ಮಧ್ಯ ಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನು ಬಿಟ್ಟ ಪ್ರಧಾನಿ ಮೋದಿ; ಕೆಲ ತಿಂಗಳು ತೀವ್ರ ನಿಗಾ

ನೈರುತ್ಯ ಆಫ್ರಿಕಾದ ನಮೀಬಿಯಾ ದೇಶದಿಂದ ಇಂದು ಶನಿವಾರ ವಿಶೇಷ ವಿಮಾನದಲ್ಲಿ ಕರೆತರಲಾದ ಚೀತಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೊರಗೆ ಬಿಟ್ಟಿದ್ದಾರೆ.
ಚೀತಾಗಳನ್ನು ಬಿಡುಗಡೆ ಮಾಡಿ ಫೋಟೋ ಕ್ಲಿಕ್ಕಿಸಿದ ಪ್ರಧಾನಿ ಮೋದಿ
ಚೀತಾಗಳನ್ನು ಬಿಡುಗಡೆ ಮಾಡಿ ಫೋಟೋ ಕ್ಲಿಕ್ಕಿಸಿದ ಪ್ರಧಾನಿ ಮೋದಿ

ಗ್ವಾಲಿಯರ್(ಮಧ್ಯ ಪ್ರದೇಶ): ನೈರುತ್ಯ ಆಫ್ರಿಕಾದ ನಮೀಬಿಯಾ ದೇಶದಿಂದ ಇಂದು ಶನಿವಾರ ವಿಶೇಷ ವಿಮಾನದಲ್ಲಿ ಕರೆತರಲಾದ ಚೀತಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೊರಗೆ  ಬಿಟ್ಟಿದ್ದಾರೆ.

ಕುನೋ ಉದ್ಯಾನವನದಲ್ಲಿ 8 ಚೀತಾಗಳನ್ನು ಹೊರಗೆ ಬಿಟ್ಟ ನಂತರ ಪ್ರಧಾನ ಮಂತ್ರಿಗಳು ತಮ್ಮ ಕ್ಯಾಮರಾದಲ್ಲಿ ಅವುಗಳು ಅಡ್ಡಾಡುವುದನ್ನು ಸೆರೆಹಿಡಿದು ಸಂಭ್ರಮಿಸಿದ್ದಾರೆ. 

ಈ ಮೂಲಕ ನಮೀಬಿಯಾದ 5 ಹೆಣ್ಣು ಮತ್ತು 3 ಗಂಡು ಚೀತಾಗಳು ಸರಿಸುಮಾರು 7 ದಶಕಗಳ ನಂತರ ಭಾರತಕ್ಕೆ ಮರುಪರಿಚಯವಾಗುತ್ತಿದೆ. ಕುನೋ ಪಾರ್ಕ್ ನಲ್ಲಿ ಚೀತಾಗಳಿಗೆ ವಿಶೇಷ ಆರೈಕೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 3 ತಿಂಗಳ ಕಾಲ ತೀವ್ರ ನಿಗಾದಲ್ಲಿ ಇರಿಸಲಾಗುತ್ತದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆಯೇ ಎಂದು ನೋಡಲಾಗುತ್ತದೆ. 

ಭಾರತದ ವನ್ಯಜೀವಿ ರಕ್ಷಣೆಯಲ್ಲಿ ಸರ್ಕಾರದ ಹೊಸ ಪ್ರಯತ್ನ ಇದಾಗಿದ್ದು, ಚೀತಾಗಳು ಭಾರತಕ್ಕೆ ಹೊಂದಿಕೊಂಡರೆ ಮುಂದಿನ ಜನಾಂಗಕ್ಕೆ ಚೀತಾಗಳನ್ನು ನೋಡಲು ಅನುಕೂಲವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com