ಉಚಿತ ಕೊಡುಗೆಗಳಿಂದ ಪಂಜಾಬ್ ನಲ್ಲಿ ವಿತ್ತೀಯ ಕೊರತೆ ಹೆಚ್ಚಳ: ವರದಿ

ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರದ ಉಚಿತ ಕೊಡುಗೆಗಳಿಂದ ಪಂಜಾಬ್‌ ಈಗಾಗಲೇ ಆರ್ಥಿಕವಾಗಿ ಹೆಚ್ಚು ಒತ್ತಡದಲ್ಲಿರುವ ರಾಜ್ಯಗಳಲ್ಲಿ ಒಂದಾಗಿದ್ದು, ಈ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿ...
ಭಗವಂತ್ ಮಾನ್
ಭಗವಂತ್ ಮಾನ್

ಮುಂಬೈ: ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರದ ಉಚಿತ ಕೊಡುಗೆಗಳಿಂದ ಪಂಜಾಬ್‌ ಈಗಾಗಲೇ ಆರ್ಥಿಕವಾಗಿ ಹೆಚ್ಚು ಒತ್ತಡದಲ್ಲಿರುವ ರಾಜ್ಯಗಳಲ್ಲಿ ಒಂದಾಗಿದ್ದು, ಈ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

2023-24ನೇ ಸಾಲಿನ ಪಂಜಾಬ್ ಬಜೆಟ್‌ನ ಇಂಡಿಯಾ ರೇಟಿಂಗ್ಸ್ ವಿಶ್ಲೇಷಣೆಯ ಪ್ರಕಾರ, ಭಗವಂತ್ ಮಾನ್ ಸರ್ಕಾರವು 33,216 ಕೋಟಿ ರೂಪಾಯಿಗಳ ವಿತ್ತೀಯ ಕೊರತೆಯೊಂದಿಗೆ ವರ್ಷ ಅಂತ್ಯಗೊಳ್ಳುವ ಸಾಧ್ಯತೆಯಿದೆ. ಇದು ಜಿಎಸ್ ಡಿಪಿಯ ಶೇ. 5.3 ಅಥವಾ ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ 23,835 ರೂ. ಕೋಟಿ ಅಥವಾ ಶೇ. 3.8 ರಷ್ಟು ಆಗಲಿದೆ.

ಇದರೊಂದಿಗೆ ಶೇ. 5 ರಷ್ಟು ವಿತ್ತೀಯ ಕೊರತೆಯೊಂದಿಗೆ ಆರ್ಥಿಕ ವರ್ಷವನ್ನು ಅಂತ್ಯಗೊಳಿಸುವ ರಾಜ್ಯಗಳಲ್ಲಿ ಪಂಜಾಬ್ ಅಗ್ರಸ್ಥಾನದಲ್ಲಿದೆ.

ಕೇಂದ್ರ ಸರ್ಕಾರ ವಾರ್ಷಿಕವಾಗಿ ಜಿಎಸ್ ಡಿಪಿಯ ಶೇ. 3 ರಷ್ಟು ಮಾತ್ರ ಸಾಲ ಪಡೆಯಲು ರಾಜ್ಯಗಳಿಗೆ ಅನುಮತಿಸುತ್ತದೆ ಮತ್ತು ವಿದ್ಯುತ್ ವಿತರಣೆ ಹಾಗೂ ಸಾರ್ವಜನಿಕ ಸಾರಿಗೆ ವಲಯಗಳಲ್ಲಿ ಕೆಲವು ಸುಧಾರಣೆಗಳನ್ನು ಪೂರೈಸಲು ಹೆಚ್ಚುವರಿಯಾಗಿ 50 ಬಿಪಿಎಸ್ ಅನ್ನು ನೀಡುತ್ತದೆ.

ಪಂಜಾಬ್‌ನ ಹಣಕಾಸಿನ ಕೊರತೆ ಮಧ್ಯಮ ಅವಧಿಯಲ್ಲೂ ಮುಂದುವರಿಯುತ್ತದೆ ಮತ್ತು ಆರ್ಥಿಕವಾಗಿ ಹೆಚ್ಚು ಒತ್ತಡದ ರಾಜ್ಯಗಳಲ್ಲಿ ಒಂದಾಗಿ ಉಳಿಯುತ್ತದೆ ಎಂದು ಇಂಡಿಯಾ ರೇಟಿಂಗ್ಸ್ ಸಂಸ್ಥೆಯ  ಹಿರಿಯ ನಿರ್ದೇಶಕ ಸುನಿಲ್ ಕುಮಾರ್ ಸಿನ್ಹಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com