆ. ಪ್ರಬಲ ಪ್ರಧಾನಿ ಏನು ಅಂತಾ ನೋಡಿದ್ದೇವೆ. ಈಗ ದೇಶಕ್ಕೆ ದುರ್ಬಲ ಪ್ರಧಾನಿ ಅಗತ್ಯವಿದೆ. ಇದರಿಂದ ದುರ್ಬಲ ಜನರಿಗೆ ಅನುಕೂಲವಾಗಲಿದೆ. ಅಂತೆಯೇ ದೇಶಕ್ಕೆ ಬಹು ಪಕ್ಷಗಳ ಕಿಚಡಿ ಸರ್ಕಾರದ ಅಗತ್ಯವಿದೆ. ಇದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಪ್ರಯತ್ನಿಸಬೇಕಾಗಿದೆ ಎಂದರು.