ದೇಶದಲ್ಲಿ ಕಾನೂನು ನೆರವು ಕಾರ್ಯ ನಿರ್ಲಕ್ಷ್ಯ: ಸಿಜೆಐ ಯುಯು ಲಲಿತ್
ದೇಶದಲ್ಲಿ ಕಾನೂನು ನೆರವಿನ ಕೆಲಸ ನಿರ್ಲಕ್ಷ್ಯಕ್ಕೊಳಗಾಗಿದೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ಹೇಳಿದ್ದಾರೆ. ಇಂತಹ ಸೇವೆಗಳನ್ನು ನೀಡಲು ಕಾನೂನು ವಿದ್ಯಾರ್ಥಿಗಳು ತಮ್ಮ ಸಮಯವನ್ನು ಮೀಸಲಿಡುವಂತೆ ಅವರು ಒತ್ತಾಯಿಸಿದ್ದಾರೆ.
Published: 18th September 2022 11:39 AM | Last Updated: 18th September 2022 12:21 PM | A+A A-

ಸಿಜೆಐ ಯುಯು ಲಲಿತ್
ಕಟಕ್: ದೇಶದಲ್ಲಿ ಕಾನೂನು ನೆರವಿನ ಕೆಲಸ ನಿರ್ಲಕ್ಷ್ಯಕ್ಕೊಳಗಾಗಿದೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ಹೇಳಿದ್ದಾರೆ. ಇಂತಹ ಸೇವೆಗಳನ್ನು ನೀಡಲು ಕಾನೂನು ವಿದ್ಯಾರ್ಥಿಗಳು ತಮ್ಮ ಸಮಯವನ್ನು ಮೀಸಲಿಡುವಂತೆ ಅವರು ಒತ್ತಾಯಿಸಿದ್ದಾರೆ.
ಇಲ್ಲಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದೂವರೆ ವರ್ಷದಿಂದ ಕಾನೂನು ನೆರವಿನ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಪ್ರಕಾರ ಇದು ದೂರು ಅಥವಾ ಅಗೌರವ ತೋರಿಸುವುದು ಎನ್ನಿಸಲಿಲ್ಲ. ಆದರೆ, ದೇಶದಲ್ಲಿ ಕಾನೂನು ನೆರವಿನ ಕಾರ್ಯ ನಿರ್ಲಕ್ಷ್ಯಕ್ಕೊಳಗಾಗಿದೆ. ಇದರ ವಿಸ್ತರಣೆಗೆ ಚಿಂತಿಸಬೇಕಾಗಿದೆ. ಅದಕ್ಕಾಗಿ ಸಮಯ ಮೀಸಲಿಡಬೇಕಾಗಿದೆ ಎಂದು ಅವರು ಹೇಳಿದರು.
ಹೊಣೆಗಾರಿಕೆಯೊಂದಿಗೆ ದಬ್ಬಾಳಿಕೆಯನ್ನು ತಡೆಯಲು ಕಾನೂನು ಪ್ರಯತ್ನಿಸುತ್ತದೆ ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.