ತಿಮ್ಮಪ್ಪನ ದರ್ಶನ ಪಡೆದ ಮುಕೇಶ್ ಅಂಬಾನಿ: ದೇವಸ್ಥಾನಕ್ಕೆ 1.5 ಕೋಟಿ ರೂ. ದೇಣಿಗೆ!
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಇಂದು ಆಂಧ್ರಪ್ರದೇಶದ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದ ಅವರು ದೇವಸ್ಥಾನಕ್ಕೆ 1.5 ಕೋಟಿ ರೂ. ದೇಣಿಗೆ ನೀಡಿದ್ದಾರೆ.
Published: 16th September 2022 08:03 PM | Last Updated: 16th September 2022 08:03 PM | A+A A-

ಮುಖೇಶ್ ಅಂಬಾನಿ
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಇಂದು ಆಂಧ್ರಪ್ರದೇಶದ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದ ಅವರು ದೇವಸ್ಥಾನಕ್ಕೆ 1.5 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಏಷ್ಯಾದ ಅತಿದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ಅವರು, ದೇವಸ್ಥಾನವನ್ನು ನಿರ್ವಹಿಸುವ ಸ್ವಾತನಯಾತ್ರೆ ಟ್ರಸ್ಟ್ ಗೆ 1.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ತಿರುಮಲದ ರಂಗನಾಯಕ ಮಂಟಪದಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಅವರಿಗೆ ಅಂಬಾನಿ ಡಿಮ್ಯಾಂಡ್ ಡ್ರಾಫ್ಟ್ ಹಸ್ತಾಂತರಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖೇಶ್ ಅಂಬಾನಿ, ತಿರುಮಲಕ್ಕೆ ಭೇಟಿ ನೀಡಲು ನನಗೆ ತುಂಬಾ ಸಂತೋಷವಾಗಿದೆ. ಅಲ್ಲದೆ ಎಲ್ಲರಿಗೂ ವೆಂಕಟೇಶ್ವರ ಸ್ವಾಮಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. ಮುಖೇಶ್ ಅಂಬಾನಿ ತಿರುಮಲ ದೇವಸ್ಥಾನ ಭೇಟಿ ವೇಳೆ ಸಂಸದ ಗುರುಮೂರ್ತಿ, ವಿಜಯಸಾಯಿ ರೆಡ್ಡಿ, ಚಂದ್ರಗಿರಿ ಶಾಸಕ ಸಿ ಭಾಸ್ಕರ್ ರೆಡ್ಡಿ ಸಹ ಉಪಸ್ಥಿತರಿದ್ದರು.