ಗುಜರಾತ್ ಚುನಾವಣೆ ಹಿನ್ನೆಲೆ, ಆಟೋ ಡ್ರೈವರ್ ಮನೆ ಬಾಗಿಲಿಗೆ ಆರ್ ಟಿಒ ಸೇವೆ- ಕೇಜ್ರಿವಾಲ್ ಭರವಸೆ

ಗುಜರಾತಿನ ಆಟೋ ಡ್ರೈವರ್ ಗಳನ್ನು ಕಿರುಕುಳದಿಂದ ರಕ್ಷಿಸಲು ಹಾಗೂ ಭ್ರಷ್ಟಾಚಾರವನ್ನು ತಡೆಗಟ್ಟಲು ಅವರ ಮನೆ ಬಾಗಿಲಿಗೆ ಪ್ರಾದೇಶಿಕ ಸಾರಿಕೆ ಕಚೇರಿ (ಆರ್ ಟಿಒ) ಸೇವೆಗಳನ್ನು ಒದಗಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಭರವಸೆ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ಅಹಮದಾಬಾದ್: ಗುಜರಾತಿನ ಆಟೋ ಡ್ರೈವರ್ ಗಳನ್ನು ಕಿರುಕುಳದಿಂದ ರಕ್ಷಿಸಲು ಹಾಗೂ ಭ್ರಷ್ಟಾಚಾರವನ್ನು ತಡೆಗಟ್ಟಲು ಅವರ ಮನೆ ಬಾಗಿಲಿಗೆ ಪ್ರಾದೇಶಿಕ ಸಾರಿಕೆ ಕಚೇರಿ (ಆರ್ ಟಿಒ) ಸೇವೆಗಳನ್ನು ಒದಗಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಭರವಸೆ ನೀಡಿದ್ದಾರೆ.

ಅಹಮದಾಬಾದ್ ನಗರದಲ್ಲಿ ಆಟೋ ಚಾಲಕರನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿ ಚುನಾವಣೆ ಗೆಲುವಿನಲ್ಲಿ ಆಟೋ ಚಾಲಕರು ಮಹತ್ವದ ಪಾತ್ರ ವಹಿಸಿದ್ದು, ಅದೇ ರೀತಿಯಲ್ಲಿ ಮಾಡಿ, ಪ್ರಯಾಣಿಕರು ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಎಎಪಿ ಬೆಂಬಲಿಸುವಂತೆ ಒತ್ತಾಯಿಸಿದರು. ಕೋವಿಡ್ -19 ಲಾಕ್ ಡೌನ್ ಸಂದರ್ಭದಲ್ಲಿ ದೆಹಲಿಯಲ್ಲಿನ ಸುಮಾರು 1.5 ಲಕ್ಷ ಆಟೋ ಡ್ರೈವರ್ ಗಳಿಗೆ ತಮ್ಮ ಸರ್ಕಾರ ತಲಾ 5,000 ರೂ. ಪಾವತಿಸಿದೆ ಎಂದು ತಿಳಿಸಿದರು.

ದೆಹಲಿಯಲ್ಲಿ, ಪರವಾನಗಿ ನವೀಕರಣ, ಮಾಲೀಕತ್ವದ ಬದಲಾವಣೆ, ಪರವಾನಗಿ ಕೆಲಸಗಳಿಗಾಗಿ ನೀವು ಆರ್ ಟಿಒ (ಪ್ರಾದೇಶಿಕ ಸಾರಿಗೆ ಕಚೇರಿ) ಗೆ ಹೋಗಬೇಕಾಗಿಲ್ಲ. ನಾವು ಫೋನ್ ಸಂಖ್ಯೆಯನ್ನು ನೀಡಿದ್ದೇವೆ. ಕರೆ ಮಾಡಿದರೆ ದೆಹಲಿ ಸರ್ಕಾರಿ ಅಧಿಕಾರಿ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ.  ನೀವು ಫೋನ್‌ನಲ್ಲಿ ಪಿಜ್ಜಾವನ್ನು ಆರ್ಡರ್ ಮಾಡುವ ರೀತಿಯಲ್ಲಿಯೇ ನಿಮ್ಮ ಪರವಾನಗಿಯನ್ನು ನವೀಕರಿಸಲಾಗುತ್ತದೆ. ಇದರಿಂದ ಲಂಚಗುಳಿತನ ತಪ್ಪಲಿದೆ. ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಲಂಚವಾಗಿ ನೀಡುವ ಹಣವು ಉಳಿತಾಯವಾಗಲಿದೆ  ಎಂದು ಅವರು ಹೇಳಿದರು. 

ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರ ಅಡಿಯಲ್ಲಿ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಕೆಲವು ಆಟೋ-ರಿಕ್ಷಾ ಚಾಲಕರು ಹೇಳಿದ್ದಾರೆ. ದಿಲ್ಲಿಯಲ್ಲಿ ಕೂಡಾ ಈ ಸೆಕ್ಷನ್ ನ್ನು ಕಿರುಕುಳಕ್ಕಾಗಿ ಬಳಸಲಾಗಿತ್ತು. ಈ ಸೆಕ್ಷನ್ ಏನು ಎಂಬುದು ನನಗೆ ತಿಳಿದಿದೆ. ಆರೋಪಿಯಾಗಿರಲಿ ಅಥವಾ ಇಲ್ಲದಿರಲಿ ಅವರು ಬೋಗಸ್ ಪ್ರಕರಣಗಳನ್ನು ಮಾಡುತ್ತಾರೆ. ಅವರನ್ನು ಕೊಲೆಗಾರರಂತೆ ನಡೆಸಿಕೊಳ್ಳುತ್ತಾರೆ. ಆಟೋ ಚಾಲಕರನ್ನು ನಾನು  ಸೆಕ್ಷನ್ 188 ರಿಂದ ಮುಕ್ತಗೊಳಿಸಿದ್ದೇನೆ ಮತ್ತು ಗುಜರಾತ್‌ನಲ್ಲಿ ಅದೇ ರೀತಿ ಮಾಡುತ್ತೇನೆ ಎಂದರು. 

ಗುಜರಾತ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಪ್ರಯೋಜನವನ್ನು ಆಟೋರಿಕ್ಷಾ ಚಾಲಕರು  ಪಡೆಯುತ್ತಾರೆ ಎಂದು ಅವರು ಹೇಳಿದರು. 300 ಯೂನಿಟ್ ವರೆಗೂ ಉಚಿತ ವಿದ್ಯುತ್ ನೆರವನ್ನು ಆಟೋ ಚಾಲಕರಿಗೆ ನೀಡಲಾಗುವುದು, ಇದರಿಂದ ಅವರು ಹಣ ಉಳಿಸುತ್ತಾರೆ ಎಂದು ಎಎಪಿ ನಾಯಕ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com