ರೆಸಾರ್ಟ್‌ ರಿಸೆಪ್ಶನಿಸ್ಟ್ ಹತ್ಯೆ ಪ್ರಕರಣ: ಐಟಿಐ ಘಾಟ್‌ನಲ್ಲಿ ನಡೆದ ಅಂಕಿತಾ ಅಂತ್ಯಸಂಸ್ಕಾರ!

ಅಂಕಿತಾ ಭಂಡಾರಿ ಅವರ ಅಂತ್ಯಕ್ರಿಯೆ ಇಂದು ಸಂಜೆ ಐಟಿಐ ಘಾಟ್‌ನಲ್ಲಿ ಭಾರೀ ಪೊಲೀಸ್ ಭದ್ರತೆಯ ನಡುವೆ ನೆರವೇರಿತು. 
ಅಂತ್ಯಸಂಸ್ಕಾರ
ಅಂತ್ಯಸಂಸ್ಕಾರ

ಡೆಹ್ರಾಡೂನ್: ಅಂಕಿತಾ ಭಂಡಾರಿ ಅವರ ಅಂತ್ಯಕ್ರಿಯೆ ಇಂದು ಸಂಜೆ ಐಟಿಐ ಘಾಟ್‌ನಲ್ಲಿ ಭಾರೀ ಪೊಲೀಸ್ ಭದ್ರತೆಯ ನಡುವೆ ನೆರವೇರಿತು. 

ತುಂಬಾ ದುಃಖದ ವಾತಾವರಣದಲ್ಲಿ ಅಂಕಿತಾಳ ಅಣ್ಣ ಅಜಯ್ ತಂಗಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಇದಕ್ಕೂ ಮುನ್ನ, ಶ್ರೀನಗರ ವೈದ್ಯಕೀಯ ಕಾಲೇಜಿನ ಶವಾಗಾರದಿಂದ ಭಾರೀ ಪ್ರತಿಭಟನೆಯ ನಡುವೆ ಅಂಕಿತಾ ಶವವನ್ನು ಆಂಬ್ಯುಲೆನ್ಸ್‌ನಲ್ಲಿ ಐಟಿಐ ಘಾಟ್‌ಗೆ ಕೊಂಡೊಯ್ಯುವಾಗ ಪೊಲೀಸರು ಪ್ರತಿಭಟನಾಕಾರರೊಂದಿಗೆ ಘರ್ಷಣೆ ನಡೆಸಿದರು. 

ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಜನರು ಮತ್ತು ಅಂಕಿತಾ ಗ್ರಾಮದ ದೋಬ್ ಶ್ರೀಕೋಟ್‌ನ ಜನರು ಸಹ ಭಾಗವಹಿಸಿದ್ದರು. ಈ ವೇಳೆ ಪ್ರತಿಭಟನಾಕಾರರೊಂದಿಗೆ ಪೊಲೀಸರೊಂದಿಗೆ ಮಾತಿನ ಚಕಮಕಿಯೂ ನಡೆಯಿತು. ಬಿಗಿ ವಾತಾವರಣದ ನಡುವೆ, ಪೊಲೀಸರು ಅಂಕಿತಾ ಅವರ ಮೃತದೇಹವನ್ನು ಆಂಬ್ಯುಲೆನ್ಸ್‌ ಮೂಲಕ ಐಟಿಐ ಘಾಟ್‌ಗೆ ಕೊಂಡೊಯ್ಯಲಾಯಿತು. 

ಅಂಕಿತಾ ಶವ ಶನಿವಾರ ಬೆಳಗ್ಗೆ ಋಷಿಕೇಶದ ಸಮೀಪವಿರುವ ಚೀಲಾ ಕಾಲುವೆ ಬಳಿ ಸಿಕ್ಕಿತ್ತು. ಆಕೆ ಕಾಣೆಯಾದ ಬಗ್ಗೆ ದೂರು ನೀಡಿದ ಆರು ದಿನಗಳ ನಂತರ ಮೃತದೇಹ ಪತ್ತೆಯಾಗಿತ್ತು. 

ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ಬಿಜೆಪಿಯ ಉಚ್ಚಾಟಿತ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಒಡೆತನದ ರಿಷಿಕೇಶದಲ್ಲಿರುವ ವನತಾರಾ ರೆಸಾರ್ಟ್‌ಗೆ ಸ್ಥಳೀಯರು ಬೆಂಕಿ ಹಚ್ಚಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com