ನ್ಯಾಯಾಂಗ ನಿಂದನೆ ಪ್ರಕರಣ: ಯುಟ್ಯೂಬರ್ ಸವುಕ್ಕು ಶಂಕರ್​​ಗೆ 6 ತಿಂಗಳು ಜೈಲು ಶಿಕ್ಷೆ

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಇಂದು ಯುಟ್ಯೂಬರ್ ಸವುಕ್ಕು ಶಂಕರ್ ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಸವುಕ್ಕು ಶಂಕರ್​​
ಸವುಕ್ಕು ಶಂಕರ್​​

ಚೆನ್ನೈ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಇಂದು ಯುಟ್ಯೂಬರ್ ಸವುಕ್ಕು ಶಂಕರ್ ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 

ಇಡೀ ಉನ್ನತ ನ್ಯಾಯಾಂಗವು ಭ್ರಷ್ಟಾಚಾರದಿಂದ ಕೂಡಿದೆ ಎಂದು ಹೇಳಿಕೆ ನೀಡಿದ್ದಕ್ಕಾಗಿ ಯೂಟ್ಯೂಬರ್ ವಿರುದ್ಧ ಸ್ವಯಂ ಪ್ರೇರಿತವಾಗಿ ನಿಂದನೆ ಮೊಕದ್ದಮೆ ದಾಖಲಾಗಿತ್ತು. ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ಅವರು ಶಂಕರ್ ತಮ್ಮ ಶಿಕ್ಷೆಯನ್ನು ಸ್ಥಗಿತಗೊಳಿಸುವಂತೆ ಕೋರಿದ್ದು ಮನವಿಯನ್ನು ನಿರಾಕರಿಸಿದೆ. 

ಯುಟ್ಯೂಬರ್ ಶಂಕರ್ ಇಂದು ಹೈಕೋರ್ಟ್‌ನ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ಬಿ ಪುಗಲೇಂಧಿ ಮಧುರೈ ಪೀಠದ ಮುಂದೆ ಹಾಜರಾಗಿದ್ದು ನ್ಯಾಯಾಂಗವು 'ಭ್ರಷ್ಟಾಚಾರದಿಂದ ಕೂಡಿದೆ' ಎಂಬ ತಮ್ಮ ಹೇಳಿಕೆಯಿಂದ ತಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com