ಆಗ್ರಾ: ರಾಮ ನವಮಿಯಂದು ಕೋಮುಗಲಭೆ ಪ್ರಚೋದಿಸಲು ಬಿಹೆಚ್ ಎಂ ಕಾರ್ಯಕರ್ತರಿಂದ ಗೋಹತ್ಯೆ- ಪೊಲೀಸರು

ಮಾರ್ಚ್ 30 ರಂದು ರಾಮನವಮಿ ಆಚರಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿ ಸೌಹಾರ್ದ ವಾತಾವರಣವನ್ನು ಹಾಳು ಮಾಡಲು ಮತ್ತು ಕೋಮುಗಲಭೆಯನ್ನು ಪ್ರಚೋದಿಸಲು ಭಾರತ್ ಹಿಂದೂ ಮಹಾಸಭಾ (ಬಿಎಚ್‌ಎಂ) ನ ಕೆಲವು ಸದಸ್ಯರು ಗೋಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ  ಬಹಿರಂಗಪಡಿಸಿದ್ದಾರೆ.
ಎರಡು ಗುಂಪಿನ ನಡುವೆ ಸಂಭವಿಸಿದ ಹಿಂಸಾಚಾರದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿರುವ ಚಿತ್ರ
ಎರಡು ಗುಂಪಿನ ನಡುವೆ ಸಂಭವಿಸಿದ ಹಿಂಸಾಚಾರದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿರುವ ಚಿತ್ರ
Updated on

ಲಖನೌ: ಮಾರ್ಚ್ 30 ರಂದು ರಾಮನವಮಿ ಆಚರಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿ ಸೌಹಾರ್ದ ವಾತಾವರಣವನ್ನು ಹಾಳು ಮಾಡಲು ಮತ್ತು ಕೋಮುಗಲಭೆಯನ್ನು ಪ್ರಚೋದಿಸಲು ಭಾರತ್ ಹಿಂದೂ ಮಹಾಸಭಾ (ಬಿಎಚ್‌ಎಂ) ನ ಕೆಲವು ಸದಸ್ಯರು ಗೋಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ಬಹಿರಂಗಪಡಿಸಿದ್ದಾರೆ.

ರಾಮನವಮಿಯಂದು ಗೋಹತ್ಯೆ ಆರೋಪದ ಮೇಲೆ ಇಬ್ಬರು ಯುವಕರನ್ನು ಆಗ್ರಾ ಪೊಲೀಸರು ಬಂಧಿಸಿದ್ದರು. ಆಗ್ರಾದ ಗೌತಮ್ ನಗರದ ಎತ್ಮದುದ್ದೌಲಾ ಪ್ರದೇಶದಲ್ಲಿ  ದಾಳಿ ನಡೆಸಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಷಡ್ಯಂತ್ರದಲ್ಲಿ ಭಾಗಿಯಾಗಿರುವ ಇತರರಿಗಾಗಿ ಹುಡುಕಾಟ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಸಂಜಯ್ ಜಾಟ್ ಪ್ರಮುಖ ಸಂಚುಕೋರರಾಗಿದ್ದಾರೆ. ಅವರು ಕೆಲವು ಭಾರತ್ ಹಿಂದೂ ಮಹಾಸಭಾ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳೊಂದಿಗೆ ಸಂಚು ರೂಪಿಸಿದ್ದು, ನಂತರ ಬಿಹೆಚ್ ಎಂ ನ ಜಿತೇಂದ್ರ ಕುಶ್ವಾಹ  ದಾಖಲಿಸಿದ ಎಫ್‌ಐಆರ್‌ನಲ್ಲಿ ಅವರನ್ನು ಎದುರಾಳಿಯಾಗಿ ಉಲ್ಲೇಖಿಸಲಾಗಿತ್ತು. 

ಸಂಜಯ್ ಜಾಟ್ ತನ್ನ ಅನುಯಾಯಿಗಳು ಮತ್ತು ಸ್ನೇಹಿತರೊಂದಿಗೆ ಮಾರ್ಚ್ 29 ರ ರಾತ್ರಿ ಮೆಹ್ತಾಬ್ ಬಾಗ್ ಪ್ರದೇಶದಲ್ಲಿ ಗೋ ಹತ್ಯೆ ಮಾಡಿದ್ದು, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನಕಿಮ್ ಮತ್ತು ಮೊಹಮ್ಮದ್ ಶಾನು ವಿರುದ್ಧ ಪ್ರಕರಣ ದಾಖಲಿಸುವಂತೆ ಪಕ್ಷದ ಸದಸ್ಯ ಜಿತೇಂದ್ರ ಕುಶ್ವಾಹಾಗೆ ಹೇಳಿದ್ದು, ರಾಮನವಮಿ ದಿನದಂದು ಕುಶ್ವಾಹಾ ಎತ್ಮದುದ್ದೌಲಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ತನಿಖೆಯ ನಂತರ, ಇದೊಂದು ಕಟ್ಟ ಕಥೆಯಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಕೆಲವರೊಂದಿಗೆ ಸಂಜಯ್‌ಗೆ ದ್ವೇಷವಿತ್ತು ಮತ್ತು ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಬಯಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಫ್ ಐಆರ್ ನಲ್ಲಿ ಹೆಸರಿಸಲಾದ ವ್ಯಕ್ತಿಗಳನ್ನು ಬಂಧಿಸುವಂತೆ ಕೋರಿ ಕುಶ್ವಾಹಾ ಎರಡು ಬಾರಿ ಪೊಲೀಸ್ ಠಾಣೆಗೆ ಮುತ್ತಿಗೆ ಕೂಡಾ ಹಾಕಿದ್ದ ಎನ್ನಲಾಗಿದೆ. 

ಎಫ್‌ಐಆರ್‌ನಲ್ಲಿ ಹೆಸರಿಸಲಾದ ವ್ಯಕ್ತಿಗಳಿಗೂ ಗೋಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಆಗ್ರಾ ಡಿಸಿಪಿ ಸೂರಜ್ ರೈ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com