ಜ್ಞಾನವಾಪಿ ಪ್ರಕರಣ: 1993 ರವರೆಗೆ ಮಸೀದಿ ಆವರಣದಲ್ಲಿ ಪೂಜೆ ನಡೆಯುತ್ತಿದ್ದ ಬಗ್ಗೆ ಸಾಕ್ಷ್ಯ ನೀಡಿ; ಕೋರ್ಟ್ ನಿರ್ದೇಶನ

ವಾರಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಡಾ.ಎ.ಕೆ.ವಿಶ್ವೇಶ ಅವರು 1993ರ ವರೆಗೆ ಮಸೀದಿ ಆವರಣದಲ್ಲಿದ್ದ ದೇವತೆಗಳ ಆರಾಧನೆ ನಡೆದಿದೆ ಎಂಬ ಬಗ್ಗೆ ದೃಢೀಕರಿಸಲು ಪುರಾವೆಗಳನ್ನು ಸಲ್ಲಿಸುವಂತೆ  ಅರ್ಜಿ ದಾರರಿಗೆ ಸೂಚಿಸಿದ್ದಾರೆ.
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ

ಲಕ್ನೋ:  ವಾರಣಾಸಿಯ ಜ್ಞಾನವಾಪಿ ಮಸೀದಿಯ ಹೊರಗಿನ ಗೋಡೆಯಲ್ಲಿ ಹಿಂದೂ ದೇವರ ಮೂರ್ತಿಗಳಿದ್ದು, ಅವುಗಳಿಗೆ ಪೂಜೆ ಸಲ್ಲಿಸಲು ಕೋರಿ ಐವರು ಮಹಿಳೆಯರು  ಸಲ್ಲಿಸಿದ್ದ ಅರ್ಜಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದ್ದು, ವಾರಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಡಾ.ಎ.ಕೆ.ವಿಶ್ವೇಶ ಅವರು 1993ರ ವರೆಗೆ ಮಸೀದಿ ಆವರಣದಲ್ಲಿದ್ದ ದೇವತೆಗಳ ಆರಾಧನೆ ನಡೆದಿದೆ ಎಂಬ ಬಗ್ಗೆ ದೃಢೀಕರಿಸಲು ಪುರಾವೆಗಳನ್ನು ಸಲ್ಲಿಸುವಂತೆ  ಅರ್ಜಿ ದಾರರಿಗೆ ಸೂಚಿಸಿದ್ದಾರೆ.

1991 ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯಿಂದ ಅರ್ಜಿದಾರರ ಮೊಕದ್ದಮೆಯನ್ನು ನಿರ್ಬಂಧಿಸಲಾಗಿಲ್ಲ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದು, ಮಸೀದಿ ಆಸ್ತಿಯಲ್ಲಿ  ವಿವಿಧ ದೇವತೆಗಳಿಗೆ ಸಲ್ಲಿಸಿರುವ ಪೂಜೆ ಆಚರಣೆಗಳ ಇತಿಹಾಸ ಹಾಗೂ ಸಾಕ್ಷ್ಯ ನೀಡುವಂತೆ ನಿರ್ದೇಶನ ನೀಡಿದ್ದಾರೆ.

ಆಗಸ್ಟ್ 15, 1947 ರ ನಂತರ 1993 ರ ನಂತರವೂ ಶೃಂಗಾರ ಗೌರಿ, ಗಣೇಶ, ಹನುಮಾನ್  ದೇವರ ದರ್ಶನ ಮತ್ತು ಪೂಜೆಯನ್ನು ಮಾಡಲು ಅವಕಾಶವಿದೆ ಎಂದು ನ್ಯಾಯಾಧೀಶರು ಪ್ರತಿಪಾದಿಸಿದ್ದಾರೆ. ಈಶಾನ್ಯ ಮೂಲೆಯಲ್ಲಿರುವ ಜ್ಞಾನವಾಪಿಯ ಹಿಂಭಾಗದಲ್ಲಿರುವ ಆಸ್ತಿಯೊಳಗೆ ಪ್ರತಿದಿನ ಗೋಚರ ಮತ್ತು ಅಗೋಚರವಾಗಿರುವ ಇತರ ದೇವತೆಗಳಿಗೆ ಮಸೀದಿ ಆವರಣದಲ್ಲಿರುವ ಹಳೆಯ ದೇವಾಲಯದ ಗೋಡೆಗಳಲ್ಲಿ ಹಿಂದೂ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಆದರೆ ವಾರಣಾಸಿ ಜಿಲ್ಲಾಡಳಿತವು ಚೈತ್ರ ಮಾಸದಲ್ಲಿ ನಡೆಯುವ ವಾಸಂತಿಕ ನವರಾತ್ರಿಯ ನಾಲ್ಕನೇ ದಿನವನ್ನು ಹೊರತುಪಡಿಸಿ  ಉಳಿದ ಎಲ್ಲಾ ದಿನಗಳಲ್ಲಿ ವಿವಾದಿತ ಆಸ್ತಿಯೊಳಗೆ ಪ್ರವೇಶವನ್ನು ನಿರ್ಬಂಧಿಸಿತು.  1991ರ ಪೂಜಾ ಸ್ಥಳಗಳ ಕಾಯ್ದೆಯ ಪ್ರಕಾರ ದೇಶದಲ್ಲಿರುವ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆಯ ಸ್ಥಳಗಳು 1947ರ ಆಗಸ್ಟ್ 15ರಂದು ಹೇಗಿತ್ತೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು ಎಂದಿದೆ.

ಈ ಹಂತದಲ್ಲಿ ಅರ್ಜಿದಾರರು ಸಮರ್ಪಕವಾದ ಸಾಕ್ಷ್ಯಗಳನ್ನು ನೀಡಿ ಸಾಬೀತು ಪಡಿಸಬೇಕು ಎಂದು ಕೋರ್ಟ್ ಸೂಚಿಸಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ, ಅವರು 1993 ರವರೆಗೆ ಮಸೀದಿ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ ದೇವತೆಗಳಿಗೆ ನಡೆಸುತ್ತಿದ್ದ ಪೂಜೆ ಮತ್ತು ಆಚರಣೆಗಳ ಬಗ್ಗೆ ನ್ಯಾಯಾಲಯಕ್ಕೆ ಅಗತ್ಯವಿರುವ ಸಾಕ್ಷ್ಯವನ್ನು ಹಾಜರುಪಡಿಸುತ್ತಾರೆ ಎಂದು ಅರ್ಜಿ ದಾರರ ಪರ ವಕೀಲರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com