ದೆಹಲಿ ಏಮ್ಸ್ ಮರುನಾಮಕರಣ ವಿರೋಧಿಸಿ ಕೇಂದ್ರ ಸಚಿವರಿಗೆ ಪತ್ರ ಬರೆದ ಸಿಬ್ಬಂದಿ

ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್)ಗೆ ಹೊಸ ಹೆಸರಿಡುವ ಪ್ರಸ್ತಾಪದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಏಮ್ಸ್ ನ ಫ್ಯಾಕಲ್ಟಿ ಅಸೋಸಿಯೇಷನ್, ಈ ಸಂಬಂಧ ​​ಕೇಂದ್ರ ಆರೋಗ್ಯ ಸಚಿವ ಮನ್ಸುಖ್...
ಏಮ್ಸ್ (ಸಂಗ್ರಹ ಚಿತ್ರ)
ಏಮ್ಸ್ (ಸಂಗ್ರಹ ಚಿತ್ರ)
Updated on

ನವದೆಹಲಿ: ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್)ಗೆ ಹೊಸ ಹೆಸರಿಡುವ ಪ್ರಸ್ತಾಪದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಏಮ್ಸ್ ನ ಫ್ಯಾಕಲ್ಟಿ ಅಸೋಸಿಯೇಷನ್, ಈ ಸಂಬಂಧ ​​ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಪತ್ರ ಬರೆದಿದ್ದು, ಇದು ಸಂಸ್ಥೆಯ ಗುರುತನ್ನು ಕಳೆದುಕೊಳ್ಳುತ್ತದೆ ಎಂದು ಪ್ರತಿಪಾದಿಸಿದೆ.

ದೇಶದಾದ್ಯಂತ ಇರುವ ಎಲ್ಲಾ 23 ಏಮ್ಸ್  ಆಸ್ಪತ್ರೆಗಳಿಗೆ ಹೊಸ ಹೆಸರುಗಳನ್ನು ನೀಡುವ ಸರ್ಕಾರದ ಪ್ರಸ್ತಾವನೆಯ ಕುರಿತು ಫ್ಯಾಕಲ್ಟಿ ಅಸೋಸಿಯೇಷನ್ ​​ಆಫ್ ಏಮ್ಸ್ ಇತ್ತೀಚೆಗೆ ಅಧ್ಯಾಪಕರ ಅಭಿಪ್ರಾಯವನ್ನು ಕೇಳಿತ್ತು. ಗುರುವಾರ ಸಚಿವರಿಗೆ ಎಫ್‌ಎಐಎಂಎಸ್ ಬರೆದ ಪತ್ರದ ಪ್ರಕಾರ ದೆಹಲಿಯ ಏಮ್ಸ್ ಹೆಸರನ್ನು ಬದಲಾಯಿಸುವುದನ್ನು ಅಧ್ಯಾಪಕರು ವಿರೋಧಿಸಿದ್ದಾರೆ.

ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ರೋಗಿಗಳ ಆರೈಕೆಗಾಗಿ ಟ್ರಿನಿಟಿ ಮಿಷನ್‌ನೊಂದಿಗೆ ದೆಹಲಿಯ AIIMS ಅನ್ನು 1956 ರಲ್ಲಿ ಸ್ಥಾಪಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಹೆಸರಿನೊಂದಿಗೆ ಅದರ ಗುರುತನ್ನು ಜೋಡಿಸಲಾಗಿದೆ. ಗುರುತನ್ನು ಕಳೆದುಕೊಂಡರೆ, ದೇಶದ ಒಳಗೆ ಮತ್ತು ಹೊರಗೆ ಸಾಂಸ್ಥಿಕ ಮಾನ್ಯತೆ ಕಳೆದುಹೋಗುತ್ತದೆ. ಅದಕ್ಕಾಗಿಯೇ ಪ್ರಸಿದ್ಧ ಮತ್ತು ಸ್ಥಾಪಿತ ಸಂಸ್ಥೆಗಳು ಶತಮಾನಗಳಿಂದ ಒಂದೇ ಹೆಸರನ್ನು ಹೊಂದಿವೆ  ಎಂದು ಆಕ್ಸ್ ಫರ್ಡ್, ಕೇಂಬ್ರಿಡ್ಜ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯಗಳ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತಾವನೆಯನ್ನು ಅಂಗೀಕರಿಸಿದರೆ, ಖ್ಯಾತ ವೈದ್ಯಕೀಯ ಸಂಸ್ಥೆಯು ತನ್ನ ಗುರುತಿನ ನಷ್ಟ ಮತ್ತು ನಿರುತ್ಸಾಹವನ್ನು ಎದುರಿಸಬೇಕಾಗುತ್ತದೆ ಎಂದು FAIMS ಎಚ್ಚರಿಸಿದೆ. ಆದ್ದರಿಂದ, AIIMS ದೆಹಲಿಯ ಹೆಸರನ್ನು ಬದಲಾಯಿಸುವ ಯಾವುದೇ ಪ್ರಸ್ತಾಪವನ್ನು ದಯವಿಟ್ಟು ಪರಿಗಣಿಸಬೇಡಿ ಎಂದು  ಫ್ಯಾಕಲ್ಟಿ ಅಸೋಸಿಯೇಷನ್ ಮನವಿ ಮಾಡಿದೆ. ಇದು ದೇಶದ ಇತರರಿಗೆ ಸಂಬಂಧಿಸಿದಂತೆ ದೆಹಲಿಯ ಏಮ್ಸ್ ನ ಪ್ರಧಾನ ಮತ್ತು ಮಾರ್ಗದರ್ಶಕ ಸಂಸ್ಥೆಯ ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸ್ಥಳೀಯ ಅಥವಾ ಪ್ರಾದೇಶಿಕ ಪ್ರಮುಖ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು, ಐತಿಹಾಸಿಕ ಘಟನೆಗಳು ಅಥವಾ ಆ ಪ್ರದೇಶದ ಸ್ಮಾರಕಗಳು ಅಥವಾ ವಿಶಿಷ್ಟ ಭೌಗೋಳಿಕ ಗುರುತನ್ನು ಆಧರಿಸಿ ದೆಹಲಿ ಸೇರಿದಂತೆ ಎಲ್ಲಾ ಏಮ್ಸ್ ಗೆ ನಿರ್ದಿಷ್ಟ ಹೆಸರುಗಳನ್ನು ನೀಡುವ ಪ್ರಸ್ತಾವನೆಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ಸಿದ್ಧಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com