ಗೋವಾ: ಬಿಜೆಪಿಯೊಂದಿಗೆ ಸ್ಥಳೀಯ ಕಾಂಗ್ರೆಸ್ ಶಾಸಕಾಂಗ ಪಕ್ಷ ವಿಲೀನಕ್ಕೆ ಸ್ಪೀಕರ್ ಅನುಮೋದನೆ!
ಗೋವಾ ಕಾಂಗ್ರೆಸ್ ನ 11 ಶಾಸಕರ ಪೈಕಿ 8 ಶಾಸಕರು ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕಾಂಗ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗಿದೆ.
Published: 15th September 2022 01:12 PM | Last Updated: 15th September 2022 02:33 PM | A+A A-

ಬಿಜೆಪಿ-ಕಾಂಗ್ರೆಸ್ ಲೋಗೋ
ಪಣಿಜಿ: ಗೋವಾ ಕಾಂಗ್ರೆಸ್ ನ 11 ಶಾಸಕರ ಪೈಕಿ 8 ಶಾಸಕರು ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕಾಂಗ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗಿದೆ.
8 ಶಾಸರು ಸೇರ್ಪಡೆಗೊಂಡ ಮರುದಿನವೇ ಈ ಬೆಳವಣಿಗೆಯಾಗಿದ್ದು, ಗೋವಾ ಸ್ಪೀಕರ್ ರಮೇಶ್ ತಾವಡ್ಕರ್ ವಿಲೀನ ಪ್ರಕ್ರಿಯೆಯನ್ನು ಅನುಮೋದಿಸಿದ್ದಾರೆ.
ಇದನ್ನೂ ಓದಿ: ಎಂಟು ಕಾಂಗ್ರೆಸ್ ಶಾಸಕರು ಯಾವುದೇ ಷರತ್ತುಗಳಿಲ್ಲದೆ ಬಿಜೆಪಿ ಸೇರಿದ್ದಾರೆ: ಗೋವಾ ಸಿಎಂ ಪ್ರಮೋದ್ ಸಾವಂತ್
ಕಾಂಗ್ರೆಸ್ ಶಾಸಕರು ತಮಗೆ ಪತ್ರ ನೀಡಿದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡುವುದಕ್ಕೆ ಅಗತ್ಯವಿರುವ ಸಂಖ್ಯೆ ತಮ್ಮ ಬಳಿ ಇದೆ ಎಂದು ಹೇಳಿದ್ದರು. ಈ ಆಧಾರದಲ್ಲಿ ವಿಲೀನಕ್ಕೆ ಅನುಮೋದನೆ ನೀಡಿರುವುದಾಗಿ ಸ್ಪೀಕರ್ ಹೇಳಿದ್ದಾರೆ.