ಐಸಿಎಂಆರ್ ನೂತನ ಮಹಾನಿರ್ದೇಶಕರಾಗಿ ಡಾ. ರಾಜೀವ್ ಬಹ್ಲ್ ನೇಮಕ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ(ಐಸಿಎಂಆರ್) ನೂತನ ಮಹಾನಿರ್ದೇಶಕರಾಗಿ ಮತ್ತು ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯಾಗಿ ಡಾ.ರಾಜೀವ್ ಬಹ್ಲ್ ಅವರನ್ನು ಮೂರು...
ಡಾ. ರಾಜೀವ್ ಬಹ್ಲ್
ಡಾ. ರಾಜೀವ್ ಬಹ್ಲ್

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ(ಐಸಿಎಂಆರ್) ನೂತನ ಮಹಾನಿರ್ದೇಶಕರಾಗಿ ಮತ್ತು ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯಾಗಿ ಡಾ.ರಾಜೀವ್ ಬಹ್ಲ್ ಅವರನ್ನು ಮೂರು ವರ್ಷಗಳ ಅವಧಿಗೆ ಶುಕ್ರವಾರ ನೇಮಕ ಮಾಡಲಾಗಿದೆ.

ರಾಜೀವ್ ಬಹ್ಲ್ ಪ್ರಸ್ತುತ ಜಿನೀವಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ(WHO) ತಾಯ್ತನ, ನವಜಾತ ಶಿಶು ಮತ್ತು ಹದಿಹರೆಯದವರ ಆರೋಗ್ಯ ಇಲಾಖೆ ಘಟಕದ ಮುಖ್ಯಸ್ಥರಾಗಿದ್ದಾರೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, "ಮೂರು ವರ್ಷಗಳ ಅವಧಿಗೆ ಐಸಿಎಂಆರ್ ಮಹಾನಿರ್ದೇಶಕರಾಗಿ ಮತ್ತು ಸೆಕ್ರೆಟರಿ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ರಿಸರ್ಚ್ ಡೈರೆಕ್ಟರ್ ಜನರಲ್ ಆಗಿ ಡಾ.ರಾಜೀವ್ ಬಹ್ಲ್ ಅವರನ್ನು ನೇಮಕ ಮಾಡಲು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ."

ಹಿಂದಿನ ಐಸಿಎಂಆರ್ ಮಹಾನಿರ್ದೇಶಕ ಮತ್ತು ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯಾಗಿದ್ದ ಡಾ ಬಲರಾಮ್ ಭಾರ್ಗವ ಅವರ ವಿಸ್ತೃತ ಅಧಿಕಾರಾವಧಿಯು ಕಳೆದ ಜುಲೈನಲ್ಲಿ ಕೊನೆಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com