ಜಮ್ಮು-ಕಾಶ್ಮೀರ: ಶಂಕಿತ ಡ್ರೋನ್ ಹಾರಾಟ, ತೀವ್ರ ಶೋಧ ಕಾರ್ಯಾಚರಣೆ

ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿನ  ಅನೇಕ ಗ್ರಾಮಗಳಲ್ಲಿ ಶಂಕಿತ ಡ್ರೋನ್ ಹಾರಾಟದ ಮಾಹಿತಿ ತಿಳಿದುಬಂದ ನಂತರ ಪೊಲೀಸರು ಹಾಗೂ ಸಿಆರ್ ಪಿಎಫ್ ನಿಂದ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಡ್ರೋನ್ ಸಾಂದರ್ಭಿಕ ಚಿತ್ರ
ಡ್ರೋನ್ ಸಾಂದರ್ಭಿಕ ಚಿತ್ರ

ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿನ  ಅನೇಕ ಗ್ರಾಮಗಳಲ್ಲಿ ಶಂಕಿತ ಡ್ರೋನ್ ಹಾರಾಟದ ಮಾಹಿತಿ ತಿಳಿದುಬಂದ ನಂತರ ಪೊಲೀಸರು ಹಾಗೂ ಸಿಆರ್ ಪಿಎಫ್ ನಿಂದ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಆದಾಗ್ಯೂ, ಶನಿವಾರ ರಾತ್ರಿ 7-30 ರಿಂದ ಇಂದು ಬೆಳಗ್ಗೆ 9 ಗಂಟೆಯವರೆಗೂ ನಡೆದ ಕಾರ್ಯಾಚರಣೆ ವೇಳೆಯಲ್ಲಿ ಯಾವುದೇ ಡ್ರೋನ್  ಪತ್ತೆಯಾಗಿಲ್ಲ ಎಂದು ಉಪ ಪೊಲೀಸ್ ಮಹಾನಿರ್ದೇಶಕ ಗಾರು ರಾಮ್ ಭಾರದ್ವಾಜ್ ಹೇಳಿದ್ದಾರೆ.

ಸಾಂಬಾ ಜಿಲ್ಲೆಯ ದಕ್ಷಿಣ ಭಾಗದಲ್ಲಿನ 10 ಕಿಲೋ ಮೀಟರ್ ದೂರದಲ್ಲಿರುವ ಗಡಿ ಭಾಗದ ಹಳ್ಳಿಗಳಲ್ಲಿ  ಶನಿವಾರ ರಾತ್ರಿ 7-25 ರ ಸುಮಾರಿನಲ್ಲಿ ಪಾಕಿಸ್ತಾನಕ್ಕೆ ಸೇರಿದ ಡ್ರೋನ್ ವೊಂದು ಹಾರಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೂಡಲೇ ಜಂಟಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.

ತಡರಾತ್ರಿಯವರೆಗೂ ನಡೆದ ಶೋಧ ಕಾರ್ಯಾಚರಣೆ ಇಂದು ಕೂಡಾ ಬೆಳಗ್ಗೆಯವರೆಗೂ ಮುಂದುವರೆಯಿತು ಎಂದು ಶೋಧ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com